ಇಲ್ಲೊಂದು ಬೆಕ್ಕನ್ನು ಬೆಂಚಿಗೆ ಕಟ್ಟಿ ಹಾಕಲಾಗಿದೆ, ಮುಂದೇನಾಯಿತೆಂದು ನೋಡಿ

Cat : ಈ ಬೆಕ್ಕನ್ನು ಸಾಕಿದವನಿಗೆ ಕಠಿಣ ಶಿಕ್ಷೆಯಾಗಬೇಕು. ತಮ್ಮ ರಂಜನೆಗಾಗಿ ಪ್ರಾಣಿಗಳನ್ನು ಹೀಗೆ ಹಿಂಸಿಸಬಾರದು ಎಂದು ನೆಟ್ಟಿಗರು ಆಕ್ರೋಶಗೊಂಡಿದ್ದಾರೆ. ವಿಡಿಯೋ ನೋಡಿ.

ಇಲ್ಲೊಂದು ಬೆಕ್ಕನ್ನು ಬೆಂಚಿಗೆ ಕಟ್ಟಿ ಹಾಕಲಾಗಿದೆ, ಮುಂದೇನಾಯಿತೆಂದು ನೋಡಿ
ಕಟ್ಟಿದ ಬೆಂಚನ್ನೇ ಎಳೆದುಕೊಂಡು ಹೋಗುತ್ತಿರುವ ಬೆಕ್ಕು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Feb 09, 2023 | 3:40 PM

Viral Video : ಪ್ರಾಣಿಗಳು ತಮ್ಮ ಆಟದೊಂದಿಗೆ ತಾವಾಗಿಯೇ ನಮ್ಮನ್ನು ರಂಜಿಸುವುದು ಬೇರೆ. ಆದರೆ ನಮ್ಮ ರಂಜನೆಗೆ ಪ್ರಾಣಿಗಳಿಗೆ ತೊಂದರೆ ಕೊಡುವುದು ಬೇರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಯಾರೋ ಒಬ್ಬಾತ ಈ ಬೆಕ್ಕನ್ನೇನೋ ಸಾಕಿದ್ದಾನೆ. ಆದರೆ ತನ್ನ ತಿಳಿಗೇಡಿತನದಿಂದ ಈ ಬೆಕ್ಕನ್ನು ಬೆಂಚಿಗೆ ಕಟ್ಟಿದ್ಧಾನೆ. ಆಗ ಈ ಬೆಕ್ಕು ಏನು ಮಾಡಬೇಕು? ಅದೇನು ನಾಯಿಯೇ, ಕಟ್ಟಿದಲ್ಲಿ ಇರಲು? ನೋಡಿ ಏನು ಮಾಡಿದೆ.

ಈತ ಕಟ್ಟಿಹಾಕಿರುವುದು ಸಣ್ಣ ಬೆಂಚಲ್ಲ. ಕಟ್ಟಿಗೆಯ ದೊಡ್ಡ ಬೆಂಚು. ದಾರಿಗಾಣದ ಬೆಕ್ಕು ಅದನ್ನೇ ಎಳೆದುಕೊಂಡು ಹೊರಟಿದೆ. ಇದನ್ನು ನೋಡಿದ ನೆಟ್ಟಿಗರು ಇದರ ಪೋಷಕನ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ತನಕ ಈ ವಿಡಿಯೋ ಅನ್ನು 1.7 ಲಕ್ಷ ಜನರು ನೋಡಿದ್ದಾರೆ. ಸಾವಿರಕ್ಕಿಂತಲೂ ಹೆಚ್ಚು ಜನರು ಇಷ್ಪಪಟ್ಟಿದ್ದಾರೆ. 145 ಜನರು ರೀಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಹಾಡಹಗಲೇ ಹುಲಿಯೊಂದು ರಸ್ತೆ ದಾಟುತ್ತಿರುವ ವಿಡಿಯೋ ವೈರಲ್

ಇದು ಪ್ರಾಣಿಹಿಂಸೆ ಎಂದು ಅನೇಕರು ಹೇಳಿದ್ದಾರೆ. ಈ ಬೆಕ್ಕಿನ ಪೋಷಕನನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡಬೇಕು ಎಂದಿದ್ದಾರೆ ಕೆಲವರು. ಬೇಗ ಇದರ ಪೋಷಕ ಕಟ್ಟಿದ್ದನ್ನು ಬಿಚ್ಚಬಾರದೆ? ಎಂದು ಅನೇಕರು ಕೇಳಿದ್ದಾರೆ. ಆದರೆ ರೀಲ್​ ಮಾಡಲೆಂದೇ ಹೀಗೆ ಆತ ಮಾಡಿದ್ದರೆ ಏನು ಮಾಡುವುದು ಎಂದು ಮತ್ತೊಂದಿಷ್ಟು ಜನ ಹೇಳಿದ್ದಾರೆ.

ಇದನ್ನೂ ಓದಿ : ನಿನ್ನನ್ನು ಬಿಟ್ಟುಕೊಡಲೊಲ್ಲೇ ಅಕ್ಕಾ; ವೈರಲ್ ಆಗುತ್ತಿರುವ ನಾಯಿಯ ಈ ವಿಡಿಯೋ

ಪ್ರಾಣಿಗಳನ್ನು ಸಾಕಿದ ನಂತರ ಅವುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ನಮ್ಮ ಖುಷಿಗಾಗಿ, ಮಜಾಗಾಗಿ ಅವುಗಳಿಗೆ ತೊಂದರೆ ಕೊಡಬಾರದು. ಈಗಂತೂ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಲೆಂದೇ ಪ್ರಾಣಿಗಳನ್ನು ತಮ್ಮ ಮನಬಂದಂತೆ ಕುಣಿಸುತ್ತಾರೆ. ಆದರೆ ಇದರಿಂದ ಅವುಗಳಿಗೆ, ಖುಷಿ ಸಮಾಧಾನ ಆಗುವುದೆ? ಅವೂ ಜೀವವೇ ತಾನೆ? ಸಾಕುವ ಮೊದಲು ಯೋಚಿಸಿ. ಸಾಕಿದ ನಂತರ ಪ್ರಜ್ಞೆಯಿಂದ ಪೋಷಿಸಿ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:40 pm, Thu, 9 February 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್