ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾನಿಲಯದ ಸಂಶೋಧಕ ಡೇವಿಡ್ ಪೆರೆಟ್ ಅವರ ಅಧ್ಯಯನದಲ್ಲಿ, ಪ್ರಣಯ ಸಂಬಂಧದಲ್ಲಿ ಯುವಕರು ಹೆಚ್ಚಾಗಿ ತಮ್ಮ ತಾಯಿಯಂತೆ ಕಾಣುವ ಯುವತಿಯರತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಆದರೆ ಯುವತಿಯರು ತಮ್ಮ ತಂದೆಯಂತೆ ಕಾಳಜಿ, ಪ್ರೀತಿ, ಜವಾಬ್ದಾರಿ ಇರುವ ಪುರುಷರನ್ನು ಆಯ್ಕೆ ಮಾಡುತ್ತಾರೆ. ಈ ಅಧ್ಯಯನದ ಆವಿಷ್ಕಾರಗಳನ್ನು 2002ರಲ್ಲಿ ನ್ಯೂ ಸೈಂಟಿಸ್ಟ್ ನಿಯತಕಾಲಿಕದ 'ಲೈಕ್ ಫಾದರ್ ಲೈಕ್ ಹಸ್ಬೆಂಡ್' ಲೇಖನದಲ್ಲಿ ವರದಿ ಮಾಡಲಾಗಿದೆ.