ರಾಜಮೌಳಿ ಸೂಪರ್​ ಡ್ಯಾನ್ಸರ್​ ಎಂಬುದು ನಿಮಗೆ ಗೊತ್ತಾ? ಪತ್ನಿ ಜೊತೆಗಿನ ಡ್ಯಾನ್ಸ್ ವಿಡಿಯೋ ವೈರಲ್​

ರಾಜಮೌಳಿ ನಿರ್ದೇಶಕರಷ್ಟೇ ಅಲ್ಲ, ಉತ್ತಮ ಡ್ಯಾನ್ಸರ್​ ಕೂಡ ಹೌದು. ಇತ್ತೀಚೆಗೆ ತಮ್ಮ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪತ್ನಿಯ ಜೊತೆ ಅವರು ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. ರಾಜಮೌಳಿ ಅವರು ಪತ್ನಿ ರಮಾ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ರಾಜಮೌಳಿ ಅವರ ಡ್ಯಾನ್ಸ್ ಕಂಡು ಅಭಿಮಾನಿಗಳಿಗೆ ಅಚ್ಚರಿಯಾಗಿದೆ.

ರಾಜಮೌಳಿ ಸೂಪರ್​ ಡ್ಯಾನ್ಸರ್​ ಎಂಬುದು ನಿಮಗೆ ಗೊತ್ತಾ? ಪತ್ನಿ ಜೊತೆಗಿನ ಡ್ಯಾನ್ಸ್ ವಿಡಿಯೋ ವೈರಲ್​
ಎಸ್​.ಎಸ್​. ರಾಜಮೌಳಿ
Follow us
ಮದನ್​ ಕುಮಾರ್​
|

Updated on: Apr 11, 2024 | 3:19 PM

ರಾಜಮೌಳಿ (SS Rajamouli) ಅವರು 2022ರ ಮಾರ್ಚ್​ನಲ್ಲಿ ತೆರೆಕಂಡ ‘ಆರ್‌ಆರ್‌ಆರ್’ (RRR) ಚಿತ್ರದ ಮೂಲಕ ಜಗತ್ತೇ ತಮ್ಮತ್ತ ನೋಡುವಂತೆ ಮಾಡಿದ್ದರು. ರಾಜಮೌಳಿ ಅವರು ಜೂನಿಯರ್​ ಎನ್‌ಟಿಆರ್‌, ರಾಮ್‌ ಚರಣ್‌ ಅವರಂತಹ ಸ್ಟಾರ್‌ ಹೀರೋಗಳೊಂದಿಗೆ ಕೆಲಸ ಮಾಡಿ ಜನಮನ ಗೆದ್ದಿದ್ದಾರೆ. ಭಾರತೀಯ ತಂತ್ರಜ್ಞರನ್ನು ಆಸ್ಕರ್‌ ವೇದಿಕೆಗೆ ಏರಿಸಿದರು. ವಿಶೇಷ ಏನೆಂದರೆ ರಾಜಮೌಳಿ ನಿರ್ದೇಶಕರಷ್ಟೇ ಅಲ್ಲ. ಉತ್ತಮ ನೃತ್ಯಗಾರರೂ ಹೌದು. ಇತ್ತೀಚೆಗೆ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಪತ್ನಿಯೊಂದಿಗೆ ಹೆಜ್ಜೆ ಹಾಕಿ (SS Rajamouli Dance) ಗಮನ ಸೆಳೆದಿದ್ದಾರೆ.

ರಾಜಮೌಳಿ ಅವರು ಪತ್ನಿ ರಮಾ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ರಾಜಮೌಳಿ ಅವರ ಡ್ಯಾನ್ಸ್ ನೋಡಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಈ ವೀಡಿಯೋದಲ್ಲಿ ರಾಜಮೌಳಿ ಅವರು ಪತ್ನಿಯೊಂದಿಗೆ ಡ್ಯಾನ್ಸ್ ರಿಹರ್ಸಲ್ ಮಾಡುತ್ತಿರುವುದನ್ನು ಕಾಣಬಹುದು. ತೆಲುಗು ಹಾಡಿಗೆ ಅವರು ಹೆಜ್ಜೆ ಹಾಕಿದ್ದಾರೆ.

ರಾಜಮೌಳಿ ಅವರ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಲವು ರೀತಿಯ ಕಮೆಂಟ್ಸ್ ಮಾಡುತ್ತಿದ್ದಾರೆ. ಇನ್ನು ರಾಜಮೌಳಿ ಸಿನಿಮಾಗಳ ಬಗ್ಗೆ ಹೇಳುವುದಾದರೆ, ಅವರು ಸದ್ಯ ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿದ್ದಾರೆ. ರಾಜಮೌಳಿ ಈ ಸಿನಿಮಾವನ್ನು ಅದ್ದೂರಿಯಾಗಿ ಚಿತ್ರೀಕರಿಸುತ್ತಿದ್ದಾರೆ. ಹಾಲಿವುಡ್ ರೇಂಜ್​ನಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಆಫ್ರಿಕಾದ ಕಾಡುಗಳ ಹಿನ್ನೆಲೆಯಲ್ಲಿ ಈ ಸಿನಿಮಾದ ಕಥೆ ಸಾಗಲಿದೆ ಎಂದು ಹೇಳಲಾಗುತ್ತಿದೆ. ಸಿನಿಮಾ ಬಗ್ಗೆ ಇನ್ನಷ್ಟು ಅಪ್​ಡೇಟ್​ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿ: ಇತ್ತೀಚೆಗೆ ಏರಿಕೆ ಆಗಿದೆ ರಾಜಮೌಳಿ ಆಸ್ತಿ; ನಿರ್ದೇಶಕನ ಆಸ್ತಿ ಮೌಲ್ಯ ಎಷ್ಟು?

ನಿರ್ದೇಶಕ ರಾಜಮೌಳಿ ತಮ್ಮ ಚಿತ್ರಗಳ ಮೂಲಕ ವಿಶ್ವಾದ್ಯಂತ ಮನ್ನಣೆ ಗಳಿಸಿದ್ದಾರೆ. ಮೊದಲು ಟಾಲಿವುಡ್​ನಲ್ಲಿ ಯಶಸ್ವಿ ನಿರ್ದೇಶಕ ಎಂದು ಗುರುತಿಸಿಕೊಂಡ ರಾಜಮೌಳಿ ನಂತರ ಪ್ಯಾನ್ ಇಂಡಿಯಾ ನಿರ್ದೇಶಕರಾಗಿ ಹೊರಹೊಮ್ಮಿದರು. ಬಾಹುಬಲಿ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ದಾರಿ ತೋರಿಸಿದ ರಾಜಮೌಳಿ ಅವರು ತೆಲುಗು ಚಿತ್ರರಂಗದ ಖ್ಯಾತಿ ಹೆಚ್ಚಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.