Viral Video: ತರಕಾರಿಯಂತೆ ಕೆಜಿ ಕೆಜಿ ಲೆಕ್ಕದಲ್ಲಿ ಮ್ಯಾಗಿ ಮಾರಾಟ; ವಿಡಿಯೋ ವೈರಲ್​​

ಈ ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತಳ್ಳುವ ಗಾಡಿಯಲ್ಲಿ ಮ್ಯಾಗಿ ಮಾರುತ್ತಿರುವುದನ್ನು ತೋರಿಸಲಾಗಿದೆ. ಗಾಡಿಯ ಮೇಲೆ ಮ್ಯಾಗಿಯ ರಾಶಿಯನ್ನು ಕಾಣಬಹುದು. ಸದ್ಯ, ಬಂಡಿಯಲ್ಲಿ ಮ್ಯಾಗಿಯ ಮಾರಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Viral Video: ತರಕಾರಿಯಂತೆ ಕೆಜಿ ಕೆಜಿ ಲೆಕ್ಕದಲ್ಲಿ ಮ್ಯಾಗಿ ಮಾರಾಟ; ವಿಡಿಯೋ ವೈರಲ್​​
ತರಕಾರಿಯಂತೆ ಕೆಜಿ ಕೆಜಿ ಲೆಕ್ಕದಲ್ಲಿ ಮ್ಯಾಗಿ ಮಾರಾಟImage Credit source: Instagram
Follow us
ಅಕ್ಷತಾ ವರ್ಕಾಡಿ
|

Updated on: Mar 15, 2024 | 12:15 PM

ಸಾಮಾನ್ಯವಾಗಿ , 10 ರೂಪಾಯಿಯ ಪ್ಯಾಕೆಟ್ ಗಳಲ್ಲಿ ಮಾರುವ ಮ್ಯಾಗಿಯನ್ನು ನೀವು ನೋಡಿರುತ್ತೀರಿ. ಆದರೆ ಎಂದಾದರೂ ಮ್ಯಾಗಿಯನ್ನು ತರಕಾರಿಯಂತೆ ಗಾಡಿಯಲ್ಲಿ ರಾಶಿ ರಾಶಿಯಾಗಿ ಮಾರುವುದನ್ನು ನೋಡಿದ್ದೀರಾ? ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮ್ಯಾಗಿ ಮಾರುತ್ತಿರುವ ರೀತಿ ನೋಡಿದ್ರೆ ಶಾಕ್ ಆಗ್ತೀರಾ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತಳ್ಳುವ ಗಾಡಿಯಲ್ಲಿ ಮ್ಯಾಗಿ ಮಾರುತ್ತಿರುವುದನ್ನು ತೋರಿಸಲಾಗಿದೆ. ಗಾಡಿಯ ಮೇಲೆ ಮ್ಯಾಗಿಯ ರಾಶಿಯನ್ನು ಕಾಣಬಹುದು. ಕೆಜಿ ಕೆಜಿ ಲೆಕ್ಕದಲ್ಲಿ ಮಾರಾಟ ಮಾಡಿ ಮ್ಯಾಗಿ ಜೊತೆಗೆ ಮ್ಯಾಗಿ ಮಸಾಲಾ ಪ್ಯಾಕೆಟ್ ಅನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಗ್ರಾಹಕರಿಗೆ ನೀಡುತ್ತಿರುವುದನ್ನು ಕಾಣಬಹುದು. ಸದ್ಯ, ಬಂಡಿಯಲ್ಲಿ ಮ್ಯಾಗಿಯ ಮಾರಾಟದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: 7ನೇ ವಯಸ್ಸಿಗೆ ಶಸ್ತ್ರ ಚಿಕಿತ್ಸೆ ಮಾಡಿ, ವಿಶ್ವದ ಅತ್ಯಂತ ಕಿರಿಯ ಸರ್ಜನ್ ಎಂಬ ಹೆಗ್ಗಳಿಕೆಗೆ ಪಾತ್ರನಾದ ಅಕ್ರಿತ್

ಈ ವೀಡಿಯೊವನ್ನು @chatore_broothers ಎಂಬ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದುವರೆಗೆ 43 ಮಿಲಿಯನ್​​​ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್​ ಮಾಡಿದ್ದಾರೆ. ಸಾಕಷ್ಟು ನೆಟ್ಟಿಗರು “ಇದು ಅವಧಿ ಮೀರಿದ ಮ್ಯಾಗಿ” ಎಂದು ಕಾಮೆಂಟ್​​ ಮಾಡಿದ್ದಾರೆ . ಮತ್ತೊಬ್ಬರು ” ಮ್ಯಾಗಿಯ ಜೊತೆಗೆ ಧೂಳು, ಮಾಲಿನ್ಯ ಎಲ್ಲವೂ ಫ್ರೀ, ಕ್ಯಾನ್ಸರ್​​​ ಖಚಿತ “ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಏಳು ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಮತ್ತು ಐದು ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ