‘ನಾನು ಬದುಕಿರುವವರೆಗೂ ಇದನ್ನು ಕಾಪಿಟ್ಟುಕೊಳ್ಳುತ್ತೇನೆ’ ಈ ಅಮ್ಮ ಹೀಗೇಕೆ ಹೇಳುತ್ತಿರುವುದು?
Mother and Child : ಇದಕ್ಕೆ ಫ್ರೇಮ್ ಹಾಕಿಸಿ ನಿಮ್ಮ ಆಫೀಸಿನಲ್ಲಿಟ್ಟುಕೊಳ್ಳಿ ಎಂದು ಒಬ್ಬರು. ಡ್ರಾಯರ್ ತುಂಬಾ ನನ್ನ ಮಕ್ಕಳು ಬರೆದ ಪತ್ರಗಳಿವೆ, ಅವುಗಳಲ್ಲಿ ಮಗಳು ಕೇಳಿದ ಕ್ಷಮೆಯ ಪತ್ರಗಳೇ ಹೆಚ್ಚಿವೆ ಎಂದಿದ್ದಾರೆ ಇನ್ನೊಬ್ಬರು. ನೀವೇನಂತೀರಿ?
Viral News : ಅಮ್ಮನನ್ನು ಮಕ್ಕಳು ಅರ್ಥ ಮಾಡಿಕೊಳ್ಳತೊಡಗಿದರೆ ಆ ಪಯಣವೇ ಬೇರೆ. ಅಮ್ಮನ ರೆಕ್ಕೆಗೆ ಇದು ಮತ್ತಷ್ಟು ಬಲವನ್ನು ತುಂಬುತ್ತದೆ. ಆದರೆ ಈ ಹಂತಕ್ಕಾಗಿ ಒಂದಷ್ಟು ವರ್ಷಗಳನ್ನು ಅಮ್ಮ ಸವೆಸಲೇಬೇಕು. ಆದರೆ ಇದೀಗ ವೈರಲ್ ಆಗಿರುವ ಈ ಟ್ವೀಟ್ ನೋಡಿ. ಈಗಷ್ಟೇ ಅಕ್ಷರ ಕಲಿಯುತ್ತಿರುವ ಮಗು ಅಮ್ಮನಿಗೆ ಹೀಗೆ ಪತ್ರ ಬರೆದಿದೆ. ಈ ಮಗುವಿಗೆ ಕೇವಲ ಆರುವರ್ಷ. ‘ಆರು ವರ್ಷದ ಮಗುವಿನಿಂದ ಈಗಷ್ಟೇ ಇದು ಸಿಕ್ಕಿತು. ನಾನು ಬದುಕಿರುವವರೆಗೂ ಇದನ್ನು ಕಾಪಿಟ್ಟುಕೊಳ್ಳುತ್ತೇನೆ’ ಎಂದು ವೈದ್ಯೆಯಾಗಿರುವ ಮಗುವಿನ ಅಮ್ಮ ಈ ನೋಟ್ ಅನ್ನು ಟ್ವೀಟ್ ಮಾಡಿದ್ದಾರೆ.
Just found this note from 6 and I will be keeping it until I die. pic.twitter.com/6qm0Fa2NOu
ಇದನ್ನೂ ಓದಿ— Shematologist, MD (@acweyand) February 7, 2023
ಕ್ಷಮಿಸಿ ಅಮ್ಮಾ, ನಿಮ್ಮ ದಿನ ಈವತ್ತು ಒತ್ತಡದಿಂದ ಕೂಡಿತ್ತೋ ಏನೋ ಎಂದು ಕೆಳಗೆ ಎರಡು ಪುಟ್ಟ ಹೃದಯಗಳನ್ನು ಚಿತ್ರಿಸಿದೆ ಈ ಮಗು. ಫೆಬ್ರವರಿ 7 ರಂದು ಇದನ್ನು ಟ್ವೀಟ್ ಮಾಡಲಾಗಿದೆ. ಈತನಕ ಸುಮಾರು 63,000 ಜನರು ಇದನ್ನು ನೋಡಿದ್ದಾರೆ. 2,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ವರ್ಷದ ಅಪ್ಪ ಪ್ರಶಸ್ತಿ ಈ ಅಪ್ಪನಿಗೇ! ವೈರಲ್ ಆದ ವಿಡಿಯೋ
ಇದಕ್ಕೆ ಫ್ರೇಮ್ ಹಾಕಿಸಿ ನಿಮ್ಮ ಆಫೀಸಿನಲ್ಲಿ ಇರಿಸಿಕೊಳ್ಳಿ ಅಥವಾ ಲ್ಯಾಮಿನೇಟ್ ಮಾಡಿ ಕಾರ್ವೈಸರ್ಗೆ ಹಾಕಿ. ಯಾವಾಗ ನಿಮಗೆ ಒತ್ತಡದ ದಿನ ಎಂದು ಅನ್ನಿಸುತ್ತದೆಯೋ ಆಗ ಇದನ್ನು ನೋಡಬಹುದು ಎಂದು ಒಬ್ಬರು ಹೇಳಿದ್ದಾರೆ. ಅಮ್ಮ ಅಪ್ಪನನ್ನು ಬೆಚ್ಚಗಾಗಿಸುವ ಈ ಪತ್ರಗಳು ಬಹಳ ಅಮೂಲ್ಯವಾದವುಗಳು ಎಂದು ಇನ್ನೂ ಒಬ್ಬರು ಹೇಳಿದ್ದಾರೆ.
ಇದನ್ನೂ ಓದಿ : ನಿನ್ನನ್ನು ಬಿಟ್ಟುಕೊಡಲೊಲ್ಲೇ ಅಕ್ಕಾ; ವೈರಲ್ ಆಗುತ್ತಿರುವ ನಾಯಿಯ ಈ ವಿಡಿಯೋ
ನನ್ನ ಡ್ರಾಯರ್ ತುಂಬಾ ನನ್ನ ಮಕ್ಕಳು ಬರೆದ ಪತ್ರಗಳನ್ನು ಇಟ್ಟುಕೊಂಡಿದ್ದೇನೆ. ಅವುಗಳಲ್ಲಿ ನನ್ನ ಮಗಳು ಯಾವ್ಯಾವುದೋ ವಿಷಯಕ್ಕೆ ಕ್ಷಮೆ ಕೇಳಿದ್ದಾಳೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನಾನು ಇಂಥ ಪತ್ರಗಳನ್ನು ಗ್ರೀಟಿಂಗ್ ಕಾರ್ಗೆ ಪರಿವರ್ತಿಸಿ ಜೋಪಾನಿಸಿಟ್ಟುಕೊಂಡಿದ್ದೇನೆ ಎಂದು ಮಗದೊಬ್ಬರು ಹೇಳಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:10 pm, Thu, 9 February 23