ಮಾನವ, ಬೇಗ ಬಾ ಕ್ಲಾಸಿಗೆ ಹೊತ್ತಾಯ್ತು; ಝೀಬ್ರಾ ಕ್ರಾಸಿಂಗ್ ಮಾಡಲು ಕಲಿಯಬೇಕೆ?
Dog : ‘ಜಾಗ ತಲುಪಬೇಕೆಂದರೆ ಹೀಗೆ ರಸ್ತೆ ದಾಟಲೇಬೇಕು. ಈ ಟ್ರಾಫಿಕ್ ಯಾವಾಗಲೂ ಹೀಗೇ ಇರುತ್ತದೆ. ಹಾಗಾಗಿ ಝೀಬ್ರಾ ಕ್ರಾಸಿಂಗ್ ಮೂಲಕವೇ ಸಾಗಬೇಕು. ರೆಡ್ ಸಿಗ್ನಲ್ ಬೀಳುವ ತನಕ ಕಾಯ್ದು ನಂತರ ಚಲಿಸಬೇಕು.’
Viral Video : ರಸ್ತೆ ದಾಟುವುದೆಂದರೆ ಸಾಮಾನ್ಯವಾಗಿ ಆತಂಕ ಇದ್ದದ್ದೇ. ಆದರೆ ಕೆಲವರಿಗೆ ಬೇಕೆಂದೇ ರಸ್ತೆ ನಿಯಮ ಮುರಿಯುವಲ್ಲಿ ಹೆಚ್ಚು ಆಸಕ್ತಿ ಉತ್ಸಾಹ ಇರುತ್ತದೆ. ಇನ್ನೂ ಕೆಲವರು ರಸ್ತೆ ದಾಟುವುದೊಂದೇ ಗುರಿ, ಯಾವ ನಿಯಮಗಳೂ ನಮಗಲ್ಲ ಎಂಬ ಗುಂಗಿನಲ್ಲಿ ಹೊರಟಿರುತ್ತಾರೆ. ಆದರೆ ನಗರಪ್ರದೇಶಗಳಲ್ಲಿ ಯಾರೇ ಆಗಲಿ ನಿಯಮಗಳನ್ನು ಅನುಸರಿಸಲೇಬೇಕು. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಇವರು ಹೇಗೆ ಝೀಬ್ರಾ ಕ್ರಾಸಿಂಗ್ ಮಾಡುತ್ತಿದ್ದಾರೆ ಎಂದು.
They know ?? pic.twitter.com/p8QfXvyafw
ಇದನ್ನೂ ಓದಿ— CCTV_IDIOTS (@cctv_idiots) February 8, 2023
ಈಗಾಗಲೇ ಈ ವಿಡಿಯೋ ಅನ್ನು 1.3 ಲಕ್ಷ ಜನರು ನೋಡಿದ್ದಾರೆ. 1,300ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. 136 ಜನರು ರೀಟ್ವೀಟ್ ಮಾಡಿದ್ದಾರೆ. ನಾಯಿಗೂ ರಸ್ತೆನಿಯಮ ಅರ್ಥವಾಗುತ್ತಿದೆ. ಮನುಷ್ಯರಾದ ನಮಗೆ ಯಾಕೆ ಅರ್ಥವಾಗುತ್ತಿಲ್ಲ? ನಾಯಿಯನ್ನು ನೋಡಿ ಕಲಿಯಿರಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಇದನ್ನೂ ಓದಿ : ರಾಜ್ಮಾ ಚಾವಲ್; ತೋಳಿನ ಮೇಲೆ ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿಯ ಫೋಟೋ ವೈರಲ್
ರೆಡ್ ಸಿಗ್ನಲ್ ಬೀಳುವ ತನಕ ಈ ನಾಯಿ ಝೀಬ್ರಾ ಕ್ರಾಸಿಂಗ್ನ ಅಂಚಿಗೆ ನಿಲ್ಲುತ್ತದೆ. ಸಿಗ್ನಲ್ ಬಿದ್ದು ಕಾರುಗಳು ನಿಲ್ಲುತ್ತಿದ್ದಂತೆ ಝೀಬ್ರಾ ಕ್ರಾಸಿಂಗ್ ಮಾಡುತ್ತದೆ. ಭಲೇ ಇಷ್ಟು ತಿಳಿವಳಿಕೆಯನ್ನು ಈ ನಾಯಿ ಹೇಗೆ ಕಲಿಯಿತು? ಇತ್ತೀಚೆಗೆ ಅನೇಕ ವಿಡಿಯೋಗಳನ್ನು ನೋಡುತ್ತಲೇ ಇದ್ದೇನೆ, ನಾಯಿ, ಕೋತಿ, ಬೆಕ್ಕು ಹೀಗೆ ಅನೇಕ ಪ್ರಾಣಿಗಳು ಮನುಷ್ಯನಿಗಿಂತ ಹೆಚ್ಚು ತಿಳಿವಳಿಕೆ, ಸೂಕ್ಷ್ಮತೆಯಿಂದ ವರ್ತಿಸುತ್ತಿವೆ ಎನ್ನುತ್ತಿದೆ ನೆಟ್ಮಂದಿ.
ಇದನ್ನೂ ಓದಿ : ಹಾಡಹಗಲೇ ಹುಲಿಯೊಂದು ರಸ್ತೆ ದಾಟುತ್ತಿರುವ ವಿಡಿಯೋ ವೈರಲ್
ಹೇ ಮಾನವ ಪ್ರಾಣಿಗಳು ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳುತ್ತಿವೆ. ಆದರೆ ನೀನು? ಎಂದು ಕೇಳಿದ್ದಾರೆ ಒಬ್ಬರು. ಈ ನಾಯಿ ಮನುಷ್ಯರಿಗಿಂತ ಸ್ಮಾರ್ಟ್ ಮತ್ತು ನಾಗರಿಕ ಎಂದು ಮತ್ತೊಬ್ಬರು ಹೇಳಿದ್ದಾರೆ. ಝೀಬ್ರಾ ಕ್ರಾಸ್ ನೋಡಿದಾಗೆಲ್ಲ ನಿಮಗೆ ಈ ವಿಡಿಯೋದೊಳಗಿನ ನಾಯಿ ನೆನಪಿಗೆ ಬಂದೇ ಬರುತ್ತದೆ ಅಲ್ಲವೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:44 pm, Thu, 9 February 23