ಇತ್ತೀಚೆಗೆ ಏರಿಕೆ ಆಗಿದೆ ರಾಜಮೌಳಿ ಆಸ್ತಿ; ನಿರ್ದೇಶಕನ ಆಸ್ತಿ ಮೌಲ್ಯ ಎಷ್ಟು?
SS Rajamouli: ವಿಶ್ವವಿಖ್ಯಾತಿಗಳಿಸಿರುವ ನಿರ್ದೇಶಕ ಎಸ್ಎಸ್ ರಾಜಮೌಳಿ ಅತ್ಯುತ್ತಮ ನಿರ್ದೇಶಕರಾಗಿರುವ ಜೊತೆಗೆ ಒಳ್ಳೆಯ ಹೂಡಿಕೆದಾರರು ಸಹ ಹೌದು. ಎಸ್ಎಸ್ ರಾಜಮೌಳಿಯ ಆಸ್ತಿ ಮೌಲ್ಯ ಎಷ್ಟಿದೆ?
ಖ್ಯಾತ ನಿರ್ದೇಶಕ, ನಿರ್ಮಾಪಕ ರಾಜಮೌಳಿ (SS Rajamouli) ಅವರ ಜನಪ್ರಿಯತೆ ವಿಶ್ವಾದ್ಯಂತ ಹಬ್ಬಿದೆ. ಅವರ ಬಗ್ಗೆ ಹಾಲಿವುಡ್ ನಿರ್ದೇಶಕರಿಗೂ ಗೊತ್ತಿದೆ. ಅವರು ತೆಲುಗು ಚಿತ್ರರಂಗವನ್ನು ವಿಶ್ವಮಟ್ಟಕ್ಕೆ ಕರೆದುಕೊಂಡು ಹೋಗಿದ್ದಾರೆ. ಅವರು ಬಾಕ್ಸ್ ಆಫೀಸ್ನಲ್ಲಿ ಹಲವು ರೆಕಾರ್ಡ್ ಮಾಡಿದ್ದಾರೆ. ‘ಬಾಹುಬಲಿ: ದಿ ಬಿಗಿನಿಂಗ್’, ‘ಆರ್ಆರ್ಆರ್’ ಮೂಲಕ ಅವರ ಜನಪ್ರಿಯತೆ ಹೆಚ್ಚಾಗಿದೆ. ಅವರ ಆಸ್ತಿಯಲ್ಲಿ ನಿರಂತರ ಏರಿಕೆ ಕಾಣುತ್ತಿದೆ.
ರಾಜಮೌಳಿ ಆಸ್ತಿ 158 ಕೋಟಿ ರೂಪಾಯಿಗೂ ಅಧಿಕವಾಗಿದೆ ಎನ್ನಲಾಗಿದೆ. ರಾಜಮೌಳಿ ಅವರು ಸಿನಿಮಾಗಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಅವರು ಸಾಕಷ್ಟು ಹೂಡಿಕೆ ಕೂಡ ಮಾಡಿದ್ದಾರೆ. ಅವರು ನಿರ್ಮಾಣದಿಂದಲೂ ಹಣ ಮಾಡುತ್ತಾರೆ. ಇತ್ತೀಚೆಗೆ ಅವರು ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರ ಸಂಭಾವನೆಯಲ್ಲಿ ಏರಿಕೆ ಕಂಡಿದೆ.
ರಾಜಮೌಳಿ ಅವರು ಹೈದರಾಬಾದ್ನ ಬಂಜಾರಾ ಹಿಲ್ಸ್ನಲ್ಲಿ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಇದನ್ನು ಅವರು ಖರೀದಿ ಮಾಡಿದ್ದು 2008ರಲ್ಲಿ. ಹೈದರಾಬಾದ್ ಮಾತ್ರ ಅಲ್ಲದೆ ಬೇರೆ ಬೇರೆ ಕಡೆ ಲ್ಯಾಂಡ್ಗಳ ಮೇಲೆ ಅವರು ಹೂಡಿಕೆ ಮಾಡಿದ್ದಾರೆ. ಅವರ ಬಳಿ ರೇಂಜ್ ರೋವರ್ ಹಾಗೂ ಬಿಎಂಡಬ್ಲ್ಯೂ ಕಾರಿದೆ. ಇವುಗಳ ಬೆಲೆ ಒಂದರಿಂದ ಒಂದೂವರೆ ಕೋಟಿ ರೂಪಾಯಿ ಇದೆ. ‘ಆರ್ಆರ್ಆರ್’ ಹಿಟ್ ಆದ ಬಳಿಕ ಅವರ ಸಂಭಾವನೆ ಹೆಚ್ಚಾಗಿದೆ.
ಇದನ್ನೂ ಓದಿ:ರಾಜಮೌಳಿ ಮುಂದಿನ ಚಿತ್ರದಲ್ಲಿ ಸ್ಟಾರ್ ಕಲಾವಿದರ ದಂಡು? ಹರಿದಾಡಿದೆ ಹೊಸ ಸುದ್ದಿ
‘ಬಾಹುಬಲಿ’ ಸರಣಿಗಾಗಿ ರಾಜಮೌಳಿ 25 ಕೋಟಿ ರೂಪಾಯಿ ಪಡೆದಿದ್ದರು. ಇದಾದ ಬಳಿಕ ಅವರು ಪ್ರತಿ ಸಿನಿಮಾಗೆ 100 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅವರ ಫ್ಯಾಂಟಸಿಗಳು ಜನರಿಗೆ ಸಖತ್ ಇಷ್ಟ ಆಗುತ್ತವೆ. ರಾಜಮೌಳಿ ನಿರ್ದೇಶನದ ‘ಬಾಹುಬಲಿ: ದಿ ಬಿಗಿನಿಂಗ್’, ‘ಬಾಹುಬಲಿ 2’, ‘ಆರ್ಆರ್ಆರ್’, ‘ಮಗಧೀರ’, ‘ಈಗ’ ಚಿತ್ರಗಳು ಸೂಪರ್ ಹಿಟ್ ಎನಿಸಿಕೊಂಡಿವೆ. ಅವರು ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುತ್ತಾರೆ ಎನ್ನಲಾಗಿದೆ. ಈ ಸಿನಿಮಾ ಮೇ 9ರಂದು ರಿಲೀಸ್ ಆಗಲಿದೆ.
ರಾಜಮೌಳಿ ಜನಿಸಿದ್ದು 1973ರ ಅಕ್ಟೋಬರ್ 10ರಂದು. ಅವರದ್ದು ತೆಲುಗು ಫ್ಯಾಮಿಲಿ. ಅವರು ಇಂಜಿನಿಯರಿಂಗ್ ಓದಿದ್ದಾರೆ. ಅವರು 2001ರಲ್ಲಿ ಮದುವೆ ಆದರು. ಅವರಿಗೆ ಕಾರ್ತಿಕೇಯ ಹಾಗೂ ಮಯುಖ ಹೆಸರಿನ ಇಬ್ಬರು ಮಕ್ಕಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ