ವೈದ್ಯರ ಬಳಿ ಹೋಗಿ ತನ್ನ ಎರಡು ಬೆರಳುಗಳನ್ನು ಕತ್ತರಿಸುವಂತೆ ಹಠ ಹಿಡಿದ ವ್ಯಕ್ತಿ

ಆರೋಗ್ಯದಲ್ಲಿ ಸ್ವಲ್ಪ ಏರು ಪೇರಾದರೂ ವೈದ್ಯರ ಬಳಿಗೆ ಹೋಗುವುದು ಸಾಮಾನ್ಯ. ಆದರೆ ಆರೋಗ್ಯವಂತ ವ್ಯಕ್ತಿಯೊಬ್ಬರು ವೈದ್ಯರ ಬಳಿ ಹೋಗಿ ತನ್ನ ಎರಡು ಬೆರಳುಗಳನ್ನು ಕತ್ತರಿಸುವಂತೆ ಒತ್ತಡ ಹೇರಿರುವ ಘಟನೆ ಕೆನಡಾದಲ್ಲಿ ನಡೆದಿದೆ. ಆ ಬೆರಳುಗಳಿಗೆ ಏನೂ ಆಗಿರಲಿಲ್ಲ, ಎಲ್ಲವೂ ಆರೋಗ್ಯಕರವಾಗಿದ್ದವು, ಆದರೂ ಆತ ಕತ್ತರಿಸುವಂತೆ ಕೇಳಿದ್ದು ವೈದ್ಯರನ್ನು ಬೆಚ್ಚಿಬೀಳಿಸಿತ್ತು.

ವೈದ್ಯರ ಬಳಿ ಹೋಗಿ ತನ್ನ ಎರಡು ಬೆರಳುಗಳನ್ನು ಕತ್ತರಿಸುವಂತೆ ಹಠ ಹಿಡಿದ ವ್ಯಕ್ತಿ
ಕೈ
Follow us
ನಯನಾ ರಾಜೀವ್
|

Updated on: Apr 15, 2024 | 11:40 AM

ಆರೋಗ್ಯದಲ್ಲಿ ಸ್ವಲ್ಪ ಏರು ಪೇರಾದರೂ ವೈದ್ಯರ ಬಳಿಗೆ ಹೋಗುವುದು ಸಾಮಾನ್ಯ. ಆದರೆ ಆರೋಗ್ಯವಂತ ವ್ಯಕ್ತಿಯೊಬ್ಬರು ವೈದ್ಯರ ಬಳಿ ಹೋಗಿ ತನ್ನ ಎರಡು ಬೆರಳುಗಳನ್ನು ಕತ್ತರಿಸುವಂತೆ ಒತ್ತಡ ಹೇರಿರುವ ಘಟನೆ ಕೆನಡಾದಲ್ಲಿ ನಡೆದಿದೆ. ಆ ಬೆರಳುಗಳಿಗೆ ಏನೂ ಆಗಿರಲಿಲ್ಲ, ಎಲ್ಲವೂ ಆರೋಗ್ಯಕರವಾಗಿದ್ದವು, ಆದರೂ ಆತ ಕತ್ತರಿಸುವಂತೆ ಕೇಳಿದ್ದು ವೈದ್ಯರನ್ನು ಬೆಚ್ಚಿಬೀಳಿಸಿತ್ತು.

ಕ್ವಿಬೆಕ್​ನಲ್ಲಿರುವ ವೈದ್ಯರು ನಮಗೆ ಕಣ್ಣಿಗೆ ಕಾಣಿಸದಿರುವುದು ಏನೋ ಇದೆ ಎಂದು ಅರಿತು ಕೈಗಳ ಎಕ್ಸ್​-ರೇ ಕೂಡ ಮಾಡಿದ್ದಾರೆ ಆದರೆ ಅದರಲ್ಲೂ ಯಾವುದೇ ಸಮಸ್ಯೆ ಕಾಣಿಸಲಿಲ್ಲ.

20 ವರ್ಷ ವಯಸ್ಸಿನ ವ್ಯಕ್ತಿಗೆ ತನ್ನ ಎಡಗೈಯಲ್ಲಿ ನಾಲ್ಕು ಮತ್ತು ಐದನೇ ಬೆರಳುಗಳು ನೋಯುತ್ತಿರುವಂತೆ ಭಾಸವಾಗುತ್ತಿತ್ತು. ಅದರ ಜತೆಗೆ ಆ ಬೆರಳುಗಳು ತನ್ನದಲ್ಲವೇನೋ ಎಂದು ಕೂಡ ಅನಿಸುತ್ತಿತ್ತು. ಬೆರಳುಗಳಲ್ಲಿ ತೀವ್ರ ನೋವು, ಸುಟ್ಟ ಅನುಭವ, ಕೊಳೆತಂತೆಲ್ಲಾ ಅನಿಸುತ್ತಿತ್ತು.

ಮತ್ತಷ್ಟು ಓದಿ: ಆನ್​ಲೈನ್​ನಲ್ಲಿ ಕೇವಲ 50 ಸಾವಿರ ರೂ.ಗೆ ದೇಶ ಖರೀದಿಸಿದ ವ್ಯಕ್ತಿ, ಇರೋದು ಒಬ್ಬರೇ, ಪಾಸ್​ಪೋರ್ಟ್​ ಇಲ್ಲದೆ ಪ್ರವೇಶವಿಲ್ಲ

ಬಳಿಕ ಆ ವ್ಯಕ್ತಿ BIID ಎನ್ನುವ ಕಾಯಿಲೆಯಿಂದ ಬಳಲುತ್ತಿರುವುದು ತಿಳಿದುಬಂದಿತ್ತು. ಇದು ಮಾನಸಿಕ ಅಸ್ವಸ್ಥತೆಯಾಗಿದ್ದು, ಈ ಸಮಸ್ಯೆ ಹೊಂದಿರುವವರು ದೇಹದ ಹಲವು ಭಾಗಗಳನ್ನು ತನ್ನದಲ್ಲ, ಅವು ಸರಿ ಇಲ್ಲ ಎಂದೇ ಭಾವಿಸುತ್ತಾರೆ. ಹಾಗೆಯೇ ಆ ಭಾಗಗಳು ದೇಹದ ಭಾಗವಾಗಿರಬಾರದು ಎಂದು ಬಯಸುತ್ತಾರೆ.

ಇದು ತುಂಬಾ ಅಪಾಯಕಾರಿ, ವೈದ್ಯರ ಬಳಿಗೆ ತೆರಳದೇ ತಾನೇ ತಪ್ಪು ಹಾದಿ ತುಳಿಯುವ ಸಾಧ್ಯತೆಯೂ ಹೆಚ್ಚಿರುತ್ತದೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು ಚಿಕಿತ್ಸಾ ಆಯ್ಕೆಗಳು ಕೂಡ ಲಭ್ಯವಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ