Coffee Maggi: ನೀವು ಕಾಫಿ ಮ್ಯಾಗಿಯನ್ನು ಎಂದಾದರೂ ಸವಿದಿದ್ದೀರಾ? ಈ ವಿಡಿಯೋ ನೋಡಿ

ಇತ್ತೀಚೆಗಿನ ದಿನಗಳಲ್ಲಿ ವಿಯರ್ಡ್ ಫುಡ್ ಕಾಂಬಿನೇಶನ್ ವಿಚಿತ್ರ ಆಹಾರ ಪದಾರ್ಥಗಳ ವಿಡಿಯೋಗಳು ಸೋಶಿಯಲ್ ಮೀಡಿಯಾ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅದರಲ್ಲಿ ಆಹಾರ ಪದಾರ್ಥಗಳಲ್ಲಿ ನಾನಾ ರೀತಿಯ ಪ್ರಯೋಗಗಳನ್ನು ಮಾಡಿ ನೆಟ್ಟಿಗರ ಗಮನ ಸೆಳೆಯುವ ಪ್ರಯತ್ನಗಳು ನಡೆಯುತ್ತಿದೆ. ಇದೀಗ ಕಾಫಿ ಮ್ಯಾಗಿಯನ್ನು ತಯಾರಿಸುವ ವಿಡಿಯೋವೊಂದು ವೈರಲ್ ಆಗಿದ್ದು, ಬೀದಿ ಬದಿಯ ವ್ಯಾಪಾರಿಯೊಬ್ಬರು ಕಾಫಿ ಮ್ಯಾಗಿಯನ್ನು ತಯಾರಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಾಫಿ ಮ್ಯಾಗಿ ರೆಸಿಪಿಯನ್ನು ಇಷ್ಟ ಪಟ್ಟಿಲ್ಲ.

Coffee Maggi: ನೀವು ಕಾಫಿ ಮ್ಯಾಗಿಯನ್ನು ಎಂದಾದರೂ ಸವಿದಿದ್ದೀರಾ? ಈ ವಿಡಿಯೋ ನೋಡಿ
ಕಾಫಿ ಮ್ಯಾಗಿ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 13, 2024 | 10:37 AM

ಮಕ್ಕಳಿಂದ ಹಿಡಿದು ವೃದ್ಧವರೆಗೂ ಮ್ಯಾಗಿ ಅಚ್ಚುಮೆಚ್ಚಿನ ತಿಂಡಿ. ಹೀಗಾಗಿ ಬಹುತೇಕರು ಸಂಜೆಯ ಕಾಫಿಯ ಜೊತೆಗೆ ಏನಾದರೂ ತಿನ್ನಲು ಬಯಸಿದರೆ ಐದು ನಿಮಿಷದಲ್ಲಿ ತಯಾರಾಗುವ ಮ್ಯಾಗಿಯನ್ನು ಮಾಡಿ ಸವಿಯುತ್ತಾರೆ. ಕೆಲವೇ ಕ್ಷಣದಲ್ಲಿ ಸಿದ್ಧವಾಗುವ ಈ ಮ್ಯಾಗಿಯನ್ನು ನಾನಾ ರೀತಿಯಲ್ಲಿ ಕೂಡ ಮಾಡಬಹುದು. ಇತ್ತೀಚೆಗಿನ ದಿನಗಳಲ್ಲಿ ಐದು ನಿಮಿಷದಲ್ಲಿ ತಯಾರಿಸಬಹುದಾದ ಮ್ಯಾಗಿಯನ್ನು ಬಳಸಿ ನಾನಾ ರೀತಿಯ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಕಾಫಿ ಮ್ಯಾಗಿ ತಯಾರಿಸುವ ವಿಡಿಯೋವೊಂದು ವೈರಲ್ ಆಗಿದೆ.

ಬೀದಿ ಬದಿಯ ವ್ಯಾಪಾರಿಯೊಬ್ಬರು ಕಾಫಿ ಮ್ಯಾಗಿಯನ್ನು ತಯಾರಿಸಿ ಬಳಕೆದಾರನಿಗೆ ಸವಿಯಲು ನೀಡಿದ್ದಾನೆ. ಮೊದಲಿಗೆ ಈ ಮ್ಯಾಗಿಯ ಹೊಸ ಪ್ರಯೋಗವನ್ನು ಸವಿಯಲು ನಿರಾಕರಿಸಿದರಾದರೂ ಆ ಬಳಿಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕಾಫಿ ಮ್ಯಾಗಿ ತಯಾರಿಸುವ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಮ್ ಫುಡ್ ಪೇಜ್‌ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಯೊಂದಿಗೆ , ‘ರಸ್ತೆಬದಿ ವ್ಯಾಪಾರಿಯೊಬ್ಬರು ಈ ವಿಶಿಷ್ಟ ಖಾದ್ಯವನ್ನು ಮಾಡಿರುವುದು ಭಾರತೀಯ ಇತಿಹಾಸದಲ್ಲಿ ಇದೇ ಮೊದಲು’ ಎಂದು ಬರೆದುಕೊಂಡು ಶೇರ್ ಮಾಡಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋವು ಬೀದಿ ಬದಿ ವ್ಯಾಪಾರಿಯು ಹಾಲನ್ನು ಕುದಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಆ ಬಳಿಕ ಪುಡಿಮಾಡಿದ ಮ್ಯಾಗಿಯೊಂದಿಗೆ ಟೊಮ್ಯಾಟೊ, ದೊಣ್ಣೆ ಮೆಣಸು, ಈರುಳ್ಳಿಯನ್ನು ಸೇರಿಸಿದ್ದಾನೆ. ಆ ಬಳಿಕ ಮ್ಯಾಗಿ ಮಸಾಲೆಯನ್ನು ಸೇರಿಸಿ ಎಲ್ಲವನ್ನು ಮಿಶ್ರಣ ಮಾಡಿಕೊಳ್ಳುತ್ತಾನೆ. ಇದಕ್ಕೆ ಒಂದು ಚಮಚ ಕಾಫಿ ಪುಡಿಯನ್ನು ಸೇರಿಸಿದ ಬಳಿಕ ಇಷ್ಟಕ್ಕೆ ಆತನ ಪ್ರಯೋಗವು ನಿಂತಿಲ್ಲ. ಕೊನೆಗೆ ಅರಶಿನ ಪುಡಿಯನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳುತ್ತಾನೆ. ಮ್ಯಾಗಿ ಬೆಂದ ಬಳಿಕ ಬಡಿಸಿ ವ್ಯಕ್ತಿಗೆ ಸವಿಸಲು ನೀಡುತ್ತಾನೆ.

ಇದನ್ನೂ ಓದಿ: ಕೆಮ್ಮು ನೆಗಡಿ ಸಮಸ್ಯೆಗೆ ಈ ಮನೆ ಮದ್ದು ಪರಿಹಾರ, ಇಲ್ಲಿದೆ ಸುಲಭ ವಿಧಾನ

ಕಾಫಿ ಮ್ಯಾಗಿಯನ್ನು ಮಾಡಿದ ವಿಧಾನವನ್ನು ಕಂಡ ಬಳಕೆದಾರನು ರುಚಿ ನೋಡಲು ಹಿಂಜರಿಯುತ್ತಾನೆ. ಮೊದಲು ನೀನು ರುಚಿ ನೋಡುವಂತೆ ಬೀದಿ ಬದಿ ವ್ಯಾಪಾರಿಗೆ ಕೇಳುತ್ತಾನೆ. ಏನೂ ಆಗದಿದ್ದರೆ, ನಾನು ಕಾಫಿ ಮ್ಯಾಗಿಯನ್ನು ಸವಿಯುತ್ತೇನೆ ಎಂದು ಹೇಳುತ್ತಾನೆ. ವ್ಯಾಪಾರಿಯು ಕಾಫಿ ಮ್ಯಾಗಿ ಸವಿದ ನಂತರ ಬಳಕೆದಾರನು ಕಾಫಿ ಮ್ಯಾಗಿಯನ್ನು ಸವಿಯುತ್ತಾನೆ. ಕಾಫಿ ಮ್ಯಾಗಿಯನ್ನು ತಿಂದ ಬಳಿಕ ‘ಅತ್ಯುತ್ತಮ ರುಚಿ. ನಾನು ಮೂಕನಾಗಿದ್ದೇನೆ’ ಎಂದು ಪ್ರತಿಕ್ರಿಯೆಯು ನೀಡಿದ್ದು ಅಲ್ಲಿಗೆ ವಿಡಿಯೋವು ಮುಕ್ತಾಯವಾಗುತ್ತದೆ.

ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಮ್ಯಾಗಿ ಪ್ರಿಯರು ಕಾಫಿ ಮ್ಯಾಗಿಯನ್ನು ತಿರಸ್ಕರಿಸಿದ್ದಾರೆ. ಬಳಕೆದಾರನೊಬ್ಬ, ನೀವು ಮ್ಯಾಗಿ ಮತ್ತು ಕೋಲ್ಡ್ ಕಾಫಿ ಎರಡನ್ನೂ ಒಟ್ಟಿಗೆ ಖರೀದಿಸಲು ಸಾಧ್ಯವಾಗದಿದ್ದಾಗ, ಅವುಗಳನ್ನು ಮಿಶ್ರಣ ಮಾಡಿ ಏಕೆಂದರೆ ಮಮ್ಮಿ ಕೇವಲ ಮ್ಯಾಗಿಗೆ ಮಾತ್ರ ಹಣವನ್ನು ಕೊಟ್ಟಿರುತ್ತಾಳೆ ಎಂದಿದ್ದಾನೆ. ಮತ್ತೊಬ್ಬನು, “ಮ್ಯಾಗಿ ಮಾತ್ರ ಏಕೆ ಇಂತಹ ಪ್ರಯೋಗಗಳಿಗೆ ಬಲಿಯಾಗುತ್ತಿದೆ” ಎಂದು ಪ್ರಶ್ನಿಸಿದ್ದಾನೆ. ಇನ್ನೊಬ್ಬ ಬಳಕೆದಾರನು ‘ನೀವು ಸಕ್ಕರೆಯನ್ನು ಮರೆತಿದ್ದೀರಿ’ ಎಂದಿದ್ದಾನೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:36 am, Tue, 13 February 24

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ