ಇಲ್ಲಿ ಪ್ರೇಮಿಗಳ ದಿನಾಚರಣೆ ಸಂಪೂರ್ಣ ನಿಷೇಧ, ಆಚರಿಸಿದರೆ ಕಠಿಣ ಶಿಕ್ಷೆ!

Valentine's Day: ಕಳೆದ ಒಂದು ವಾರದಿಂದ ಪ್ರೇಮಿಗಳ ಸಂಭ್ರಮವು ಹೇಳತೀರದಾಗಿದೆ. ರೋಸ್​ ಡೇಯಿಂದ ಕಿಸ್ ಡೇವರೆಗೂ ಎಲ್ಲ ದಿನವನ್ನು ಪ್ರೇಮಿಗಳಿಬ್ಬರೂ ವಿಶೇಷವಾಗಿ ಆಚರಿಸಿದ್ದಾರೆ. ಆದರೆ ಇದೀಗ ಪ್ರೇಮಿಗಳು ಕಾತುರದಿಂದ ಕಾಯುತ್ತಿರುವ ಪ್ರೇಮಿಗಳ ದಿನಕ್ಕೆ ಒಂದು ದಿನ ಮಾತ್ರ ಬಾಕಿಯಿವೆ. ಈಗಾಗಲೇ ತಮ್ಮ ಮನದರಸಿಯನ್ನು ಖುಷಿ ಪಡಿಸಲು ದುಬಾರಿ ಬೆಲೆ ಉಡುಗೊರೆಗಳು, ಗ್ರೀಟಿಂಗ್ ಕಾರ್ಡ್ ಗಳು, ಟ್ರಿಪ್ ಎಂದೆಲ್ಲಾ ಪ್ಲಾನ್ ಮಾಡಿಕೊಂಡಿದ್ದಾರೆ. ಆದರೆ ಪ್ರಪಂಚದಾದಂತ್ಯ ಆಚರಿಸುವ ಪ್ರೇಮಿಗಳ ದಿನವನ್ನು ಈ ಕೆಲವು ದೇಶಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಇಲ್ಲಿ ಪ್ರೇಮಿಗಳ ದಿನಾಚರಣೆ ಸಂಪೂರ್ಣ ನಿಷೇಧ, ಆಚರಿಸಿದರೆ ಕಠಿಣ ಶಿಕ್ಷೆ!
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 13, 2024 | 12:03 PM

ಪ್ರೇಮ ಎಂದರೆ ಒಂದು ದಿನದ ಸಂಭ್ರಮವಲ್ಲ, ಪ್ರೇಮವನ್ನು ಅನುಭವಿಸಿ ಸಂಭ್ರಮಿಸಬೇಕು. ಪ್ರೇಮಿಗಳಿಗೆ ಪ್ರತಿದಿನವು ಸಂಭ್ರಮದ ದಿನವೇ. ಪ್ರೀತಿ ಎನ್ನುವುದು ಎರಡು ಮನಸ್ಸುಗಳ ಸಮ್ಮಿಲನ ಎಂದು ಹೇಳುವವರು ನಮ್ಮ ಸುತ್ತಮುತ್ತಲು ಇದ್ದಾರೆ. ಹೀಗೇಳಿದರೂ ಪ್ರೇಮಿಗಳ ದಿನದ ಸಂಭ್ರಮವು ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ. ಈಗಾಗಲೇ ಕೆಲವರು ತನ್ನ ಪ್ರೇಮಿಗೆ ವಿಶೇಷವಾದ ಉಡುಗೊರೆಗಳನ್ನು ನೀಡಲು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇನ್ನೇನು ಪ್ರೀತಿಯ ಪಯಣದಲ್ಲಿ ಜೊತೆಯಾಗಿ ಸಾಗಬೇಕು ಎಂದುಕೊಂಡವರು ಮನಸ್ಸಿನಲ್ಲಿ ಬಚ್ಚಿಟ್ಟ ಪ್ರೀತಿಯನ್ನು ತನ್ನ ಪ್ರೇಯಸಿಯ ಮುಂದೆ ನಿವೇದಿಸಿಕೊಳ್ಳಲು ತಯಾರಿಯನ್ನು ನಡೆಸಿದ್ದಾರೆ. ಪ್ರಪಂಚದಾದಂತ್ಯ ಇಷ್ಟೆಲ್ಲಾ ಸಂಭ್ರಮದಿಂದ ಆಚರಿಸುವ ಪ್ರೇಮಿಗಳ ದಿನವನ್ನು ಈ ದೇಶಗಳ ಜನರು ಎದುರು ನೋಡುವುದೇ ಇಲ್ಲ. ಇಲ್ಲಿನ ಜನರು ಪ್ರೀತಿಸುತ್ತಾರೆ. ಆದರೆ ಪ್ರೇಮಿಯ ದಿನ ಆಚರಿಸುವುದಿಲ್ಲ.

* ಪಾಕಿಸ್ತಾನ: ಪಾಕಿಸ್ತಾನದಲ್ಲಿ ಪ್ರೇಮಿಗಳ ದಿನವನ್ನು ಆಚರಿಸಲಾಗುವುದಿಲ್ಲ. ಕಳೆದ ಫೆಬ್ರವರಿ 7, 2018 ರಂದು ಇಸ್ಲಾಮಾಬಾದ್ ಹೈಕೋರ್ಟ್‌ನಿಂದ ಪ್ರೇಮಿಗಳ ದಿನಾಚರಣೆ ಮತ್ತು ಮಾಧ್ಯಮ ಪ್ರಸಾರದ ಮೇಲೆ ನಿಷೇಧಿಸಲಾಗಿತ್ತು. ಪ್ರೇಮಿಗಳ ದಿನದ ಆಚರಣೆಯು ಇಸ್ಲಾಂ ಧರ್ಮದ ವಿರುದ್ಧ ಎಂದು ಪರಿಗಣಿಸಲಾಗಿದ್ದು, ಹೀಗಾಗಿ ಇಲ್ಲಿ ಪ್ರೇಮಿಗಳ ಸಂಭ್ರಮವನ್ನು ನೋಡಲು ಆಗುವುದಿಲ್ಲ.

* ಮಲೇಷ್ಯಾ: ಈ ದೇಶದಲ್ಲಿ ಸಂಪೂರ್ಣವಾಗಿ ಪ್ರೇಮಿಗಳ ದಿನಾಚರಣೆಯನ್ನು ನಿಷೇಧಿಸಲಾಗಿದೆ. 2005ರಲ್ಲಿ ಪ್ರೇಮಿಗಳ ದಿನದ ಬಗ್ಗೆ ಫತ್ವಾ ಹೊರಡಿಸಲಾಗಿತ್ತು. ಮುಸ್ಲಿಂ ಧರ್ಮದ ವಿರುದ್ಧ ಆಚರಣೆಯಾಗಿದೆ ಎಂದು ಪರಿಗಣಿಸಲಾಗಿದೆ. ಹೀಗಾಗಿ ಇಲ್ಲಿ ಪ್ರೇಮಿಗಳ ದಿನದಂದು ವ್ಯಾಲೆಂಟೈನ್ಸ್ ಡೇ ವಿರೋಧಿ ಅಭಿಯಾನವೂ ನಡೆಯುತ್ತದೆ.

* ಸೌದಿ ಅರೇಬಿಯಾ : ಮುಸ್ಲಿಂ ರಾಷ್ಟ್ರವಾಗಿರುವ ಸೌದಿಯಲ್ಲಿ ಪ್ರೇಮಿಗಳ ದಿನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಪ್ರೇಮಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ ಪ್ರೇಮಿಗಳ ಆಚರಣೆ ಮಾಡಿದ್ದ ಕಾರಣ 2014ರಲ್ಲಿ 39 ಮಂದಿ ಜೈಲು ಸೇರಿದ್ದರು. ಆದರೆ 2018 ರಲ್ಲಿ ಈ ನಿಷೇಧವನ್ನು ತೆಗೆಯಿತಾದರೂ ಪ್ರೇಮಿಗಳು ಈ ದಿನವನ್ನು ಸಂಭ್ರಮಿಸುವುದಿಲ್ಲ.

ಇದನ್ನೂ ಓದಿ: ಸಂಗಾತಿಗೆ ಸರ್​ಪ್ರೈಸ್; ಪ್ರೇಮಿಗಳ ದಿನಕ್ಕೆ ಏನೆಲ್ಲ ಉಡುಗೊರೆ ಕೊಡಬಹುದು?

* ಇಂಡೋನೇಷ್ಯಾ: ಪ್ರೇಮಿಗಳ ದಿನವನ್ನು ಈ ದೇಶದ ಪ್ರೇಮಿಗಳು ಆಚರಿಸುವುದಿಲ್ಲ. ಈ ದೇಶದಲ್ಲಿ ಪ್ರೇಮಿಗಳ ದಿನಾಚರಣೆಯನ್ನು ನಿಷೇಧಿಸಿಲ್ಲ. ಸುರಬಯಾ ಮತ್ತು ಮಕಸ್ಸರ್ನಲ್ಲಿ ಜನರು ಈ ಆಚರಣೆಯು ತಮ್ಮ ಧರ್ಮಕ್ಕೆ ವಿರುದ್ಧ ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ. ಹೀಗಾಗಿ ಈ ದೇಶದ ಕೆಲವು ಕಡೆಗಳಲ್ಲಿ ವ್ಯಾಲೆಂಟೈನ್ಸ್ ಡೇ ವಿರೋಧಿ ಮೆರವಣಿಗೆಗಳು ನಡೆಯುತ್ತದೆ.

* ಇರಾನ್: ಮುಸ್ಲಿಂ ರಾಷ್ಟ್ರವಾಗಿರುವ ಇರಾನ್ ನಲ್ಲಿ ಪ್ರೇಮಿಗಳ ದಿನದ ಉಡುಗೊರೆಗಳು ಮತ್ತು ಸಂಬಂಧಿತ ವಸ್ತುಗಳನ್ನು ಸರ್ಕಾರವು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಾಗಿ ಇಲ್ಲಿನ ಜನರು ಪ್ರೇಮಿಗಳ ದಿನದಂದು ಮೆಹ್ರಿಗನ್ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬವು ಸ್ನೇಹ, ಪ್ರೀತಿ ಅಥವಾ ವಾತ್ಸಲ್ಯದ ದೇವರಾಗಿರುವ ಯಸಾದಾ ಮೆಹರ್ ಅನ್ನು ಗೌರವಿಸುವುದಾಗಿದೆ.

* ಉಜ್ಬೇಕಿಸ್ತಾನ್: ಪ್ರೇಮಿಗಳ ದಿನವನ್ನು ಉಜ್ಬೇಕಿಸ್ತಾನ್ ವು ನಿಷೇಧಿಸಿದೆ. ಈ ದೇಶದಲ್ಲಿ 2012 ರವರೆಗೆ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ನಂತರದಲ್ಲಿ ದೇಶದ ಶಿಕ್ಷಣ ಸಚಿವಾಲಯವು ಈ ದಿನವನ್ನು ಆಚರಿಸುವುದರನ್ನು ವಿರೋಧಿಸುವ ಮೂಲಕ ಪ್ರಕಟಣೆಯನ್ನು ಹೊರಡಿಸಿತು. ಹೀಗಾಗಿ ಪ್ರೇಮಿಗಳ ದಿನದಂದು ಈ ದೇಶದ ಜನರು ವೀರ ಬಾಬರ್ ಮೊಘಲ್ ಚಕ್ರವರ್ತಿಯ ಜನ್ಮದಿನವನ್ನು ಆಚರಿಸಲಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?