Viral Video: ಮುಂಬೈನ ಈ ಹೋಟೆಲಿನಲ್ಲಿ ಸಿಗುತ್ತೆ ʼಮ್ಯಾಗಿ ಬಿರಿಯಾನಿʼ 

ನೀವು ಆಹಾರಪ್ರಿಯರಾಗಿದ್ದರೆ ಈ ವಿಡಿಯೋ ನಿಮಗಾಗಿ… ಇತ್ತೀಚಿನ ದಿನಗಳಲ್ಲಂತೂ ಆಹಾರಗಳಲ್ಲಿ ಹಲವಾರು ಪ್ರಯೋಗಗಳು ನಡೆಯುತ್ತಲೇ ಇವೆ. ಅದರಲ್ಲೂ ಹೋಟೇಲ್, ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ತಮ್ಮದೇ ಆದ ಸಿಗ್ನೇಚರ್ ಡಿಶಸ್ ಗಳನ್ನು ತಯಾರು ಮಾಡುತ್ತಾರೆ. ಇಂತಹ ಹಲವಾರು ವಿಶಿಷ್ಟ ಪ್ರಯೋಗಗಳ ಕುರಿತ ಸುದ್ದಿಗಳನ್ನು ನೀವು ಕೇಳಿರುತ್ತೀರಿ ಅಲ್ವಾ. ಅದೇ ರೀತಿ ಮುಂಬೈನ ಈ ಒಂದು ಹೋಟೆಲಿನಲ್ಲಿ ಮ್ಯಾಗಿ ಬಿರಿಯಾನಿ ಸಖತ್ ಪಾಪ್ಯುಲರ್ ಅಂತೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಯ್ಯೋ ದೇವ್ರೇ ಮ್ಯಾಗಿಯಿಂದಲೂ ಬಿರಿಯಾನಿ ತಯಾರಿಸ್ತಾರಾ ಅಂತ ನೆಟ್ಟಿಗರು ಬಾಯಿ ಮೇಲೆ ಬೆರಳಿಟ್ಟಿದ್ದಾರೆ. 

Viral Video: ಮುಂಬೈನ ಈ ಹೋಟೆಲಿನಲ್ಲಿ ಸಿಗುತ್ತೆ ʼಮ್ಯಾಗಿ ಬಿರಿಯಾನಿʼ 
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 23, 2024 | 4:27 PM

ರುಚಿಕರವಾದ ಬಿರಿಯಾನಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬಿರಿಯಾನಿ ನಾನ್ ವೆಜಿಟೇರಿಯನ್ ಗಳ ಆಲ್ ಟೈಮ್ ಫೆವರೇಟ್ ಅಂತಾನೇ ಹೇಳಬಹುದು. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಹೀಗೆ ಮೂರು ಹೊತ್ತು ಬಿರಿಯಾನಿ ಕೊಟ್ಟರೂ ಅನೇಕ ಮಂದಿ ಅದನ್ನು ಬೇಸರವಿಲ್ಲದೆ ಬಹಳ ಖುಷಿಯಿಂದ ತಿನ್ನುತ್ತಾರೆ. ನೀವೂ ಕೂಡಾ ಹೈದರಬಾದಿ ಬಿರಿಯಾನಿ, ಮಲಬಾರ್ ಬಿರಿಯಾನಿ ಸೇರಿದಂತೆ ವಿವಿಧ ಬಗೆಯ ಚಿಕನ್, ಮಟನ್ ಬಿರಿಯಾನಿ ರೆಸಿಪಿಗಳನ್ನು ಸವಿದಿರುತ್ತೀರಿ ಅಲ್ವಾ. ಆದ್ರೆ ಎಂದಾದರೂ ಮ್ಯಾಗಿ ಬಿರಿಯಾನಿಯನ್ನು ಸವಿದಿದ್ದೀರಾ? ಅಥವಾ ಆ ವಿಶೇಷ ಭಕ್ಷ್ಯದ ಬಗ್ಗೆ ಕೇಳಿದ್ದೀರಾ? ಈ ಪ್ರಶ್ನೆಗೆ ಖಂಡಿತವಾಗಿಯೂ ಇಲ್ಲ ಅಂತ ಉತ್ತರಿಸುತ್ತೀರಿ,  ಅಷ್ಟೇ ಯಾಕೆ ಇಂತಹದ್ದೊಂದು ಬಿರಿಯಾನಿ ಇದ್ಯಾ ಅಂತ ಶಾಕ್ ಕೂಡಾ ಆಗಿರುತ್ತೀರಿ ಅಲ್ವಾ. ಈ ವಿಶೇಷ ಬಗೆಯ ಮ್ಯಾಗಿ ಬಿರಿಯಾನಿ ಮುಂಬೈನ ರೆಸ್ಟೋರೆಂಟ್ ಒಂದರ ಫೇಮಸ್ ಭಕ್ಷ್ಯವಂತೆ. ಈ ಕುರಿತ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಮುಂಬೈನ ಮಾಟುಂಗಾದ  ʼಮೆಸ್ಸಿ ಅಡ್ಡಾʼ ಎಂಬ ರೆಸ್ಟೋರೆಂಟಿನಲ್ಲಿ ಈ ಒಂದು ಸ್ಪೆಷಲ್ ಮ್ಯಾಗಿ ಬಿರಿಯಾನಿಯನ್ನು ಗ್ರಾಹಕರಿಗೆ ಸರ್ವ್ ಮಾಡಲಾಗುತ್ತದೆ. ಈ ಕುರಿತ ವಿಡಿಯೋವನ್ನು @messyaddaa.mumbai ಎಂಬ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ  ಬಿಸಿ ಬಿಸಿ ಮ್ಯಾಗಿ ಬಿರಿಯಾನಿಯನ್ನು ಮಣ್ಣಿನ ಪಾತ್ರೆಯಿಂದ ಪ್ಲೇಟ್ ಗೆ ಸರ್ವ್ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ವಿಶ್ವದ ಅತ್ಯಂತ ಚಿಕ್ಕ ವಾಷಿಂಗ್ ಮೆಷಿನ್ ತಯಾರಿಸಿ ಗಿನ್ನೆಸ್ ದಾಖಲೆ ಬರೆದ ಆಂಧ್ರಪ್ರದೇಶದ ಯುವಕ

ಫೆಬ್ರವರಿ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.8 ಮಿಲಿಯನ್ ವೀಕ್ಷಣೆಗಳನ್ನು 52 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಈ ವಿಚಿತ್ರ ಬಿರಿಯಾನಿಯನ್ನು ಕಂಡು ನೆಟ್ಟಿಗರು ತರಹೇವಾರಿ ಕಾಮೆಂಟ್ಸ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು ʼಈ ವಿಚಿತ್ರ ಭಕ್ಷ್ಯವನ್ನು ಕಂಡು ಬಿರಿಯಾನಿ ಪ್ರಿಯರು ಮತ್ತು ಮ್ಯಾಗಿ ಪ್ರಿಯರು ಮನನೊಂದಿದ್ದಾರೆʼ ಎಂದು ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼದಯವಿಟ್ಟು ಬಿರಿಯಾನಿಯ ಹೆಸರನ್ನು ಹಾಳು ಮಾಡಬೇಡಿʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಜನಗಳು ಆಹಾರದ ರುಚಿ ನೋಡದೆ ಏಕೆ ಅದರ ಬಗ್ಗೆ ವ್ಯಂಗ ಮಾತನಾಡುತ್ತಾರೆ, ನಾನು ಈ ರೆಸಿಪಿಯ ರುಚಿ ನೋಡಿದ್ದೇನೆ, ನಿಜವಾಗಿಯೂ ಮ್ಯಾಗಿ ಬಿರಿಯಾನಿಯ ರುಚಿ ಅದ್ಭುತವಾಗಿದೆʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ವಿಶಿಷ್ಟ ಭಕ್ಷ್ಯವನ್ನು ಕಂಡು ಫುಲ್ ಶಾಕ್ ಆಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ