AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Week List 2024: ರೋಸ್​ ದಿನದಿಂದ ಪ್ರೇಮಿಗಳ ದಿನದವರೆಗೆ; ಪ್ರೇಮಿಗಳ ವಾರದ ಬಗ್ಗೆ ನಿಮಗೂ ಗೊತ್ತಿರಲಿ

Valentine's Week List 2024, Date Calendar: ಇದು ಪ್ರೇಮಿಗಳ ವಾರ. ಈ ವಾರವಿಡೀ ಪ್ರೇಮಿಗಳಿಗಾಗಿ ಹಲವು ದಿನಗಳನ್ನು ಆಚರಿಸಲಾಗುತ್ತದೆ. ಪ್ರೇಮಿಗಳ ವಾರದ ಪ್ರತಿ ದಿನವು ಪ್ರೇಮಿಗಳಿಗೆ ಮಹತ್ವದ್ದಾಗಿದೆ. ಈ ಸಮಯದಲ್ಲಿ ಡೇಟಿಂಗ್, ಕ್ಯಾಂಡಲ್ ಲೈಟ್ ಡಿನ್ನರ್, ಇಬ್ಬರಿಗೂ ಇಷ್ಟವಾದ ಕೆಲಸ ಮಾಡುವುದು ಇವೆಲ್ಲವೂ ಸಾಮಾನ್ಯ. ಈ ಸಮಯದಲ್ಲಿ ಪ್ರೇಮಿಗಳು ಪರಸ್ಪರ ಸರ್​ಪ್ರೈಸ್ ಕೊಡುವುದು, ಪಾರ್ಟಿ ಮಾಡುವ ಮೂಲಕ ಪ್ರೇಮಿಗಳ ವಾರವನ್ನು ಆನಂದಿಸುತ್ತಾರೆ.

Valentine's Week List 2024: ರೋಸ್​ ದಿನದಿಂದ ಪ್ರೇಮಿಗಳ ದಿನದವರೆಗೆ; ಪ್ರೇಮಿಗಳ ವಾರದ ಬಗ್ಗೆ ನಿಮಗೂ ಗೊತ್ತಿರಲಿ
ಪ್ರೇಮಿಗಳ ದಿನImage Credit source: iStock
ಸುಷ್ಮಾ ಚಕ್ರೆ
|

Updated on:Feb 05, 2024 | 5:39 PM

Share

ವ್ಯಾಲೆಂಟೈನ್ಸ್ ವೀಕ್ ಅನ್ನು ಜಗತ್ತಿನೆಲ್ಲೆಡೆ ಈ ವಾರವಿಡೀ ಆಚರಿಸಲಾಗುತ್ತದೆ. ಜನರು ಉಡುಗೊರೆಗಳು, ಸರ್​ಪ್ರೈಸಸ್ ಮತ್ತು ತಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದರೊಂದಿಗೆ ಪ್ರೀತಿಯ ತಿಂಗಳನ್ನು ಆಚರಿಸಲು ಸಜ್ಜಾಗುತ್ತಿದ್ದಾರೆ. ಫೆಬ್ರವರಿ 14ರಂದು ಪ್ರೇಮಿಗಳ ದಿನ ಬಂದರೆ, ಫೆಬ್ರವರಿ 7ರಿಂದ ಪ್ರೀತಿಯ 7 ದಿನಗಳನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ 7 ದಿನಗಳ ಕಾಲ ರೋಸ್ ಡೇ (ಫೆಬ್ರವರಿ 7), ಪ್ರಪೋಸ್ ಡೇ (ಫೆಬ್ರವರಿ 8), ಚಾಕೊಲೇಟ್ ಡೇ (ಫೆಬ್ರವರಿ 9), ಟೆಡ್ಡಿ ಡೇ (ಫೆಬ್ರವರಿ 10), ಪ್ರಾಮಿಸ್ ಡೇ (ಫೆಬ್ರವರಿ 11), ಹಗ್ ಡೇ (ಫೆಬ್ರವರಿ 12), ಮತ್ತು ಕಿಸ್ ಡೇ (ಫೆಬ್ರವರಿ 13) ಆಚರಿಸಲಾಗುತ್ತದೆ.

ಫೆಬ್ರವರಿ 14 ಅಥವಾ ಪ್ರೇಮಿಗಳ ದಿನದ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಅದರ ಜೊತೆಗೆ ಪ್ರೇಮಿಗಳ ವಾರದ 7 ದಿನಗಳನ್ನು ತಮ್ಮ ಪಾರ್ಟನರ್​ಗಳೊಂದಿಗೆ ಹೇಗೆ ಆಚರಿಸಬೇಕು ಎಂದು ತಿಳಿಯುವುದು ಕೂಡ ಅಗತ್ಯ. ಆ ಬಗ್ಗೆ ಮಾಹಿತಿ ಇಲ್ಲಿದೆ.

ವ್ಯಾಲೆಂಟೈನ್ಸ್ ವೀಕ್ 2024 ದಿನಾಂಕಗಳು ಮತ್ತು ಮಹತ್ವ:

ಫೆಬ್ರವರಿ 7 – ಗುಲಾಬಿ ದಿನ:

ರೋಸ್ ಡೇಯನ್ನು ವರ್ಷವೂ ಫೆಬ್ರವರಿ 7ರಂದು ಬರುತ್ತದೆ. ಇದು ಪ್ರೇಮಿಗಳ ವಾರದ ಮೊದಲ ದಿನ. ಈ ದಿನ, ದಂಪತಿಗಳು ಗುಲಾಬಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ ಅಥವಾ ತಮ್ಮ ಪ್ರೀತಿಪಾತ್ರರಿಗೆ ಪುಷ್ಪಗುಚ್ಛವನ್ನು ಕಳುಹಿಸುತ್ತಾರೆ. ಈ ಸಂದರ್ಭದಲ್ಲಿ ಜನರು ತಾವು ಇಷ್ಟಪಡುವವರಿಗೆ ಗುಲಾಬಿ ಹೂವುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಈ ಗುಲಾಬಿಗಳಲ್ಲಿ ಕೆಂಪು ಗುಲಾಬಿ ಪ್ರೀತಿಯನ್ನು ಸೂಚಿಸುತ್ತದೆ, ಹಳದಿ ಗುಲಾಬಿ ಸ್ನೇಹವನ್ನು ಸೂಚಿಸುತ್ತದೆ, ಗುಲಾಬಿ ಬಣ್ಣದ ಗುಲಾಬಿ ಹೂವು ಮೆಚ್ಚುಗೆಯನ್ನು ಸೂಚಿಸುತ್ತದೆ.

ಇದನ್ನೂ ಓದಿ: ಹೆಂಗಸರಿಗೆ ತಮ್ಮ ಸಂಗಾತಿಯಲ್ಲಿ ಇಷ್ಟವಾಗದ 4 ಸಂಗತಿಗಳಿವು

ಫೆಬ್ರವರಿ 8 – ಪ್ರಪೋಸ್ ಡೇ:

ಪ್ರಪೋಸ್ ಡೇ ಎನ್ನುವುದು ಪ್ರೇಮಿಗಳ ವಾರದ ಎರಡನೇ ದಿನವಾಗಿದೆ. ಇದು ಫೆಬ್ರವರಿ 8ರಂದು ಬರುತ್ತದೆ. ಹೆಸರೇ ಸೂಚಿಸುವಂತೆ ಜನರು ತಮಗೆ ಇಷ್ಟವಾದವರಿಗೆ ಪ್ರಪೋಸ್ ಮಾಡುತ್ತಾರೆ.

ಫೆಬ್ರವರಿ 9 – ಚಾಕೊಲೇಟ್ ಡೇ:

ಚಾಕೊಲೇಟ್ ಡೇ ಪ್ರೇಮಿಗಳ ವಾರದ ಮೂರನೇ ದಿನವಾಗಿದೆ. ಫೆಬ್ರವರಿ 9ರಂದು ಈ ದಿನ ಬರುತ್ತದೆ. ಈ ದಿನ, ಜನರು ತಮ್ಮ ಸಂಗಾತಿಗೆ ಚಾಕೊಲೇಟ್‌ಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಕೆಲವರು ಕೈಯಿಂದ ಮಾಡಿದ ಚಾಕೊಲೇಟ್‌ಗಳನ್ನು ತಯಾರಿಸುತ್ತಾರೆ ಅಥವಾ ತಮ್ಮ ಸಂಗಾತಿಯ ನೆಚ್ಚಿನ ಚಾಕೋಲೇಟ್​, ಸ್ವೀಟ್​ಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ನಿಮ್ಮ ಪ್ರೀತಿಪಾತ್ರರು ಸಿಹಿತಿಂಡಿಗಳನ್ನು ಇಷ್ಟಪಡದಿದ್ದರೆ, ನೀವು ಅವರಿಗೆ ನೆಚ್ಚಿನ ತಿಂಡಿಯನ್ನು ಉಡುಗೊರೆಯಾಗಿ ನೀಡಬಹುದು.

ಫೆಬ್ರವರಿ 10 – ಟೆಡ್ಡಿ ಡೇ:

ಟೆಡ್ಡಿ ಡೇ ಫೆಬ್ರವರಿ 10ರಂದು ಬರುತ್ತದೆ. ಇದು ಪ್ರೇಮಿಗಳ ವಾರದ ನಾಲ್ಕನೇ ದಿನ. ಪ್ರೀತಿಯಲ್ಲಿರುವ ಜೋಡಿ ಈ ದಿನದಂದು ತಮ್ಮ ಸಂಗಾತಿಗೆ ಟೆಡ್ಡಿ ಬೇರ್ ಅಥವಾ ಅವರಿಷ್ಟವಾದ ಗೊಂಬೆಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಸರ್​ಪ್ರೈಸ್ ನೀಡುತ್ತಾರೆ.

ಫೆಬ್ರವರಿ 11 – ಪ್ರಾಮಿಸ್ ಡೇ:

ಪ್ರಾಮಿಸ್ ಡೇ ಫೆಬ್ರವರಿ 11ರಂದು ಬರುತ್ತದೆ. ಇದು ಪ್ರೇಮಿಗಳ ವಾರದ 5ನೇ ದಿನ. ಪ್ರಾಮಿಸ್ ದಿನದಂದು ಜನರು ತಮ್ಮ ಸಂಗಾತಿಗೆ ಪರಸ್ಪರ ಪ್ರೀತಿಸುವ ಮತ್ತು ಪಾಲಿಸುವ ಭರವಸೆಗಳನ್ನು ನೀಡುತ್ತಾರೆ, ತಮ್ಮ ಬಂಧವನ್ನು ಬಲಪಡಿಸುತ್ತಾರೆ.

ಇದನ್ನೂ ಓದಿ: ನಿಮ್ಮ ಸಂಗಾತಿ ಜೊತೆ ಜಗಳವಾಡಿದಾಗ ಈ ತಪ್ಪನ್ನೆಂದೂ ಮಾಡಬೇಡಿ!

ಫೆಬ್ರವರಿ 12 – ಅಪ್ಪುಗೆಯ ದಿನ:

ಅಪ್ಪುಗೆಯ ದಿನವು ಪ್ರೇಮಿಗಳ ವಾರದ ಆರನೇ ದಿನವಾಗಿದೆ. ಇದು ಫೆಬ್ರವರಿ 12ರಂದು ಬರುತ್ತದೆ. ಅಪ್ಪುಗೆಯು ಸಾಂತ್ವನದ ಸೂಚಕವಾಗಿದೆ. ನೀವು ನಿಮ್ಮ ಪ್ರೀತಿಪಾತ್ರರನ್ನು ಅಪ್ಪಿಕೊಂಡಾಗ ಅದು ಅವರ ಮನಸ್ಸಿನಿಂದ ಎಲ್ಲಾ ಚಿಂತೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಫೆಬ್ರವರಿ 13 – ಕಿಸ್ ಡೇ:

ವ್ಯಾಲೆಂಟೈನ್ಸ್ ಡೇಗೆ ಒಂದು ದಿನ ಮೊದಲು ಕಿಸ್ ಡೇಯನ್ನು ಆಚರಿಸಲಾಗುತ್ತದೆ. ಇದು ಫೆಬ್ರವರಿ 13ರಂದು ಬರುತ್ತದೆ. ಪ್ರೀತಿಯಲ್ಲಿರುವ ಜನರು ಈ ದಿನದಂದು ಚುಂಬಿಸುವ ಮೂಲಕ ತಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಾರೆ.

ಫೆಬ್ರವರಿ 14 – ಪ್ರೇಮಿಗಳ ದಿನ:

ಅಂತಿಮವಾಗಿ, ವ್ಯಾಲೆಂಟೈನ್ಸ್ ಡೇ ಪ್ರೇಮಿಗಳ ವಾರದ ಕೊನೆಯ ದಿನವಾಗಿದೆ. ಇದು ಫೆಬ್ರವರಿ 14ರಂದು ಬರುತ್ತದೆ. ಜೋಡಿಗಳು ಡೇಟ್​ಗೆ ಹೊರಹೋಗುವ ಮೂಲಕ ಈ ವಿಶೇಷ ಸಂದರ್ಭವನ್ನು ಆಚರಿಸುತ್ತಾರೆ, ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಇಬ್ಬರೂ ಗುಣಮಟ್ಟದ ಸಮಯವನ್ನು ಒಟ್ಟಿಗೆ ಕಳೆಯುತ್ತಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:11 pm, Mon, 5 February 24

ಹೇಗಿದೆ ನೋಡಿ ತುಕಾಲಿ ಸಂತೋಷ್ ಹೆಣ್ಣಿನ ಅವತಾರ
ಹೇಗಿದೆ ನೋಡಿ ತುಕಾಲಿ ಸಂತೋಷ್ ಹೆಣ್ಣಿನ ಅವತಾರ
ಗಡ್ಕರಿಯವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು ಸಂತೋಷ: ಶಿವಕುಮಾರ್
ಗಡ್ಕರಿಯವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು ಸಂತೋಷ: ಶಿವಕುಮಾರ್
ಗುಜರಾತ್​​ನಲ್ಲಿ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳು, 9 ಮಂದಿ ಸಾವು
ಗುಜರಾತ್​​ನಲ್ಲಿ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳು, 9 ಮಂದಿ ಸಾವು
ಗಂಭೀರ ನಡಿಗೆ, ಧೈರ್ಯಶಾಲಿ ಅನೆಗಳನ್ನು ಅಯ್ಕೆ ಮಾಡಲಾಗುತ್ತದೆ: ಅರಣ್ಯಾಧಿಕಾರಿ
ಗಂಭೀರ ನಡಿಗೆ, ಧೈರ್ಯಶಾಲಿ ಅನೆಗಳನ್ನು ಅಯ್ಕೆ ಮಾಡಲಾಗುತ್ತದೆ: ಅರಣ್ಯಾಧಿಕಾರಿ
ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಿದ ಪ್ರಧಾನಿ ಮೋದಿ
ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಿದ ಪ್ರಧಾನಿ ಮೋದಿ
ಬ್ರೆಜಿಲ್​​ನಲ್ಲಿ ಮೋದಿ: ಶಿವತಾಂಡವ ಸ್ತೋತ್ರ, ಭರತನಾಟ್ಯ, ಸಾಂಬಾ ರೆಗಿ ಗೀತೆ
ಬ್ರೆಜಿಲ್​​ನಲ್ಲಿ ಮೋದಿ: ಶಿವತಾಂಡವ ಸ್ತೋತ್ರ, ಭರತನಾಟ್ಯ, ಸಾಂಬಾ ರೆಗಿ ಗೀತೆ
ಕೋಳಿ ಸಾರಿನ  ಋಣ; ತರುಣ್ ಜೊತೆ ಸಿನಿಮಾ ಮಾಡ್ತಾರೆ ಶಿವಣ್ಣ
ಕೋಳಿ ಸಾರಿನ  ಋಣ; ತರುಣ್ ಜೊತೆ ಸಿನಿಮಾ ಮಾಡ್ತಾರೆ ಶಿವಣ್ಣ
ಮಂಡ್ಯ ರೈತರ ಆಕ್ರೋಶಕ್ಕೆ ಮಣಿದು ತಡರಾತ್ರಿ ನೀರು ಬಿಡುಗಡೆ ಮಾಡಿದ ಸರ್ಕಾರ
ಮಂಡ್ಯ ರೈತರ ಆಕ್ರೋಶಕ್ಕೆ ಮಣಿದು ತಡರಾತ್ರಿ ನೀರು ಬಿಡುಗಡೆ ಮಾಡಿದ ಸರ್ಕಾರ
ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಹೃದಯ ತಪಾಸಣೆಗೆ ಮುಗಿಬಿದ್ದ ಜನಸಾಗರ
ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಹೃದಯ ತಪಾಸಣೆಗೆ ಮುಗಿಬಿದ್ದ ಜನಸಾಗರ
ಎಂಎಲ್​ಎ ಗೆಸ್ಟ್​ಹೌಸ್​ ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ ಶಿವಸೇನಾ ಶಾಸಕ
ಎಂಎಲ್​ಎ ಗೆಸ್ಟ್​ಹೌಸ್​ ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ ಶಿವಸೇನಾ ಶಾಸಕ