Viral: ಸ್ವಂತ ಕಂಪನಿಯಲ್ಲಿ ಕೆಲಸಕ್ಕಾಗಿ 2 ಗಂಟೆ ಸರತಿ ಸಾಲಿನಲ್ಲಿ ನಿಂತಿದ್ದ ಈ ಬಿಲಿಯನೇರ್, ಯಾಕೆ ಗೊತ್ತಾ?

ಅಮೇರಿಕಾದ ಬಿಲಿಯನೇರ್ ಮಹಿಳೆಯೊಬ್ಬರು  ಸಂದರ್ಶನವೊಂದರಲ್ಲಿ,  ತನ್ನ 17 ನೇ ವಯಸ್ಸಿನಲ್ಲಿ ತಮ್ಮದೇ ಸ್ವಂತ  ಕಂಪೆನಿಯಲ್ಲಿ ಉದ್ಯೋಗವನ್ನು ಪಡೆಯಲು ಸಂದರ್ಶನಕ್ಕಾಗಿ ಎರಡು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತಿದ್ದರು ಎಂದು ತಮ್ಮ ಸಾಧನೆಯ ಕಠಿಣ ಹಾದಿಯನ್ನು ಕ್ರಮಿಸಿದ ಕಥೆಯನ್ನು  ಹೇಳಿಕೊಂಡಿದ್ದಾರೆ.  

Viral: ಸ್ವಂತ ಕಂಪನಿಯಲ್ಲಿ ಕೆಲಸಕ್ಕಾಗಿ 2 ಗಂಟೆ ಸರತಿ ಸಾಲಿನಲ್ಲಿ ನಿಂತಿದ್ದ ಈ ಬಿಲಿಯನೇರ್, ಯಾಕೆ ಗೊತ್ತಾ?
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 15, 2024 | 5:22 PM

ಅಮೇರಿಕದ ಇನ್-ಎನ್-ಔಟ್ ಬರ್ಗರ್ ಕಂಪೆನಿಯ   ಉತ್ತರಾಧಿಕಾರಿಯಾದ  ಬಿಲಿಯನೇರ್ ಲಿನ್ಸಿ ಸ್ನೈಡರ್  ಇತ್ತೀಚಿಗೆ ಸಂದರ್ಶನೊಂದರಲ್ಲಿ ತಮ್ಮ ಸಾಧನೆಯ ಕಠಿಣ ಹಾದಿಯ ಬಗ್ಗೆ ಹಂಚಿಕೊಂಡಿದ್ದು, ತನ್ನ ಹದಿಹರೆಯದ ವಯಸ್ಸಿನಲ್ಲಿ ತಮ್ಮದೇ ಸ್ವಂತ ಕಂಪನಿಯಲ್ಲಿ ಉದ್ಯೋಗವನ್ನು  ಗಿಟ್ಟಿಸಿಕೊಳ್ಳಲು ಜಾಬ್ ಸಂದರ್ಶನಕ್ಕಾಗಿ 2 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತಿದ್ದೆ ಎಂಬುದನ್ನು ಹೇಳಿಕೊಂಡಿದ್ದಾರೆ.

ಫೋರ್ಬ್ಸ್ ವರದಿಯ ಪ್ರಕಾರ ಪ್ರಸ್ತುತ 41 ವರ್ಷ ವಯಸ್ಸಿನ ಲಿನ್ಸಿ ಸ್ನೈಡರ್ 2024 ರಲ್ಲಿ $6.7 ಡಾಲರ್ ನಿವ್ವಳ ಮೌಲ್ಯದೊಂದಿಗೆ ಅಮೇರಿಕಾದ ಬಿಲಿಯನೇರ್ ಗಳಲ್ಲಿ  ಒಬ್ಬರಾದ್ದಾರೆ. ಆದರೆ ಇವರ ಈ ಸಾಧನೆಯ ಹಾದಿಯು ತುಂಬಾನೇ ಕಠಿಣವಾಗಿತ್ತು. ಅಜ್ಜನ ಕಂಪನಿಯ ಮಾಲೀಕರಾಗಿ ತನ್ನ ಯೋಗ್ಯತೆಯನ್ನು ಪ್ರದರ್ಶಿಸುವ ಸಲುವಾಗಿ ಲಿನ್ಸಿ 17 ನೇ ವಯಸ್ಸಿನಲ್ಲಿ ತನ್ನ ಸ್ವಂತ ಕಂಪೆನಿಯಲ್ಲಿ ಸಾಮಾನ್ಯ ಉದ್ಯೋಗಿಯಾಗಿ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿದರು.

ತನ್ನ ಉಪನಾಮವನ್ನು ಮರೆಮಾಚಿ ಉದ್ಯೋಗವನ್ನು ಗಿಟ್ಟಿಸಿಕೊಂಡ ಸ್ನೈಡರ್  ಈರುಳ್ಳಿಯನ್ನು ಕತ್ತರಿಸುವುದರಿಂದ ಹಿಡಿದು ಸೊಪ್ಪುಗಳನ್ನು ವಿಂಗಡಿಸುವುದರವರೆಗೆ ತನ್ನ ಸ್ವಂತ ಕಂಪನಿಯಲ್ಲಿ ಸಣ್ಣ ಪುಟ್ಟ ಕೆಲಸವನ್ನು ಸಹ ಮಾಡಿದ್ದಾರೆ.  ನಂತರ 2010 ರಲ್ಲಿ ತನ್ನ 27 ವಯಸ್ಸಿನಲ್ಲಿ ಸ್ನೈಡರ್ ತನ್ನ ಅಜ್ಜ 1948 ರಲ್ಲಿ ಪ್ರಾರಂಭಿಸಿದ ಕಂಪೆನಿಯ ನಾಯಕತ್ವವನ್ನು ವಹಿಸಿಕೊಂಡರು.

ಇದನ್ನೂ ಓದಿ: ವಿಷಕಾರಿ ಸರ್ಪದೊಂದಿಗೆ ಗೆಳೆಯನಿಗಾಗಿ ಹೋರಾಟ ಮಾಡಿದ ಅಳಿಲು , ಮುಂದೇನಾಯ್ತು ನೋಡಿ

ಸ್ನೈಡರ್ ಅವರ ಅಜ್ಜ ಹ್ಯಾರಿ ಸ್ನೈಡರ್ ಡಿಸೆಂಬರ್ 1976 ರಲ್ಲಿ ನಿಧನರಾದರು, ನಂತರ ಅವರ ಪುತ್ರರಾದ ರಿಚ್ ಮತ್ತು ಗೈ ಕಂಪನಿಯನ್ನು ನಡೆಸಲು ಆರಂಭಿಸಿದರು. ಲಿನ್ಸಿಯ ಚಿಕ್ಕಪ್ಪ ರಿಚ್ ಸ್ನೈಡರ್, 1993 ರಲ್ಲಿ ಆರೆಂಜ್ ಕೌಂಟಿಯಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು ಮತ್ತು ಆಕೆಯ ತಂದೆ 1999 ರಲ್ಲಿ ನಿಧನರಾದರು. ಬಳಿಕ ಕುಟುಂಬದ ಏಕೈಕ ಕುಡಿಯಾಗಿದ್ದ ಲಿನ್ಸಿ ತಮ್ಮ ಬರ್ಗರ್ ಕಂಪನಿಯನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಬೇಕು ಎಂಬ ಕಾರಣದಿಂದ ತನ್ನ 17 ನೇ ವಯಸ್ಸಿನಲ್ಲಿ ತಮ್ಮದೇ ಕಂಪನಿಯಲ್ಲಿ ಸಾಮಾನ್ಯ ಉದ್ಯೋಗಿಯಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.  ಇಗೀಗ ಆಕೆ ಕಠಿಣ ಹಾದಿಯನ್ನು ಕ್ರಮಿಸಿ ಅಮೇರಿಕಾದ ಬಿಲಿಯನೇರ್ ಗಳಲ್ಲಿ ಒಬ್ಬರಾಗಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು