ಪ್ರಶಾಂತ್​ ಸಂಬರ್ಗಿಗೆ ಆ್ಯಸಿಡ್​ ಹಾಕುವುದಾಗಿ ಬೆದರಿಕೆ; ಎಫ್​ಐಆರ್​ ದಾಖಲು

ರಾಮೇಶ್ವರಂ ಕೆಫೆ ಬಾಂಬ್​ ಸ್ಫೋಟದ ನಂಟು ಹೊಂದಿರುವ ವ್ಯಕ್ತಿಗಳಿಂದಲೇ ಪ್ರಶಾಂತ್​ ಸಂಬರ್ಗಿಗೆ ಬೆದರಿಕೆ ಸಂದೇಶ ಬಂದಿದೆ. ಕೆಫೆ ರೀ-ಓಪನಿಂಗ್​ ದಿನ ಮಾಧ್ಯಮಗಳಿಗೆ ಪ್ರಶಾಂತ್​ ಸಂಬರ್ಗಿ ಹೇಳಿಕೆ ನೀಡಿದ ಬಳಿಕ ಈ ರೀತಿಯ ಬೆದರಿಕೆ ಬರಲು ಆರಂಭ ಆಗಿದೆ. ವಿದೇಶದ ವಾಟ್ಸಪ್​ ನಂಬರ್​ ಮತ್ತು ಇಮೇಲ್​ ಮೂಲಕ ಪ್ರಶಾಂತ್​ ಹಾಗೂ ಅವರ ಕುಟುಂಬಕ್ಕೆ ಕೊಲೆ ಬೆದರಿಕೆ ಬಂದಿದೆ.

ಪ್ರಶಾಂತ್​ ಸಂಬರ್ಗಿಗೆ ಆ್ಯಸಿಡ್​ ಹಾಕುವುದಾಗಿ ಬೆದರಿಕೆ; ಎಫ್​ಐಆರ್​ ದಾಖಲು
ಪ್ರಶಾಂತ್​ ಸಂಬರ್ಗಿ
Follow us
ರಾಚಪ್ಪಾಜಿ ನಾಯ್ಕ್
| Updated By: ಮದನ್​ ಕುಮಾರ್​

Updated on: Mar 29, 2024 | 4:52 PM

ಮಾಜಿ ಬಿಗ್​ ಬಾಸ್​ ಸ್ಪರ್ಧಿ ಪ್ರಶಾಂತ್​ ಸಂಬರ್ಗಿ (Prashanth Sambargi) ಅವರಿಗೆ ಕಿಡಿಗೇಡಿಗಳು ಕೊಲೆ ಬೆದರಿಕೆ ಹಾಕಿದ್ದಾರೆ. ವಾಟ್ಸಪ್​ ಮತ್ತು ಇ-ಮೇಲ್​ ಮೂಲಕ ಬೆದರಿಕೆ ಹಾಕಲಾಗಿದೆ. ಆ್ಯಸಿಡ್​​ ಹಾಕುವುದಾಗಿ ಅಪರಿಚಿತರು ಎಚ್ಚರಿಸಿದ್ದಾರೆ. ಈ ಸಂಬಂಧವಾಗಿ ಪ್ರಶಾಂತ್​ ಸಂಬರ್ಗಿ ಅವರು ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಬೆದರಿಕೆ (Life Threat) ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ತಮಗೆ ರಕ್ಷಣೆ ನೀಡಬೇಕು ಎಂದು ಪ್ರಶಾಂತ್​ ಸಂಬರ್ಗಿ ಅವರು ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ. ರಾಮೇಶ್ವರಂ ಕೆಫೆ (Rameshwaram Cafe) ಬಗ್ಗೆ ಪಸ್ತಾಪಿಸಿ ಪ್ರಶಾಂತ್​ ಸಂಬರ್ಗಿಗೆ ಬೆದರಿಕೆ ಹಾಕಲಾಗಿದೆ.

ವಿದೇಶದ ಮೊಬೈಲ್​ ಸಂಖ್ಯೆಗಳಿಂದ ಪ್ರಶಾಂತ್ ಸಂಬರ್ಗಿ ಅವರಿಗೆ ಬೆದರಿಕೆ ಸಂದೇಶ ಬಂದಿದೆ. ಅಮೆರಿಕ, ಕ್ರೊಯೇಷ್ಯಾ ಮುಂತಾದ ದೇಶಗಳ ವಾಟ್ಸಪ್​ ಸಂಖ್ಯೆಗಳನ್ನು ಬಳಸಿ ಬೆದರಿಕೆ ಸಂದೇಶ ಕಳಿಸಲಾಗಿದೆ. ಪ್ರಶಾಂತ್​ ಸಂಬರ್ಗಿ ಅವರ ಫ್ಯಾಮಿಲಿ ಫೋಟೋವನ್ನು ಕಳಿಸಿ, ‘ಟಾರ್ಗೆಟ್​’ ಎಂದು ಬರೆಯಲಾಗಿದೆ. ಪತ್ನಿ ಮತ್ತು ಮಕ್ಕಳನ್ನು ಕೂಡ ಬಲಿ ತೆಗೆದುಕೊಳ್ಳುವುದಾಗಿ ಬೆದರಿಕೆ ಸಂದೇಶ ಕಳಿಸಲಾಗಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಕೇಸ್​ಗೂ ಕಾಫಿನಾಡಿಗೂ ನಂಟು: ಬಂಧಿತ ಬ್ಲಾಸ್ಟ್​ನ ಮಾಸ್ಟರ್ ಮೈಂಡ್ ಕಳಸ ಮೂಲದವನು

‘ಮಾರ್ಚ್​ 10ರ ಮಧ್ಯರಾತ್ರಿಯಿಂದ ನನಗೆ ಮೇಲ್ಕಂಡ ಮೊಬೈಲ್​ ಸಂಖ್ಯೆಗಳಿಂದ ಬೆದರಿಕೆ ಸಂದೇಶ ಬಂದಿದೆ. ನಮ್ಮ ಫೋಟೋ ಕಳಿಸಿ ನನಗೆ ಮತ್ತು ನನ್ನ ಕುಟುಂಬದವರಿಗೆ ಜೀವ ಬೆದರಿಕೆ ಹಾಕಲಾಗಿದೆ. ನಮ್ಮ ಮೊಬೈಲ್​ ಹ್ಯಾಕ್​ ಮಾಡಲಾಗಿದೆ. ಅದರಲ್ಲಿನ ಖಾಸಗಿ ಮಾಹಿತಿಯನ್ನು ಕದಿಯಲಾಗಿದೆ. ವೈಯಕ್ತಿಕ ಫೋಟೋ, ಕಾಲ್​ ರೆಕಾರ್ಡ್, ಎಸ್​ಎಂಎಸ್​ ಹಾಗೂ ಇಮೇಲ್​ಗಳನ್ನು ಟ್ರಾನ್ಸ್​ಫರ್​ ಮಾಡಲಾಗಿದೆ’ ಎಂದು ಪ್ರಶಾಂತ್​ ಸಂಬರ್ಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದ ಸ್ಫೋಟಕ ವಿಚಾರ ಬಯಲಿಗೆ; ಬೆಂಗಳೂರಿನ ಸಮೀಪವೇ ಬಾಂಬ್ ತಯಾರಿ

ರಾಮೇಶ್ವರಂ ಬಾಂಬ್​ ಸ್ಫೋಟದ ನಂಟು:

ಪ್ರಶಾಂತ್ ಸಂಬರ್ಗಿಗೆ ಬೆದರಿಕೆ ಹಾಕಿದ ಕಿಡಿಗೇಡಿಗಳಿಗೆ ರಾಮೇಶ್ವರಂ ಕೆಫೆ ಬಾಂಬ್​ ಸ್ಪೋಟದ ನಂಟು ಇರುವುದು ಕಂಡುಬಂದಿದೆ. ಯಾಕೆಂದರೆ, ಬೆದರಿಕೆ ಸಂದೇಶದಲ್ಲಿ ರಾಮೇಶ್ವರಂ ಕೆಫೆ ಬಗ್ಗೆ ಉಲ್ಲೇಖ ಮಾಡಲಾಗಿದೆ. ದೂರಿನಲ್ಲಿ ತಿಳಿಸಿರುವಂತೆ, ಪ್ರಶಾಂತ್​ ಸಂಬರ್ಗಿ ಅವರು ಮಾರ್ಚ್ 8ರಂದು ರಾಮೇಶ್ವರಂ ಕೆಫೆ ರೀ-ಓಪನಿಂಗ್​ಗೆ ತೆರಳಿದ್ದರು. ಆಗ ಕೆಲವು ಸುದ್ದಿ ವಾಹಿನಿಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಆ ಬಳಿಕ ಕಿಡಿಗೇಡಿಗಳಿಂದ ಬೆದರಿಕೆ ಸಂದೇಶ ಬರಲು ಆರಂಭ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ