Rose Day 2024 Date: ರೋಸ್ ಡೇ ಯಾವಾಗ?; ಅದರ ಇತಿಹಾಸ, ಮಹತ್ವದ ಬಗ್ಗೆಯೂ ನಿಮಗೆ ಗೊತ್ತಿರಲಿ

Valentine’s Week 2024: ಗುಲಾಬಿ ಹೂವುಗಳನ್ನು ನೀಡಿ ತಮ್ಮ ಪ್ರೀತಿಪಾತ್ರರಿಗೆ ತಮ್ಮ ಪ್ರೀತಿಯನ್ನು ತಿಳಿಸುವ ಸಲುವಾಗಿ ವರ್ಷವೂ ರೋಸ್ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷವೂ ಫೆಬ್ರವರಿ 7ರಂದು ಗುಲಾಬಿ ಹೂವಿನ ದಿನವನ್ನು ಆಚರಿಸಲಾಗುತ್ತದೆ. ಏನಿದರ ಇತಿಹಾಸ? ಇದರ ಮಹತ್ವವೇನು? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

Rose Day 2024 Date: ರೋಸ್ ಡೇ ಯಾವಾಗ?; ಅದರ ಇತಿಹಾಸ, ಮಹತ್ವದ ಬಗ್ಗೆಯೂ ನಿಮಗೆ ಗೊತ್ತಿರಲಿ
ಗುಲಾಬಿImage Credit source: iStock
Follow us
ಸುಷ್ಮಾ ಚಕ್ರೆ
|

Updated on:Feb 07, 2024 | 4:43 PM

ವ್ಯಾಲೆಂಟೈನ್ಸ್ ವೀಕ್ 2024 ಸಮೀಪಿಸುತ್ತಿದೆ. ಫೆ. 7ರಿಂದ 14ರವರೆಗೆ ಪ್ರೇಮಿಗಳ ವಾರವೆಂದು ಆಚರಿಸಲಾಗುತ್ತದೆ. ಲವ್ ಬರ್ಡ್ಸ್ ಮತ್ತು ಜೋಡಿಗಳು ತಮ್ಮ ಉತ್ಸಾಹ ಮತ್ತು ಪ್ರೀತಿಯನ್ನು ಆಚರಿಸಲು ಮೊದಲ ದಿನದಂದು ರೋಸ್ ಡೇಯನ್ನಾಗಿ ಮಾಡಲಾಗಿದೆ. ಈ ಸಮಯದಲ್ಲಿ ಗುಲಾಬಿ ಹೂವುಗಳು ಹೆಚ್ಚಾಗಿರುವುದರಿಂದ ಗುಲಾಬಿ ಹೂವುಗಳನ್ನು ತಮ್ಮ ಸಂಗಾತಿಗೆ ನೀಡುವ ಮೂಲಕ ಪ್ರೇಮಿಗಳ ವಾರವನ್ನು ಆಚರಿಸಲಾಗುತ್ತದೆ. ವ್ಯಾಲೆಂಟೈನ್ಸ್ ಡೇ ವಾರದ ಮೊದಲ ದಿನದ ಕೇಂದ್ರಬಿಂದುವೆಂದರೆ ಸುಂದರವಾದ ಗುಲಾಬಿ ಹೂವುಗಳು. ರೋಸ್ ಡೇಯನ್ನು ಯಾವಾಗ ಆಚರಿಸಲಾಗುತ್ತದೆ? ಅದರ ಇತಿಹಾಸ ಮತ್ತು ಮಹತ್ವದ ಬಗ್ಗೆ ಮಾಹಿತಿ ಇಲ್ಲಿದೆ.

ರೋಸ್ ಡೇ ಯಾವಾಗ?:

ರೋಸ್ ಡೇ ಅನ್ನು ಪ್ರತಿ ವರ್ಷವೂ ಫೆಬ್ರವರಿ 7ರಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರೇಮಿಗಳು ತಮ್ಮ ಪ್ರೀತಿಪಾತ್ರರಿಗೆ ತಮ್ಮ ಭಾವನೆಗಳನ್ನು ತಿಳಿಸುವ ಸಂಕೇತವಾಗಿ ಗುಲಾಬಿ ಹೂವುಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಹಾಗಂತ ಇದು ಪ್ರೇಮಿಗಳಿಗೆ ಸೀಮಿತವಾದ ದಿನವಲ್ಲ. ನಾವು ಪ್ರೀತಿಸುವ ಅಪ್ಪ-ಅಮ್ಮ ಅಥವಾ ಸ್ನೇಹಿತರಿಗೆ ಕೂಡ ಗುಲಾಬಿ ಹೂವುಗಳನ್ನು ನೀಡಬಹುದು.

ಇದನ್ನೂ ಓದಿ: ಪ್ರೀತಿಯ ಕುರಿತ 5 ವಿಚಿತ್ರ ವೈಜ್ಞಾನಿಕ ಸಿದ್ಧಾಂತಗಳಿವು

ಪ್ರೇಮಿಗಳ ವಾರದ ಮೊದಲ ದಿನದ ಇತಿಹಾಸ ಮತ್ತು ಮಹತ್ವ:

ರೋಮನ್ ಪುರಾಣಗಳಲ್ಲಿ ಗುಲಾಬಿ ಹೂವುಗಳು ರಹಸ್ಯ ಮತ್ತು ಉತ್ಸಾಹದ ಸಂಕೇತವಾಗಿದೆ. ವಿಶೇಷವಾಗಿ ಸೌಂದರ್ಯ ಮತ್ತು ಪ್ರೀತಿಯೊಂದಿಗೆ ಸಂಬಂಧಿಸಿದ ರೋಮನ್ ದೇವತೆಯಾದ ಶುಕ್ರಕ್ಕೆ ಸಂಬಂಧಿಸಿದಂತೆ ಗುಲಾಬಿಯನ್ನು ಬಳಸಲಾಗುತ್ತದೆ. ಅದರ ಪರಿಮಳ ಮತ್ತು ಆಕರ್ಷಕ ವರ್ಣಗಳಿಂದಾಗಿ ಗುಲಾಬಿ ಹೂವುಗಳು ಏಷ್ಯನ್ ಮತ್ತು ಅರಬ್ ಸಂಸ್ಕೃತಿಗಳಂತಹ ಪೂರ್ವ ನಾಗರಿಕತೆಗಳಲ್ಲಿ ಪ್ರೀತಿಯೊಂದಿಗೆ ಸಂಬಂಧ ಹೊಂದಿವೆ. ವಿಕ್ಟೋರಿಯನ್ನರು ತಮ್ಮ ಪ್ರೀತಿಯ ಸಂಕೇತವಾಗಿ ಗುಲಾಬಿ ಹೂವುಗಳನ್ನು ಪ್ರಸ್ತುತಪಡಿಸುವ ಮೂಲಕ ಪರಸ್ಪರ ಪ್ರೀತಿಯನ್ನು ಪ್ರದರ್ಶಿಸುತ್ತಿದ್ದರು. ಆ ಸಮಯದಿಂದ ಗುಲಾಬಿ ಹೂವುಗಳನ್ನು ನೀಡುವುದು ಮತ್ತು ಸ್ವೀಕರಿಸುವುದನ್ನು ಪ್ರತಿ ವರ್ಷ ಫೆಬ್ರವರಿ 7ರಂದು “ಗುಲಾಬಿ ದಿನ” ಎಂದು ಸ್ಮರಿಸಲಾಗುತ್ತದೆ.

ಇದನ್ನೂ ಓದಿ: Valentine’s Week List 2024: ರೋಸ್​ ದಿನದಿಂದ ಪ್ರೇಮಿಗಳ ದಿನದವರೆಗೆ; ಪ್ರೇಮಿಗಳ ವಾರದ ಬಗ್ಗೆ ನಿಮಗೂ ಗೊತ್ತಿರಲಿ

ವ್ಯಾಲೆಂಟೈನ್ಸ್ ಡೇಗೆ ಕೆಂಪು ಗುಲಾಬಿಗಳು ಸ್ಪಷ್ಟವಾದ ಆಯ್ಕೆಯಾಗಿದ್ದರೂ ರೋಸ್ ಡೇಯಂದು ನಾವು ಕಾಳಜಿ ವಹಿಸುವವರಿಗೆ ವಿವಿಧ ಬಣ್ಣದ ಹೂವುಗಳನ್ನು ನೀಡಬಹುದು. ಬಿಳಿ ಗುಲಾಬಿ ಮುಗ್ಧತೆ ಮತ್ತು ಶುದ್ಧತೆಯನ್ನು ಪ್ರತಿನಿಧಿಸುತ್ತದೆ. ಹಳದಿ ಗುಲಾಬಿ ಸ್ನೇಹವನ್ನು ಪ್ರತಿನಿಧಿಸುತ್ತದೆ. ಕಿತ್ತಳೆ ಬಣ್ಣದ ಗುಲಾಬಿಗಳನ್ನು ಹಂಬಲವನ್ನು ಸೂಚಿಸಲು ಬಳಸಲಾಗುತ್ತದೆ. ಪಿಂಕ್ ಬಣ್ಣದ ಗುಲಾಬಿಗಳನ್ನು ಮೆಚ್ಚುಗೆ ಮತ್ತು ಧನ್ಯವಾದಗಳನ್ನು ವ್ಯಕ್ತಪಡಿಸಲು ಬಳಸಲಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:16 pm, Mon, 5 February 24

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್