ಪ್ರೇಮಿಗಳ ದಿನಾಚರಣೆ; ನೀರಿನಾಳದೊಳಗೆ 4 ನಿಮಿಷಗಳ ಕಾಲ ದೀರ್ಘಚುಂಬನಗೈದು ವಿಶ್ವದಾಖಲೆ ಮಾಡಿದ ಈ ಜೋಡಿ

Lip Lock Record : 13 ವರ್ಷಗಳ ಹಿಂದೆ ಬೇರೆ ಜೋಡಿಯೊಂದು 3 ನಿಮಿಷ 24 ಸೆಕೆಂಡುಗಳ ಕಾಲ ನೀರಿನಾಳದಲ್ಲಿ ದೀರ್ಘಚುಂಬನಗೈದು ವಿಶ್ವ​​​ ದಾಖಲೆ ಮಾಡಿತ್ತು. ಇದೀಗ ಈ ಜೋಡಿ ಆ ದಾಖಲೆ ಮುರಿದಿದೆ. ನೋಡಿ ವಿಡಿಯೋ.

ಪ್ರೇಮಿಗಳ ದಿನಾಚರಣೆ; ನೀರಿನಾಳದೊಳಗೆ 4 ನಿಮಿಷಗಳ ಕಾಲ ದೀರ್ಘಚುಂಬನಗೈದು ವಿಶ್ವದಾಖಲೆ ಮಾಡಿದ ಈ ಜೋಡಿ
4 ನಿಮಿಷ, 6 ಸೆಕೆಂಡುಗಳ ಕಾಲ ನೀರಿನಾಳದಲ್ಲಿ ದೀರ್ಘಚುಂಬನಗೈದ ದಂಪತಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Feb 15, 2023 | 3:47 PM

Viral Video : ಸಾಮಾಜಿಕ ಜಾಲತಾಣದಲ್ಲಿ ಪ್ರೇಮಿಗಳ ದಿನಾಚರಣೆಯ ವಿಡಿಯೋ, ಫೋಟೋಗಳು ತುಂಬಿ ತುಳುಕುತ್ತಿವೆ. ಪ್ರೇಮಿಸುವುದೇ ಒಂದು ಸಾಹಸ. ಇನ್ನು ಪ್ರೇಮವನ್ನೂ ಸಾಹಸದಿಂದಲೇ ವ್ಯಕ್ತಪಡಿಸುವುದು, ಅದಕ್ಕಿಂತಲೂ ಹೆಚ್ಚಿನ ಸಾಹಸ! ಇದೀಗ ದಕ್ಷಿಣ ಆಫ್ರಿಕಾದ ಬೆತ್ ನೀಲ್​ ಮತ್ತು ಕೆನಡಾದ ಮೈಲ್ಸ್​ ಕ್ಲೌಟಿಯರ್​ ಎಂಬ ದಂಪತಿ ಮಾಲ್ಡೀವ್ಸ್​ನ ಲಕ್ಸ್ ಸೌತ್ ಆರಿ ಅಟೋಲ್ ರೆಸಾರ್ಟ್​​ನ ಪೂಲ್​ ಆಳದಲ್ಲಿ ದೀರ್ಘಚುಂಬನಗೈದು ಗಿನ್ನೀಸ್​ ವಿಶ್ವ ದಾಖಲೆ (GWR) ಮಾಡಿದ್ದಾರೆ; ಇವರಿಬ್ಬರೂ 4 ನಿಮಿಷ 6 ಸೆಕೆಂಡುಗಳ ಕಾಲ ನೀರಿನಾಳದೊಳಗೆ ಲಿಪ್​ ಲಾಕ್ (Lip Lock)​ ಮಾಡಿದ್ದರು. ವಿಡಿಯೋ ಇಲ್ಲಿದೆ.  ​

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Guinness World Records (@guinnessworldrecords)

13 ವರ್ಷಗಳ ಹಿಂದೆ ಇಟಾಲಿಯನ್​ ಟಿವಿ ಷೋ, ಲೋ ಷೋ ಡೀ ರೆಕಾರ್ಡ್​ನಲ್ಲಿ ಈ ಮೊದಲು 3 ನಿಮಿಷ 24 ಸೆಕೆಂಡುಗಳ ಕಾಲ ನೀರಿನಾಳದಲ್ಲಿ ಮುಳುಗಿ ಲಿಪ್​ ಲಾಕ್​​​ ದಾಖಲೆಯನ್ನು ಬೇರೆ ಜೋಡಿಯೊಂದು ಮಾಡಿತ್ತು. ಇದೀಗ ಬೆತ್ ಮತ್ತು ಮೈಲ್ಸ್​ ಈ ದಾಖಲೆಯನ್ನು ಮುರಿದಿದ್ದಾರೆ. ವಿಶ್ವ ಗಿನ್ನೀಸ್​ ದಾಖಲೆ ಪ್ರಕಾರ, ಈ ಬೆತ್​ ಮತ್ತು ಮೈಲ್ಸ್​ ಫೆ. 4ರಂದು ಬೆಳಗ್ಗೆ 7.30ಕ್ಕೆ ಈ ಸಾಹಸದ ಪೂರ್ವತಯಾರಿಗೆ ಇಳಿದು ಉಸಿರಾಟದ ಅಭ್ಯಾಸಗಳು, ನೀರಿನೊಳಗೆ ದೀರ್ಘಚುಂಬನ ಇತ್ಯಾದಿಯಲ್ಲಿ ತೊಡಗಿಕೊಂಡರು. ಆನಂತರ 4 ನಿಮಿಷ 6 ಸೆಕೆಂಡುಗಳ ಕಾಲ ದೀರ್ಘಚುಂಬನಗೈದು ವಿಶ್ವ ದಾಖಲೆ ಮಾಡಿದರು.

ಇದನ್ನೂ ಓದಿ : 161 ಕಿ.ಮೀ ಲಾಂಗ್ ಡ್ರೈವ್ ಹೋಗಿಬಂದೆ, ಆದರೆ ಕಾರ್ ನಮ್ಮದಲ್ಲ!

ಈ ಸಾಹಸವನ್ನು ವೀಕ್ಷಿಸಲು ಭಾರೀ ಜನಸಮೂಹವೇ ನೆರೆದಿತ್ತು. ಅವರೆಲ್ಲರಿಗೂ ನಾಲ್ಕು ನಿಮಿಷಗಳ ಕಾಲ ಮೌನವಾಗಿರುವಂತೆ ಕೇಳಿಕೊಳ್ಳಲಾಯಿತು. ಈತನಕ ಈ ವಿಡಿಯೋ ಅನ್ನು 10 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. 65,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಅಕ್ವಾಮನ್​ ಅಕ್ವಾಗರ್ಲ್​ ಎಂದಿದ್ದಾರೆ ಅನೇಕರು. ಇದು ತುಂಬಾ ಅದ್ಭುತವಾಗಿದೆ ಎಂದಿದ್ದಾರೆ ಹಲವರು.

ಇದನ್ನೂ ಓದಿ : ದೇವಿ ಪ್ರತ್ಯಂಗಿರಾಳನ್ನು ಚೆನ್ನೈಗೆ ಕರೆತಂದ ಮೇಕಪ್​ ಕಲಾವಿದ ದೀಪನ್; ವಿಡಿಯೋ ವೈರಲ್

ಈ ದಂಪತಿಗೆ ಮೊದಲ ನೋಟದಲ್ಲೇ ಪ್ರೀತಿಯಾಗಿದೆ. ಐದು ವರ್ಷಗಳ ಕಾಲ ಲಿವ್​ಇನ್​ನಲ್ಲಿದ್ದ ಇವರಿಗೆ ಒಂದೂವರೆ ವರ್ಷದ ಮಗಳಿದ್ದಾಳೆ. ಇವರಿಬ್ಬರೂ ತಮ್ಮ ಸಾಹಸದ ವಿಡಿಯೋಗಳನ್ನು @freedivingcouple ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:47 pm, Wed, 15 February 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ