1 ಕೇಜಿಗೆ ರೂ. 1800! ಬೂದಿ ಎಂದು ಗೇಲಿ ಮಾಡುತ್ತೀರಾ? ನೋಡಿ ಅಮೇಝಾನ್​ನಲ್ಲಿ; ಬಾಬಾ ರಾಮದೇವ್

Baba Ramdev : ‘ಡಿಶ್​ ವಾಷರ್​ ಬಳಸಿಯೇ ಕ್ಯಾನ್ಸರ್​ನಂಥ ರೋಗ ತಂದುಕೊಂಡಿದ್ದೀರಿ. ನೋಡಿ, ನಮ್ಮ ಪೂರ್ವಜರು ಪಾತ್ರೆ ತೊಳೆಯಲು ಉಪಯೋಗಿಸುತ್ತಿದ್ದ ಬೂದಿಯನ್ನೇ ಇದೀಗ ಅಮೇಝಾನ್ ಮಾರಾಟ ಮಾಡುತ್ತಿದೆ.’ ಬಾಬಾ ರಾಮದೇವ

1 ಕೇಜಿಗೆ ರೂ. 1800! ಬೂದಿ ಎಂದು ಗೇಲಿ ಮಾಡುತ್ತೀರಾ? ನೋಡಿ ಅಮೇಝಾನ್​ನಲ್ಲಿ; ಬಾಬಾ ರಾಮದೇವ್
ಅಮೇಝಾನ್​ನಲ್ಲಿ ಲಭ್ಯವಿರುವ ಬೂದಿಯ ಚಿತ್ರ ಮತ್ತು ಬಾಬಾ ರಾಮದೇವ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Feb 16, 2023 | 2:06 PM

Viral News : ನಮ್ಮ ಪೂರ್ವಜರ ಜೀವನಶೈಲಿಯು ವೈಜ್ಞಾನಿಕ ತಳಹದಿಯಿಂದ ಕೂಡಿದೆ. ಆದ್ದರಿಂದ ಸ್ವದೇಶಿ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟವನ್ನು ಪ್ರೋತ್ಸಾಹಿಸಬೇಕು. ಈ ಮೂಲಕ ದೇಶೀಯ ಸಂಸ್ಕೃತಿಯನ್ನು ಕಾಪಾಡಬೇಕು ಎಂದು ಪ್ರತಿಪಾದಿಸುವ ಬಾಬಾ ರಾಮ್​ದೇವ್​ ಈಗ ಟ್ವಿಟರ್​ ಮೂಲಕ ಅಮೇಝಾನ್​ನಲ್ಲಿ ಮಾರಾಟಕ್ಕಿರುವ ಬೂದಿಯ ಪ್ಯಾಕೆಟ್ ಸುತ್ತ ಚರ್ಚೆ ಆರಂಭಿಸಿದ್ದಾರೆ. ಪಾತ್ರೆ ತೊಳೆಯಲು ಉಪಯೋಗಿಸುವ ಈ ಬೂದಿಯನ್ನು ಅವೈಜ್ಞಾನಿಕ ಎಂದು ಗೇಲಿ ಮಾಡುತ್ತಿರುವವರೆಲ್ಲ ಒಮ್ಮೆ ಅಮೇಝಾನ್​ಗೆ ಹೋಗಿ ನೋಡಿ ಎನ್ನುತ್ತಿದ್ದಾರೆ.

‘ನಮ್ಮ ಪೂರ್ವಜರು ಪಾತ್ರೆ ತೊಳೆಯಲು ಉಪಯೋಗಿಸುತ್ತಿದ್ದ ಬೂದಿಯನ್ನು ಅವೈಜ್ಞಾನಿಕ ಎಂದು ಗೇಲಿ ಮಾಡುತ್ತಿದ್ದಿರಿ. ನೀವು ಕೆಮಿಕಲ್ ಡಿಶ್ ವಾಷ್​ ಬಳಸುವುದನ್ನು ರೂಢಿ ಮಾಡಿಕೊಂಡಿದ್ದೇ ಕ್ಯಾನ್ಸರ್​ನಂಥ  ಕಾಯಿಲೆಗಳಿಗೆ ಕಾರಣವಾಯಿತು. ನೋಡಿ ಇಂದು ಅಮೇಝಾನ್​ನಂತಹ ಕಂಪನಿ ಅದೇ ಒಲೆಬೂದಿಯನ್ನು ಒಂದು ಕೆ.ಜಿ.ಗೆ ರೂ 1800 ಯಂತೆ ಮಾರಾಟ ಮಾಡುತ್ತಿದೆ.’ ಎಂದು ರಾಮದೇವ ಟ್ವೀಟ್ ಮಾಡಿದ್ದಾರೆ.

ಫೆ.13ರಂದು ಮಾಡಿದ ಈ ಟ್ವೀಟ್​ ಅನ್ನು ಈತನಕ ಸುಮಾರು 1.1 ಮಿಲಿಯನ್​ ಜನರು ನೋಡಿದ್ದಾರೆ. 20,000 ಜನರು ಇಷ್ಟಪಟ್ಟಿದ್ದಾರೆ. ಸುಮಾರು 6,000 ಜನರು ರೀಟ್ವೀಟ್ ಮಾಡಿದ್ದಾರೆ. ಸುಮಾರು 600 ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : 50 ವರ್ಷಗಳ ನಂತರ 76ನೇ ವಯಸ್ಸಿನಲ್ಲಿ ಪಿಎಚ್​ಡಿ ಪೂರ್ಣಗೊಳಿಸಿದ ಈ ವ್ಯಕ್ತಿ

ನೀವು ಕೂಡ ಇಂಥ ಬೂದಿಯನ್ನು ಹತ್ತು ರೂಪಾಯಿಗೆ ಪ್ಯಾಕ್ ಮಾಡಿ ಮನೆಮನೆಗೆ ತಲುಪಿಸಿ ಎಂದು ಸಲಹೆ ಕೊಟ್ಟಿದ್ದಾರೆ ಮತ್ತೊಬ್ಬರು. ಭಾರತದ ಪ್ರತೀ ವಸ್ತುವೂ ಸತ್ಯ ಸನಾತನದಿಂದ ಕೂಡಿದೆ. ನೀವು ಅಂಥ ವಸ್ತುಗಳ ಉತ್ಪನ್ನಕ್ಕೆ ಚೆನ್ನಾಗಿ ಮಾರುಕಟ್ಟೆ ಒದಿಗಿಸಿರುವಿರಿ ಎಂದು ಮಗದೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : 67 ವರ್ಷದ ಅಜ್ಜಿ ಸೀರೆಯುಟ್ಟು ರೋಪ್​ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್

‘ಲಾಲಾ, ಇದನ್ನು ಪತಂಜಲಿಯಿಂದ ರೂ.400ಕ್ಕೆ ಮಾರಬಹುದು ಯೋಚಿಸಿ’ ಎಂದಿದ್ದಾರೆ ಒಬ್ಬರು. ನೀವು ದಂತಕಾಂತಿ ಪೇಸ್ಟ್​ನಲ್ಲಿ ಫ್ಲೊರೈಡ್​ ಯಾಕೆ ಮಿಕ್ಸ್ ಮಾಡುತ್ತಿದ್ದೀರಿ? ಎಂದು ಮತ್ತೊಬ್ಬರು ಕೇಳಿದ್ದಾರೆ. ನೀವು ಎಷ್ಟು ಹಸುಗಳನ್ನು ಸಾಕಿಕೊಂಡಿದ್ದೀರಿ? ಆದರೆ ನಿಮ್ಮ ತುಪ್ಪ ಮಾತ್ರ ನಕಲಿಯಾಗಿದೆ ಎಂದಿದ್ದಾರೆ ಮಗದೊಬ್ಬರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:06 pm, Thu, 16 February 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ