AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

50 ವರ್ಷಗಳ ನಂತರ 76ನೇ ವಯಸ್ಸಿನಲ್ಲಿ ಪಿಎಚ್​ಡಿ ಪೂರ್ಣಗೊಳಿಸಿದ ಈ ವ್ಯಕ್ತಿ

Ph.D : ‘ಕೆಲ ಸಮಸ್ಯೆಗಳು ಜೀವಿತಾವಧಿಯ ಅತ್ಯುತ್ತಮ ಅವಧಿಯನ್ನೇ ಬೇಡುತ್ತವೆ. ಅದಕ್ಕಾಗಿ ದೀರ್ಘ ಚಿಂತನೆಯ ಅವಶ್ಯಕತೆ ಇರುತ್ತದೆ. ಹಾಗಾಗಿ ನಾನು ಸಂಶೋಧನೆ ಪೂರ್ಣಗೊಳಿಸಲು 50 ವರ್ಷಗಳನ್ನು ತೆಗೆದುಕೊಂಡೆ’

50 ವರ್ಷಗಳ ನಂತರ 76ನೇ ವಯಸ್ಸಿನಲ್ಲಿ ಪಿಎಚ್​ಡಿ ಪೂರ್ಣಗೊಳಿಸಿದ ಈ ವ್ಯಕ್ತಿ
ಡಾ. ನಿಕ್​ ಆ್ಯಕ್ಸ್ಟೆನ್​
Follow us
TV9 Web
| Updated By: ಶ್ರೀದೇವಿ ಕಳಸದ

Updated on: Feb 16, 2023 | 11:04 AM

Viral News : ಶೈಕ್ಷಣಿಕವಾಗಿ ಆಸಕ್ತಿಯುಳ್ಳ ಯಾರಿಗೂ ಪಿಎಚ್​.ಡಿ ಮಾಡಬೇಕೆನ್ನುವ ಎನ್ನುವ ಕನಸು ಇದ್ದೇ ಇರುತ್ತದೆ. ಆದರೆ ಕೆಲವರು ಮಾತ್ರ ಪಟ್ಟುಬಿಡದೆ ಸಾಧ್ಯವಾಗಿಸಿಕೊಳ್ಳುತ್ತಾರೆ. ಇದೀಗ ಸುದ್ದಿಯಲ್ಲಿರುವ 76 ವರ್ಷದ ಈ ವ್ಯಕ್ತಿಯ ವೃತ್ತಾಂತವನ್ನು ಗಮನಿಸಿ. 1970ರಲ್ಲಿ ಇವರು ಪಿಎಚ್​.ಡಿ ಪ್ರವೇಶ ಪಡೆದರು. ಆದರೆ ಈ ಪದವಿಯನ್ನು ಪೂರ್ಣಗೊಳಿಸಿದ್ದು 50 ವರ್ಷಗಳ ನಂತರ!

ಡಾ. ನಿಕ್ ಆ್ಯಕ್ಸ್ಟೆನ್ 1970ರಲ್ಲಿ ಪಿಟ್ಸ್‌ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಮ್ಯಾಥಮ್ಯಾಟಿಕಲ್ ಸೋಶಿಯಾಲಜಿಯಲ್ಲಿ ಪಿಎಚ್​.ಡಿ ಪಡೆಯಲು ಫುಲ್‌ಬ್ರೈಟ್ ವಿದ್ಯಾರ್ಥಿವೇತನವನ್ನು ಪಡೆದರು. ಆದರೆ 5 ವರ್ಷಗಳ ನಂತರ ಅವರು ಪಿಎಚ್​.ಡಿ ಅರ್ಧಕ್ಕೇ ಬಿಟ್ಟು ಲಂಡನ್​ಗೆ ಮರಳಿದರು. ಆದರೆ ಇದೀಗ ಅಂದರೆ, 50 ವರ್ಷಗಳ ನಂತರ 2023ರ ಫೆಬ್ರವರಿ 14ರಂದು ಬ್ರಿಸ್ಟಲ್ ವಿಶ್ವವಿದ್ಯಾನಿಲಯದಿಂದ ಪಿಎಚ್​.ಡಿ ಪದವಿ ಸ್ವೀಕರಿಸಿದ್ದಾರೆ. ಇವರ ಪತ್ನಿ ಕ್ಲೇರ್ ಆಕ್ಸ್ಟೆನ್ ಮತ್ತು 11 ವರ್ಷದ ಮೊಮ್ಮಗಳು ಫ್ರೀಯಾ ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.

ಇದನ್ನೂ ಓದಿ : ಚೆನ್ನೈನ ಈ ಅಮ್ಮನಿಗೆ 90, ಮಗಳಿಗೆ 72; ಇವರೀಗ ಸ್ವಂತ ಉದ್ಯಮಿಗಳು

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಡಾ. ಆ್ಯಕ್ಸ್ಟೆನ್ 69 ನೇ ವಯಸ್ಸಿನಲ್ಲಿ ಬ್ರಿಸ್ಟಲ್ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದಲ್ಲಿ ಎಂಎ ಅಧ್ಯಯನ ಮಾಡಿದರು. ನಂತರ ಅದೇ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಪಿಎಚ್‌.ಡಿ ಪೂರೈಸಿದರು. ‘ಕೆಲ ಸಮಸ್ಯೆಗಳು ದೊಡ್ಡದಾಗಿರುತ್ತವೆ. ಕೆಲವೊಮ್ಮೆ ಜೀವಿತಾವಧಿಯ ಅತ್ಯುತ್ತಮ ಅವಧಿಯನ್ನೇ ಅವು ಬೇಡುತ್ತವೆ. ಅದಕ್ಕಾಗಿ ದೀರ್ಘ ಚಿಂತನೆಯ ಅವಶ್ಯಕತೆ ಇರುತ್ತದೆ. ಹಾಗಾಗಿ ನಾನು ಸಂಶೋಧನೆ ಪೂರ್ಣಗೊಳಿಸಲು 50 ವರ್ಷಗಳನ್ನು ತೆಗೆದುಕೊಂಡೆ. ಈ ಸಂದರ್ಭದಲ್ಲಿ ಬ್ರಿಸ್ಟಲ್​ ವಿಶ್ವವಿದ್ಯಾಲಯಕ್ಕೆ ಕೃತಜ್ಞನಾಗಿದ್ದೆನೆ’ ಎಂದು ವಿಶ್ವವಿದ್ಯಾಲಯದ ಪತ್ರಿಕಾ ಪ್ರಕಟಣೆಯಲ್ಲಿ ಆ್ಯಕ್ಸ್ಟೆನ್​ ಹೇಳಿದ್ದಾರೆ.

ಇದನ್ನೂ ಓದಿ : ಇಲ್ಲೊಂದು ಬೆಕ್ಕನ್ನು ಬೆಂಚಿಗೆ ಕಟ್ಟಿ ಹಾಕಲಾಗಿದೆ, ಮುಂದೇನಾಯಿತೆಂದು ನೋಡಿ

ಪದವಿ ಪ್ರದಾನ ಸಂದರ್ಭದಲ್ಲಿ ಹಾಜರಿದ್ದ ಸಂಶೋಧನಾ ವಿದ್ಯಾರ್ಥಿಗಳೆಲ್ಲರು ಸುಮಾರು 23 ವಯಸ್ಸಿನವರಾಗಿದ್ದರು. ಆದರೆ ಅವರೆಲ್ಲರ ನಡುವೆ ಇವರೊಬ್ಬರೇ ಹಿರಿಯ ವ್ಯಕ್ತಿ. ‘ಈ ಎಳೆಯರು ನನ್ನನ್ನು ತಮ್ಮಲ್ಲಿ ಒಬ್ಬನಂತೆ ಕಂಡರು. ಇವರೆಲ್ಲರೂ ಅತ್ಯಂತ ಬುದ್ಧಿವಂತರು, ಉತ್ತಮ ವಿಚಾರಗಳಿಂದ ಕೂಡಿರುವವರು. ಅವರೊಂದಿಗೆ ಸಂವಾದದಲ್ಲಿ ತೊಡಗಲು ನನಗೆ ಖುಷಿ ಇದೆ’ ಎಂದಿದ್ದಾರೆ ಆ್ಯಕ್ಸ್ಟೆನ್.

ಸದ್ಯ ಇವರು ಪತ್ನಿಯೊಂದಿಗೆ ಸಮರ್ಸೆಟ್​ನಲ್ಲಿ ವಾಸವಾಗಿದ್ಧಾರೆ. ಇಬ್ಬರು ಮಕ್ಕಳು ಮತ್ತು ನಾಲ್ಕು ಮೊಮ್ಮಕ್ಕಳನ್ನು ಇವರು ಹೊಂದಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್