Valentine’s Week 2024: ಪ್ರೇಮಿಗಳ ವಾರವನ್ನು ಮತ್ತಷ್ಟು ವಿಶೇಷವಾಗಿಸುವ ಸಿಹಿತಿಂಡಿಗಳಿವು

Valentine’s Week Dessert Ideas: ಪ್ರೇಮಿಗಳ ವಾರ ಶುರುವಾಗಿದೆ. ನಮಗೆ ಇಷ್ಟವಾದವರನ್ನು ಸಂತೋಷಪಡಿಸಲು ಇರುವ ಮುಖ್ಯ ಮಾರ್ಗವೆಂದರೆ ಅವರಿಗೆ ಇಷ್ಟವಾದ ಆಹಾರ, ತಿನಿಸುಗಳನ್ನು ನೀಡುವುದು. ನಾಲಿಗೆ ಮತ್ತು ಹೊಟ್ಟೆಗೆ ತೃಪ್ತಿಯಾದರೆ ಆ ವ್ಯಕ್ತಿ ಖಂಡಿತ ಖುಷಿಯಾಗಿರುತ್ತಾರೆ. ಹೀಗಾಗಿ, ವ್ಯಾಲೆಂಟೈನ್ಸ್ ವೀಕ್​ನಲ್ಲಿ ನಿಮ್ಮಿಷ್ಟದವರಿಗೆ ನೀವು ನೀಡಬಹುದಾದ ಸಿಹಿತಿಂಡಿಗಳ ಬಗ್ಗೆ ಮಾಹಿತಿ ಇಲ್ಲಿದೆ.

Valentine's Week 2024: ಪ್ರೇಮಿಗಳ ವಾರವನ್ನು ಮತ್ತಷ್ಟು ವಿಶೇಷವಾಗಿಸುವ ಸಿಹಿತಿಂಡಿಗಳಿವು
ಸಾಂದರ್ಭಿಕ ಚಿತ್ರ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Feb 06, 2024 | 5:44 PM

ಫೆಬ್ರವರಿ ತಿಂಗಳು ಬಂದಿದೆ. ಇನ್ನೊಂದು ವಾರ ಪ್ರೇಮಿಗಳ ವಾರವೆಂದು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಗಂಡು-ಹೆಣ್ಣು ತಮ್ಮ ಸಂಗಾತಿಗೆ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ, ತಾವು ಇಷ್ಟಪಡುವವರಿಗೆ ಸರ್​ಪ್ರೈಸ್​ಗಳನ್ನು ನೀಡುತ್ತಾರೆ. ರೋಸ್ ಡೇಯಿಂದ ಆರಂಭಿಸಿ ಪ್ರೇಮಿಗಳ ದಿನದವರೆಗೆ ಪ್ರತಿ ದಿನವೂ ವಿಭಿನ್ನ ದಿನವಾಗಿ ಆಚರಿಸಲಾಗುತ್ತದೆ. ಈ ಸಮಯದಲ್ಲಿ ನಿಮ್ಮ ಸಂಗಾತಿಗೆ ಇಷ್ಟವಾದ ಸಿಹಿತಿಂಡಿಗಳನ್ನು ನೀಡಿ ಇಂಪ್ರೆಸ್ ಮಾಡಬಹುದು.

ಎಗ್​ಲೆಸ್ ವೆನಿಲ್ಲಾ ಕೇಕ್:

ನಿಮ್ಮ ಸಂಗಾತಿಗೆ ಸಿಂಪಲ್ ಆದ ಸ್ವೀಟ್ ಕೊಡಬೇಕೆಂದರೆ ವೆನಿಲ್ಲಾ ಕೇಕ್ ನೀಡಬಹುದು. ನಿಮ್ಮ ಆಹಾರದಲ್ಲಿ ನೀವು ಮೊಟ್ಟೆಗಳನ್ನು ಆದ್ಯತೆ ನೀಡದಿದ್ದರೆ ಮೊಟ್ಟೆ ಹಾಕದ ಕೇಕ್ ನೀಡಿ.

ಇದನ್ನೂ ಓದಿ: Propose Day 2024 Date: ಪ್ರಪೋಸ್ ಡೇ ಯಾವಾಗ?; ಅದರ ಇತಿಹಾಸ, ಪ್ರಾಮುಖ್ಯತೆಯೇನು?

ಕ್ಯಾರಾಮೆಲ್ ಕಸ್ಟರ್ಡ್:

ನಿಮ್ಮ ಪ್ರೇಮಿಗಳ ವಾರಕ್ಕೆ ಕ್ಯಾರಮೆಲ್‌ನ ಮಾಧುರ್ಯವನ್ನು ಸೇರಿಸಿ. ಮೊಟ್ಟೆ ಮತ್ತು ಹಾಲಿನ ಮಿಶ್ರಣದೊಂದಿಗೆ ಈ ಕಸ್ಟರ್ಡ್ ಅನ್ನು ಮಿಕ್ಸ್ ಮಾಡಿ. ಅದರ ಮೇಲೆ ಕ್ಯಾರಮೆಲೈಸ್ಡ್ ಸಕ್ಕರೆಯೊಂದಿಗೆ ಹಾಕಿ. ನೀವು ಪ್ರೆಷರ್ ಕುಕ್ಕರ್‌ನಲ್ಲಿಯೂ ಇದನ್ನು ಮಾಡಬಹುದು.

ಚಾಕೊಲೇಟ್ ಮಗ್ ಕೇಕ್:

ನಿಮ್ಮ ಪ್ರೀತಿಪಾತ್ರರಿಗೆ ಚಾಕೊಲೇಟ್‌ಗಳನ್ನು ಉಡುಗೊರೆಯಾಗಿ ನೀಡಬೇಡಿ. ಅದರ ಬದಲಾಗಿ, ನಿಮ್ಮ ಉಡುಗೊರೆಯನ್ನು ಇನ್ನಷ್ಟು ಸ್ಪೆಷಲ್ ಆಗಿಸಲು ಚಾಕೊಲೇಟ್ ಮಗ್ ಕೇಕ್ ಅನ್ನು ತಯಾರಿಸಿ.

ಬಾದಾಮಿ ಮತ್ತು ಪಿಸ್ತಾ ಶ್ರೀಖಂಡ್:

ರುಚಿಕರವಾದ ಶ್ರೀಖಂಡ್ ರೆಸಿಪಿಯೊಂದಿಗೆ ನಿಮ್ಮ ಪ್ರೇಮಿಗಳ ವಾರಕ್ಕೆ ಭಾರತೀಯ ಸಿಹಿತಿಂಡಿಗಳ ಟಚ್ ನೀಡಿ. ಕೇಸರಿ ಮಿಶ್ರಿತ ಹಾಲು, ಗಟ್ಟಿ ಮೊಸರು ಮತ್ತು ಡ್ರೈ ಫ್ರೂಟ್​ಗಳನ್ನು ಹಾಕಿ ಶ್ರೀಖಂಡ್ ತಯಾರಿಸಿ.

ಇದನ್ನೂ ಓದಿ: Valentine’s Week List 2024: ರೋಸ್​ ದಿನದಿಂದ ಪ್ರೇಮಿಗಳ ದಿನದವರೆಗೆ; ಪ್ರೇಮಿಗಳ ವಾರದ ಬಗ್ಗೆ ನಿಮಗೂ ಗೊತ್ತಿರಲಿ

ಕೊಬ್ಬರಿ ಬರ್ಫಿ:

ನಿಮ್ಮ ವ್ಯಾಲೆಂಟೈನ್ಸ್ ಡೇ ವಿಶೇಷ ಪಾಕವಿಧಾನದಲ್ಲಿ ತೆಂಗಿನಕಾಯಿಗೂ ಸ್ಥಾನ ನೀಡಿ. ನಿಮ್ಮ ಅಡುಗೆಮನೆಯಲ್ಲಿ ಒಣಗಿದ ತೆಂಗಿನಕಾಯಿ, ಖೋಯಾ, ತುಪ್ಪ, ಸಕ್ಕರೆ ಪಾಕ ಮತ್ತು ಒಣ ಹಣ್ಣುಗಳನ್ನು ರೆಡಿ ಮಾಡಿಕೊಂಡು ಕೊಬ್ಬರಿ ಬರ್ಫಿ ಮಾಡಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ