Viral Video: ನೀರಿನಿಂದ ಹೊರಬಂದ ಮೀನಿನ ಪ್ರಾಣ ರಕ್ಷಿಸಿದ ಬೆಳ್ಳಕ್ಕಿ; ವಿಡಿಯೋ ಇಲ್ಲಿದೆ ನೋಡಿ
ಕೊಕ್ಕರೆ ಅಥವಾ ಬೆಳ್ಳಕ್ಕಿಗಳು ಹೆಚ್ಚಾಗಿ ಜೌಗು ಪ್ರದೇಶ, ಕೆಸರು ಗದ್ದೆಗಳಲ್ಲಿ, ಕೆರೆಗಳಲ್ಲಿ ಕಪ್ಪೆ, ಏಡಿ ಮೀನುಗಳನ್ನು ತಿನ್ನುತ್ತಾ ಅಲ್ಲೇ ಓಡಾಡುತ್ತಿರುತ್ತವೆ. ಆದರೆ ಇಲ್ಲೊಂದು ಬೆಳ್ಳಕ್ಕಿ ಮಾತ್ರ ನೀರಿನಿಂದ ಹೊರ ಬಂದಂತಹ ಮೀನನ್ನು ತಿನ್ನದೆ, ಅದನ್ನು ವಾಪಸ್ ನೀರಿಗೆ ಬಿಟ್ಟಿದೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ಬೆಳ್ಳಕ್ಕಿಯ ಮಾನವೀಯ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಮನುಷ್ಯರಿಗಿಂತ ಪ್ರಾಣಿ ಪಕ್ಷಿಗಳೇ ಗುಣದಲಿ ಮೇಲು ಎಂದು ಹೇಳಲಾಗುತ್ತದೆ. ಹೌದು ಪಕ್ಷಿ ಪ್ರಾಣಿಗಳಿಗೆ ಹೋಲಿಸಿದರೆ ಮನುಷ್ಯರಲ್ಲಿ ಒಳ್ಳೆಯ ಗುಣ, ಮಾನವೀಯತೆ, ಸಹಾಯ ಮನೋಭಾವ ತುಸು ಕಡಿಮೆಯೇ ಇದೆ. ಹೀಗೆ ಪ್ರಾಣಿಗಳ ಒಳ್ಳೆಯತನ, ಮನುಷ್ಯರ ಕೆಟ್ಟತನವನ್ನು ನೋಡಿದಾಗ ನಿಜಕ್ಕೂ ಮೂಕ ಜೀವಿಗಳೇ ಗುಣದಲ್ಲಿ ಮೇಲು ಅಂತ ಭಾಸವಾಗುತ್ತದೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಜೌಗು ಪ್ರದೇಶ, ನದಿ ನೀರಿನಲ್ಲಿ ಮೀನನ್ನು ತಿಂದು ಬದುಕುವಂತಹ ಬೆಳ್ಳಕ್ಕಿಯೊಂದು ನೀರಿನಿರಿಂದ ಹೊರ ಬಂದಂತಹ ಮೀನನ್ನು ತಿನ್ನದೆ, ಅದನ್ನು ವಾಪಸ್ ನೀರಿನಲ್ಲೇ ಬಿಟ್ಟು ಬಂದಿದೆ. ಇದೀಗ ಕೊಕ್ಕರೆಯ ಮಾನವೀಯ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿದ್ದಾರೆ.
ಈ ವಿಡಿಯೋವನ್ನು ಡಿಸಿ ಸಂಜಯ್ ಕುಮಾರ್ (@dc_sanjay_jas) ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಸಮಯ ಉತ್ತಮವಾಗಿದ್ದಾಗ, ನಿಮ್ಮ ಬದ್ಧ ವೈರಿಗಳೂ ಸಹ ನಿಮ್ಮ ಸಹಾಯಕರಾಗುತ್ತಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
जब समय अच्छा हो तो कट्टर दुश्मन भी आपके मददगार बन जाते हैं ..!! 💕#समय pic.twitter.com/GnjVWtsvE8
— Sanjay Kumar, Dy. Collector (@dc_sanjay_jas) March 12, 2024
ವೈರಲ್ ವಿಡಿಯೋದಲ್ಲಿ ನೀರಿನಿಂದ ಹೊರ ಬಂದಂತಹ ಜೀವಂತ ಮೀನನ್ನು ಕಾಗೆಯೊಂದು ತಿನ್ನಲು ಪ್ರಯತ್ನ ಪಡುತ್ತಿರುವ ದೃಶ್ಯವನ್ನು ಕಾಣಬಹುದು. ಅಲ್ಲಿಗೆ ಬಂದಂತಹ ಬೆಳ್ಳಕ್ಕಿಯೊಂದು ಕಾಗೆಯನ್ನು ಓಡಿಸಿ, ಪಾಪ ಮೀನಿನ ಜೀವ ಉಳಿದರೆ ಸಾಕಪ್ಪಾ ಎನನುತ್ತಾ, ಮೀನನ್ನು ಬಾಯಲ್ಲಿ ಕಚ್ಚಿಕೊಂಡು ಹೋಗಿ ನೀರಲ್ಲಿ ಬಿಟ್ಟು ಬರುತ್ತೆ.
ಇದನ್ನೂ ಓದಿ: 7 ಕೆಜಿ ಚಿನ್ನದಿಂದ ತಯಾರಿಸಿದ ರಾಮಾಯಣ ಪುಸ್ತಕ; ಅಯೋಧ್ಯಾ ರಾಮನಿಗೆ ಸಮರ್ಪಿಸಿದ ನಿವೃತ್ತ ಐಎಎಸ್ ಅಧಿಕಾರಿ
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬೆಳ್ಳಕ್ಕಿಯ ಮಾನವೀಯ ಕಾರ್ಯಕ್ಕೆ ನೋಡುಗರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: