Valentine’s Day: ಸಂಗಾತಿಗೆ ಸರ್​ಪ್ರೈಸ್; ಪ್ರೇಮಿಗಳ ದಿನಕ್ಕೆ ಏನೆಲ್ಲ ಉಡುಗೊರೆ ಕೊಡಬಹುದು?

Valentine’s Day Gifts: ಪ್ರೇಮಿಗಳ ದಿನಕ್ಕೆ ಕೇವಲ ಒಂದೇ ಒಂದು ದಿನ ಉಳಿದಿದೆ. ನಿಮ್ಮ ಪ್ರೀತಿಯ ಸಂಗಾತಿಗೆ ಏನಾದರೂ ವಿಶೇಷವಾಗಿ ಗಿಫ್ಟ್​ ಕೊಟ್ಟು ಆಕೆಯನ್ನು ಇಂಪ್ರೆಸ್ ಮಾಡಬೇಕೆಂದು ನಿಮಗೆ ಆಸೆಯಿದೆಯೇ? ಅದಕ್ಕಾಗಿ ಯಾವ ರೀತಿಯ ಉಡುಗೊರೆ ಕೊಡಬಹುದು ಎಂಬ ಕುರಿತು ಕೆಲವು ಸಲಹೆಗಳು ಇಲ್ಲಿವೆ.

Valentine’s Day: ಸಂಗಾತಿಗೆ ಸರ್​ಪ್ರೈಸ್; ಪ್ರೇಮಿಗಳ ದಿನಕ್ಕೆ ಏನೆಲ್ಲ ಉಡುಗೊರೆ ಕೊಡಬಹುದು?
ಪ್ರೇಮಿಗಳ ದಿನImage Credit source: iStock
Follow us
ಸುಷ್ಮಾ ಚಕ್ರೆ
|

Updated on: Feb 13, 2024 | 10:10 AM

ಕಳೆದ ವಾರದಿಂದ ಇಂದಿನವರೆಗೂ ಪ್ರೇಮಿಗಳ ವಾರದಲ್ಲಿ (Valentine’s Week) ವಿವಿಧ ದಿನಗಳನ್ನು ಆಚರಿಸಿದ್ದಾಯಿತು. ಈಗ ಪ್ರೇಮಿಗಳ ವಾರಕ್ಕೆ ಒಂದು ದಿನ ಮಾತ್ರ ಉಳಿದಿದೆ. ರೋಸ್​ ಡೇಯಿಂದ (Rose Day) ಕಿಸ್ ಡೇವರೆಗೂ (Kiss Day) ಎಲ್ಲ ದಿನಗಳಲ್ಲೂ ವಿವಿಧ ರೀತಿಯಲ್ಲಿ ಪ್ರೀತಿಯನ್ನು ಸೆಲಬ್ರೇಟ್ ಮಾಡುವ ಪ್ರೇಮಿಗಳು ಫೆ. 14ರಂದು ಪ್ರೇಮಿಗಳ ದಿನವನ್ನು (Valentine’s Day 2024) ಆಚರಿಸುತ್ತಾರೆ. ಈ ವೇಳೆ ನಮ್ಮ ಸಂಗಾತಿ ಮೆಚ್ಚುವಂತೆ ಯಾವ ರೀತಿಯ ಉಡುಗೊರೆ ನೀಡಬಹುದು ಎಂಬುದು ಹಲವು ಪ್ರೇಮಿಗಳು ತಲೆಕೆಡಿಸಿಕೊಳ್ಳುವ ವಿಷಯ. ನಿಮಗೂ ಆ ಬಗ್ಗೆ ಗೊಂದಲಗಳಿದ್ದರೆ ಕೆಲವು ಸಲಹೆಗಳು ಇಲ್ಲಿವೆ.

ಫೋಟೋ ಫ್ರೇಮ್:

ನಿಮ್ಮ ಸಂಗಾತಿಗೆ ಪರ್ಸನಲೈಸ್ ಮಾಡಿದ ಫೋಟೋ ಫ್ರೇಮ್ ನೀಡಬಹುದು. ನಿಮ್ಮ ಪ್ರೀತಿಗೆ ಭಾವನಾತ್ಮಕ ಸ್ಪರ್ಶ ನೀಡಲು ಕಸ್ಟಮೈಸ್ ಮಾಡಿದ ಫೋಟೋ ಫ್ರೇಮ್‌ ನೀಡಬಹುದು.

ಇದನ್ನೂ ಓದಿ: Valentine’s Week List 2024: ರೋಸ್​ ದಿನದಿಂದ ಪ್ರೇಮಿಗಳ ದಿನದವರೆಗೆ; ಪ್ರೇಮಿಗಳ ವಾರದ ಬಗ್ಗೆ ನಿಮಗೂ ಗೊತ್ತಿರಲಿ

ಮೆತ್ತನೆಯ ಬ್ಲಾಂಕೆಟ್:

ನಿಮ್ಮ ಸಂಗಾತಿಯನ್ನು ಮೃದುವಾದ, ಮೆತ್ತನೆಯ, ಮುದ್ದಾದ ಹೊದಿಕೆಯೊಂದಿಗೆ ಬೆಚ್ಚಗಿನ ಮತ್ತು ಪ್ರೀತಿಯಿಂದ ಕಟ್ಟಿಹಾಕಲು ಅವರ ಇಷ್ಟದ ಬಣ್ಣದ ಬ್ಲಾಂಕೆಟ್ ನೀಡಿ.

ಪರಿಮಳಭರಿತ ಕ್ಯಾಂಡಲ್:

ನಿಮ್ಮ ಪ್ರೇಮಿಗೆ ಅವರಿಷ್ಟವಾದ ಪರಿಮಳದ ಕ್ಯಾಂಡಲ್ ಅನ್ನು ನೀಡಿ. ಇದನ್ನು ಬೆಳಗಿಸಿದಾಗ ಸುತ್ತಮುತ್ತಲೂ ಸುವಾಸನೆ ಹರಡಿ, ಆಹ್ಲಾದವನ್ನು ಉಂಟುಮಾಡುತ್ತದೆ. ಇದು ರೊಮ್ಯಾಂಟಿಕ್ ವಾತಾವರಣವನ್ನು ಸೃಷ್ಟಿಸುತ್ತದೆ.

ಲವ್ ಲೆಟರ್:

ಪ್ರೀತಿ ಮತ್ತು ಮೆಚ್ಚುಗೆಯಿಂದ ತುಂಬಿದ ಹೃತ್ಪೂರ್ವಕ ಪ್ರೇಮಪತ್ರದೊಂದಿಗೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ.

ಇದನ್ನೂ ಓದಿ: Valentine’s Day: ಪ್ರೇಮಿಗಳ ದಿನದಂದು ಪ್ರೇಯಸಿಯನ್ನು ಇಂಪ್ರೆಸ್ ಮಾಡಲು ಈ ಟಿಪ್ಸ್ ಪಾಲಿಸಿ

ಫೇವರಿಟ್ ಬುಕ್ ಅಥವಾ ಸಿನಿಮಾ:

ನಿಮ್ಮ ಸಂಗಾತಿಗೆ ಇಷ್ಟವಾದ ಪುಸ್ತಕ ಅಥವಾ ಸಿನಿಮಾದ ಸಿಡಿಯನ್ನು ಉಡುಗೊರೆಯಾಗಿ ನೀಡಿ.

ಪೇಂಟಿಂಗ್ಸ್:

ಕುಂಚಗಳೊಂದಿಗೆ ಮಾಡಿದ ಸುಂದರವಾದ ಪೇಂಟಿಂಗ್ ನೀಡಬಹುದು. ನಿಮ್ಮ ಕೈಯಾರೆ ಮಾಡಿದ ಪೇಂಟಿಂಗ್ ನೀಡಿದರೆ ಇನ್ನೂ ಉತ್ತಮ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ