Shocking: ಕನಸಿನಲ್ಲಿ ದೇವಿ ನರಬಲಿ ಕೇಳಿದಳು ಎಂದು ವ್ಯಕ್ತಿಯ ಹತ್ಯೆಗೈದ ಮಹಿಳೆ

ಆರೋಪಿ ಪ್ರಿಯಾ ಮನೆಯಲ್ಲಿ ಮಹೇಶ್ ಗುಪ್ತಾ ಮೃತದೇಹ ಪೊಲೀಸರಿಗೆ ಪತ್ತೆಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನರಬಲಿಯ ಭಾಗವಾಗಿ ಈ ಕೊಲೆ ಮಾಡಿರುವುದಾಗಿ ತನಿಖೆ ವೇಳೆ ಆಕೆ ಹೇಳಿದ್ದಾಳೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

Shocking: ಕನಸಿನಲ್ಲಿ ದೇವಿ ನರಬಲಿ ಕೇಳಿದಳು ಎಂದು ವ್ಯಕ್ತಿಯ ಹತ್ಯೆಗೈದ ಮಹಿಳೆ
ನರಬಲಿ ಹೆಸರಿನಲ್ಲಿ ವ್ಯಕ್ತಿಯ ಹತ್ಯೆಗೈದ ಮಹಿಳೆ
Follow us
ಅಕ್ಷತಾ ವರ್ಕಾಡಿ
|

Updated on: Apr 14, 2024 | 11:37 AM

ಹರಿಯಾಣ: ಮಹಿಳೆಯೊಬ್ಬಳು ತನ್ನ ಕನಸಿನಲ್ಲಿ ದೇವಿ ಕಾಣಿಸಿಕೊಂಡು ನರಬಲಿ ಕೇಳಿದ್ದಾಳೆ ಎಂದು ತನ್ನ ಸಂಬಂಧಿಕ ವ್ಯಕ್ತಿಯನ್ನೇ ಕೊಂದಿರುವ ಘಟನೆ ಹರ್ಯಾಣದ ಅಂಬಾಲಾದಲ್ಲಿ ನಡೆದಿದೆ. ಹತ್ಯೆಗೈದ ಆರೋಪಿ ಪ್ರಿಯಾ ಮತ್ತು ಹತ್ಯೆಯಾದ ವ್ಯಕ್ತಿ ಮಹೇಶ್ ಗುಪ್ತಾ (44) ಎಂದು ಗುರುತಿಸಲಾಗಿದೆ. ಇವರಿಬ್ಬರು ಹತ್ತಿರದ ಸಂಬಂಧಿಕರು ಎಂದು ತನಿಖೆಯ ವೇಳೆ ತಿಳಿದುಬಂದಿದೆ.

ಆರೋಪಿ ಪ್ರಿಯಾ ಮನೆಯಲ್ಲಿ ಮಹೇಶ್ ಗುಪ್ತಾ ಮೃತದೇಹ ಪೊಲೀಸರಿಗೆ ಪತ್ತೆಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನರಬಲಿಯ ಭಾಗವಾಗಿ ಈ ಕೊಲೆ ಮಾಡಿರುವುದಾಗಿ ತನಿಖೆ ವೇಳೆ ಆಕೆ ಹೇಳಿದ್ದಾಳೆ . ಇದಲ್ಲದೇ ಕೊನೆಗೆ ಆಕೆಗೆ ಸಹಾಯ ಮಾಡಿದ ಆಕೆಯ ಸಂಬಂಧಿಕರಾದ ಹೇಮಂತ್ ಮತ್ತು ಪ್ರೀತಿ ಅವರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

ಮೃತ ವ್ಯಕ್ತಿ ಮಹೇಶ್ ಗುಪ್ತಾ ದಿನಸಿ ಅಂಗಡಿಯನ್ನು ಇಟ್ಟುಕೊಂಡಿದ್ದರು. ಈ ದಿನಸಿ ಅಂಗಡಿಯಲ್ಲೇ ಪ್ರಿಯಾ ಕೆಲಕಾಲ ಕೆಲಸ ಮಾಡಿದ್ದಳು. ಇತ್ತೀಚೆಗಷ್ಟೇ ಪ್ರಿಯಾ ಮಹೇಶ್ ಬಳಿ ಮನೆಗೆ ಸಾಮಾನು ತಂದು ಕೊಡುವಂತೆ ಹೇಳಿದ್ದಾಳೆ. ಬುಧವಾರ ಪ್ರಿಯಾ ಮನೆಗೆ ಸಾಮಾನು ಕೊಡಲು ಹೋಗಿದ್ದ ಮಹೇಶ್​​ನನ್ನು ಪ್ರಿಯಾ ಆಕೆಯ ಮೂವರು ಸಹಚರರು ಸೇರಿ ಕೊಲೆ ಮಾಡಿದ್ದಾರೆ.

ಇದನ್ನೂ ಓದಿ: ವಿಚಿತ್ರ ನಂಬಿಕೆ; ತಮ್ಮ ಇಚ್ಛೆಗೆ ತಕ್ಕ ಗಂಡ ಸಿಗಲು ಯುವತಿಯರು ಇಲ್ಲಿ ಬ್ರಾ ನೇತು ಹಾಕಿ ಹೋಗುತ್ತಾರೆ!

ಆರೋಪಿ ಪ್ರಿಯಾ ಮನೆಯ ಮುಂದೆ ಮೃತ ಮಹೇಶ್ ಬೈಕ್ ಪತ್ತೆಯಾಗಿದ್ದು, ಮೃತನ ಸಂಬಂಧಿಕರಿಗೆ ಅನುಮಾನ ಹುಟ್ಟಿಕೊಂಡು ಅಲ್ಲಿಗೆ ತೆರಳಿದ್ದಾರೆ. ಬಾಗಿಲು ತಟ್ಟಿದರೂ ಪ್ರತಿಕ್ರಿಯೆ ಬಾರದ ಕಾರಣ ಬಾಗಿಲು ಒಡೆದು ಒಳ ಪ್ರವೇಶಿಸಿದ್ದಾರೆ. ಆ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಹೇಶ್ ನನ್ನು ನೆಲದ ಮೇಲೆ ಎಳೆದೊಯ್ಯುತ್ತಿರುವುದನ್ನು ಕುಟುಂಬಸ್ಥರು ಕಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಪೊಲೀಸರು ಮಧ್ಯ ಪ್ರವೇಶಿಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ