ಈದ್ ಪ್ರಯುಕ್ತ ‘GOAT’ ಸಿನಿಮಾ ರಿಲೀಸ್ ದಿನಾಂಕ ಪ್ರಕಟ; ವಿಜಯ್ ಅಭಿಮಾನಿಗಳು ಖುಷ್
‘GOAT’ ಚಿತ್ರ ಈ ವರ್ಷ ಸೆಪ್ಟೆಂಬರ್ 5ರಂದು ರಿಲೀಸ್ ಆಗಲಿದೆ. ನಿರ್ಮಾಣ ಸಂಸ್ಥೆಯಾದ ‘ಎಜಿಎಸ್ ಎಂಟರ್ಟೇನ್ಮೆಂಟ್’ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಹೊಸ ಪೋಸ್ಟರ್ ಹಂಚಿಕೊಳ್ಳಲಾಗಿದೆ. ಅದರಲ್ಲಿ ‘GOAT’ ಸಿನಿಮಾದ ಬಿಡುಗಡೆ ದಿನಾಂಕದ ಕುರಿತು ಮಾಹಿತಿ ನೀಡಲಾಗಿದೆ. ಈ ಸಿನಿಮಾಗೆ ವೆಂಕಟ್ ಪ್ರಭು ನಿರ್ದೇಶನ ಮಾಡುತ್ತಿದ್ದು, ದಳಪತಿ ವಿಜಯ್ ಹೊಸ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಾಲಿವುಡ್ ನಟ ದಳಪತಿ ವಿಜಯ್ (Thalapathy Vijay) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. 2023ರಲ್ಲಿ ಅವರು ನಟಿಸಿದ ‘ವಾರಿಸು’ ಹಾಗೂ ‘ಲಿಯೋ’ ಸಿನಿಮಾಗಳು ಬಿಡುಗಡೆ ಆಗಿದ್ದವು. ಈಗ ಅವರು ‘GOAT’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಎಂಬುದು ಈ ಸಿನಿಮಾದ ಶೀರ್ಷಿಕೆಯ ವಿಸ್ತೃತ ರೂಪ. ಅನೇಕ ಕಾರಣಗಳಿಂದ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ನಿರೀಕ್ಷೆ ಇದೆ. ಇಂದು (ಏಪ್ರಿಲ್ 11) ಈದ್ ಪ್ರಯುಕ್ತ ‘GOAT’ ಸಿನಿಮಾದ ರಿಲೀಸ್ ದಿನಾಂಕ (GOAT Release Date) ಅನೌನ್ಸ್ ಮಾಡಲಾಗಿದೆ. ಅದಕ್ಕಾಗಿ ಹೊಸ ಪೋಸ್ಟರ್ ಬಿಡುಗಡೆ ಆಗಿದೆ.
‘GOAT’ ಸಿನಿಮಾ ಈ ವರ್ಷ ಸೆಪ್ಟೆಂಬರ್ 5ರಂದು ಬಿಡುಗಡೆ ಆಗಲಿದೆ. ನಿರ್ಮಾಣ ಮಾಡುತ್ತಿರುವ ‘ಎಜಿಎಸ್ ಎಂಟರ್ಟೇನ್ಮೆಂಟ್’ ಸಂಸ್ಥೆಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೊಸ ಪೋಸ್ಟರ್ ಹಂಚಿಕೊಂಡಿದ್ದು, ಅದರಲ್ಲಿ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಚಿತ್ರಕ್ಕೆ ವೆಂಕಟ್ ಪ್ರಭು ಅವರು ನಿರ್ದೇಶನ ಮಾಡುತ್ತಿದ್ದಾರೆ. ಹೊಸ ಗೆಟಪ್ನಲ್ಲಿ ದಳಪತಿ ವಿಜಯ್ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಕೊನೆಯ ಚಿತ್ರಕ್ಕಾಗಿ 250 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ ದಳಪತಿ ವಿಜಯ್?
ಈ ಥ್ರಿಲ್ಲರ್ ಸಿನಿಮಾದಲ್ಲಿ ವಯಸ್ಸಾದ ವ್ಯಕ್ತಿಯ ಪಾತ್ರವನ್ನು ದಳಪತಿ ವಿಜಯ್ ಮಾಡುತ್ತಿದ್ದಾರೆ. ಅವರ ಜೊತೆ ಪ್ರಭುದೇವ, ಮೀನಾಕ್ಷಿ ಚೌಧರಿ, ಪ್ರಶಾಂತ್, ಜಯರಾಂ, ಸ್ನೇಹಾ, ಯೋಗಿ ಬಾಬು ಮುಂತಾದ ಕಲಾವಿದರು ಅಭಿನಯಿಸುತ್ತಿದ್ದಾರೆ. ಇದು ಸೈನ್ಸ್ ಫಿಕ್ಷನ್ ಸಿನಿಮಾ ಆಗಿರಲಿದೆ. ದಳಪತಿ ವಿಜಯ್ ಅವರು ಎರಡು ಪಾತ್ರಗಳನ್ನು ಮಾಡುತ್ತಿದ್ದಾರೆ. ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾದಿದ್ದಾರೆ.
Thalapathy @actorvijay Sir ku whistle podu!! #TheGreatestOfAllTime will arrive on 5th Sept 2024! Keeping the #GOAT updates coming!!#KalpathiSAghoram#KalpathiSGanesh#KalpathiSSuresh@vp_offl @thisisysr @actorprashanth @PDdancing #Mohan #Jayaram @actress_Sneha #Laila… pic.twitter.com/9D5HhPcP3E
— AGS Entertainment (@Ags_production) April 11, 2024
ಲೋಕಸಭಾ ಚುನಾವಣೆ ಅನೌನ್ಸ್ ಆದ ಬಳಿಕ ಅನೇಕ ಬಿಗ್ ಬಜೆಟ್ ಸಿನಿಮಾಗಳ ರಿಲೀಸ್ ದಿನಾಂಕದಲ್ಲಿ ಬದಲಾವಣೆ ಆಗುತ್ತಿದೆ. ‘ಕಲ್ಕಿ 2898 ಎಡಿ’ ರೀತಿಯ ಪ್ಯಾನ್ ಇಂಡಿಯಾ ಸಿನಿಮಾಗಳು ಹೊಸ ಬಿಡುಗಡೆ ದಿನಾಂಕದ ಮೇಲೆ ಕಣ್ಣಿಟ್ಟಿವೆ ಎಂದು ಹೇಳಲಾಗುತ್ತಿದೆ. ಅದೇ ಕಾರಣದಿಂದ ‘GOAT’ ಸಿನಿಮಾ ತಂಡ ಕೂಡ ಗಡಿಬಿಡಿಯಲ್ಲಿ ರಿಲೀಸ್ ದಿನಾಂಕವನ್ನು ಘೋಷಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕಂತೂ ಅಭಿಮಾನಿಗಳ ವಲಯದಲ್ಲಿ ಹೊಸ ಪೋಸ್ಟರ್ ವೈರಲ್ ಆಗಿದೆ. ಜನರು ಕಮೆಂಟ್ ಮಾಡುವ ಮೂಲಕ ತಮ್ಮ ಎಗ್ಸೈಟ್ಮೆಂಟ್ ತೋಡಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




