Video Viral: ಕಷ್ಟಪಟ್ಟು ಖರೀದಿಸಿದ ಆಟೋ ಮುಂದೆ ಮಂಡಿಯೂರಿ ಸೆಲ್ಫಿ ಕ್ಲಿಕ್ಕಿಸಿದ ವ್ಯಕ್ತಿ
ಸ್ವಂತ ಆಟೋ ರಿಕ್ಷಾ ಖರೀದಿಸುವ ಕನಸು ಕಂಡಿದ್ದ ವ್ಯಕ್ತಿಯೊಬ್ಬರ ಕನಸು ನನಸಾಗಿದೆ. ಕನಸು ನನಸಾದ ಖುಷಿಯಲ್ಲಿ ಹೊಸ ರಿಕ್ಷಾದ ಮುಂದೆ ಮುಂಡಿಯೂರಿ ಕುಳಿತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕನಸನ್ನು ನನಸಾಗಿಸಲು ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಆ ಸಮಯಕ್ಕಾಗಿ ತಾಳ್ಮೆಯಿಂದ ಕಾಯಬೇಕು. ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಹೌದು ಸ್ವಂತ ಆಟೋ ರಿಕ್ಷಾ ಖರೀದಿಸುವ ಕನಸು ಕಂಡಿದ್ದ ವ್ಯಕ್ತಿಯೊಬ್ಬರ ಕನಸು ನನಸಾಗಿದೆ. ಕನಸು ನನಸಾದ ಖುಷಿಯಲ್ಲಿ ಹೊಸ ರಿಕ್ಷಾದ ಮುಂದೆ ಮುಂಡಿಯೂರಿ ಕುಳಿತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆದ ವಿಡಿಯೋದಲ್ಲಿ ವ್ಯಕ್ತಿ ಹೊಸ ಆಟೋ ರಿಕ್ಷಾ ಖರೀದಿಸಿರುವುದನ್ನು ಕಾಣಬಹುದು. ಈ ಹೊಸ ರಿಕ್ಷಾದೊಂದಿಗೆ ಹೊರಟು, ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ, ನೆಲದ ಮೇಲೆ ಮಂಡಿಯೂರಿ ತನ್ನ ಫೋನ್‌ನಲ್ಲಿ ರಿಕ್ಷಾದೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ. ಅಲ್ಲೇ ಇದ್ದ ಅಪರಿಚಿತ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
अपनी मेहनत से खरीदी हुई चीजों मे एक अलग ही ख़ुशी मिलती है..🥹🛺 pic.twitter.com/vzCSjWOqBp
— ज़िन्दगी गुलज़ार है ! (@Gulzar_sahab) April 10, 2024
ಇದನ್ನೂ ಓದಿ: ವಿಚಿತ್ರ ನಂಬಿಕೆ; ತಮ್ಮ ಇಚ್ಛೆಗೆ ತಕ್ಕ ಗಂಡ ಸಿಗಲು ಯುವತಿಯರು ಇಲ್ಲಿ ಬ್ರಾ ನೇತು ಹಾಕಿ ಹೋಗುತ್ತಾರೆ!
ಈ ವೀಡಿಯೊವನ್ನು X (Twitter) @Gulzar_sahab ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಭಾವುಕರಾಗಿದ್ದಾರೆ. ‘ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ’, ಎಂದು ಹಲವರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ