ರಾಮೇಶ್ವರಂ ಕೆಫೆ ಸ್ಫೋಟ ಕೇಸ್ಗೂ ಕಾಫಿನಾಡಿಗೂ ನಂಟು: ಬಂಧಿತ ಬ್ಲಾಸ್ಟ್ನ ಮಾಸ್ಟರ್ ಮೈಂಡ್ ಕಳಸ ಮೂಲದವನು
ಬೆಂಗಳೂರು ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬರ್‌ಗೆ ಹೆಲ್ಪ್ ಮಾಡಿದವನ್ನು ಎನ್‌ಐಎ ಅಧಿಕಾರಿಗಳು ಇಂದು ಬಂಧಿಸಿದ್ದಾರೆ. ಮುಜಾಮಿಲ್ ಷರೀಫ್ ಬಂಧಿತ ಆರೋಪಿ. ಈತ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದವರು. ಆ ಮೂಲಕ ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೂ ಕಾಫಿನಾಡಿಗೂ ನಂಟು ಉಂಟಾಗಿದೆ.
ಚಿಕ್ಕಮಗಳೂರು, ಮಾರ್ಚ್ 28: ಬೆಂಗಳೂರು ರಾಮೇಶ್ವರಂ ಬಾಂಬ್ ಬ್ಲಾಸ್ಟ್ (rameshwaram cafe blast) ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬರ್‌ಗೆ ಹೆಲ್ಪ್ ಮಾಡಿದವನ್ನು ಎನ್‌ಐಎ ಅಧಿಕಾರಿಗಳು ಇಂದು ಬಂಧಿಸಿದ್ದಾರೆ. ಮುಜಾಮಿಲ್ ಷರೀಫ್ ಬಂಧಿತ ಆರೋಪಿ. ಈತ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದವರು. ಆ ಮೂಲಕ ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೂ ಕಾಫಿನಾಡಿಗೂ ನಂಟು ಉಂಟಾಗಿದೆ. ಕಳೆದ ಒಂದು ವರ್ಷದಿಂದ ಚಿಕ್ಕಮಗಳೂರಿನ ಅಯ್ಯಪ್ಪ ನಗರದಲ್ಲಿ ತಾಯಿ ಹಾಗೂ ತಂಗಿ ಮತ್ತು ಪತ್ನಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಪತ್ನಿ 9 ತಿಂಗಳ ತುಂಬು ಗರ್ಭಿಣಿ. ಕಳೆದ 6 ತಿಂಗಳಿನಿಂದ ಅಯ್ಯಪ್ಪ ನಗರದಲ್ಲೇ ಇದ್ದ ಷರೀಫ್, ಒಂದು ತಿಂಗಳ ಹಿಂದೆ ಬೆಂಗಳೂರಿಗೆ ವಾಪಸಾಗಿದ್ದ.
ಹೀಗಾಗಿ ನಿವಾಸದ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಮೊಬೈಲ್ ಹಾಗೂ ಪ್ರಮುಖ ದಾಖಲೆಗಳನ್ನು ಎನ್‌ಐಎ ತೆಗೆದುಕೊಂಡು ಹೋಗಿದೆ. ಸದ್ಯ ಬೆಂಗಳೂರಿನಲ್ಲಿ ಮುಜಾಮಿಲ್‌ನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಚಿಕನ್ ಕೌಂಟಿಯಲ್ಲಿ 16 ವರ್ಷದಿಂದ ಕೆಲಸ ಮಾಡುತ್ತಿದ್ದ.
ಇದನ್ನೂ ಓದಿ: ರಾಮೇಶ್ವರಂ ಕೆಫ್ ಬಾಂಬ್ ಬ್ಲಾಸ್ಟ್ ಪ್ರಕರಣ: ಪ್ರಮುಖ ಆರೋಪಿ ಅರೆಸ್ಟ್
ಇವತ್ತಿಗೆ 28 ದಿನದ ಹಿಂದೆ ರಾಜ್ಯ ರಾಜಧಾನಿಯಲ್ಲಿ ದೊಡ್ಡ ಸ್ಫೋಟವಾಗಿತ್ತು. ರಾಮೇಶ್ವರಂ ಕೆಫೆ ಛಿದ್ರಛಿದ್ರವಾಗಿತ್ತು. ಇದೇ ಬಾಂಬ್ ಸ್ಫೋಟ ಕೇಸ್‌ನಲ್ಲಿ ಎನ್‌ಐಎ ಇವತ್ತು ಮೊದಲು ಆರೋಪಿಯನ್ನು ಬಂಧಿಸಿದೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಮತ್ತಿಬ್ಬರನ್ನು ವಶಕ್ಕೆ ಪಡೆದ ಎನ್ಐಎ
ನೂರಾರು ಸಿಸಿಟಿವಿ ತಡಕಾಡಿದ್ರು, ಹತ್ತಾರು ಊರು ಸುತ್ತುಹಾಕಿದ್ರು. ಬೆಂಗಳೂರಿನ ಗಲ್ಲಿಗಲ್ಲಿಯಲ್ಲೂ ಸರ್ಚ್ ಮಾಡಿದ್ರು. ಇಷ್ಟಾದ್ರೂ ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಹಾಗಂಥ ಎನ್‌ಐಎ ಸುಮ್ನೇ ಕೂತಿರಲಿಲ್ಲ. ಹತ್ತಾರು ಟೆಕ್ನಿಕಲ್ ಎವಿಡೆನ್ಸ್ ಆಧಾರದಲ್ಲಿ ಫೀಲ್ಡ್ ಇಳಿದ ಎನ್‌ಐಎ, ಬಾಂಬ್ ಸ್ಫೋಟಿಸಿದವನು ಮುಸಾವೀರ್ ಹುಸೇನ್ ಅನ್ನೋದನ್ನ ಪತ್ತೆ ಹಚ್ಚಿತ್ತು. ತೀರ್ಥಹಳ್ಳಿ ಮೂಲದ ಮುಸಾವೀರ್ ಬಾಂಬ್ ಸ್ಫೋಟಿಸಿದ್ರೆ, ಅಬ್ದುಲ್ ಮತೀನ್ ಕಿಂಗ್‌ಪಿನ್ ಆಗಿದ್ದ. ಇವರಿಬ್ಬರ ಪಾತ್ರದ ಬಗ್ಗೆ ಗೊತ್ತಾಗ್ತಿದ್ದಂತೆ ನಿನ್ನೆ ಶಿವಮೊಗ್ಗದ ತೀರ್ಥಹಳ್ಳಿ, ಬೆಂಗಳೂರು ಹಾಗೂ ಚೆನ್ನೈ, ಉತ್ತರ ಪ್ರದೇಶದ ಸೇರಿದಂತೆ 18 ಕಡೆ ದಾಳಿ ಮಾಡಿದ್ದ ಎನ್‌ಐಎ ಶೋಧ ಮಾಡಿತ್ತು. ಈ ವೇಳೆ ಬಾಂಬ್ ತಯಾರಿಕೆಗೆ ಸಹಾಯ ಮಾಡಿದ್ದ ಮುಜಾಮಿಲ್ ಷರೀಫ್ ಎಂಬಾತನನ್ನ ಅರೆಸ್ಟ್ ಮಾಡಲಾಗಿದೆ.
ಬಾಂಬರ್‌ಗೆ ಆಪ್ತನಾಗಿದ್ದ ಮುಜಾಮಿಲ್ ಷರೀಫ್!
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಇದುವರೆಗೂ ಹಲವರ ವಿಚಾರಣೆ ಆಗಿದೆ ನಿಜ. ಆದರೆ ಯಾರೋಬ್ಬರನ್ನೂ ಅರೆಸ್ಟ್ ಮಾಡಿರಲಿಲ್ಲ. ಆದರೆ ಇಂದು ಮುಜಾಮಿಲ್ ಷರೀಫ್‌ನನ್ನ ಎನ್ಐಎ ಲಾಕ್ ಮಾಡಿದೆ. ಬಾಂಬರ್ ಮುಸಾವೀರ್ ಹುಸೇನ್ ಹಾಗೂ ಕಿಂಗ್‌ಪಿನ್ ಅಬ್ದುಲ್ ಮತೀನ್‌ಗೆ ಈ ಮುಜಾಮಿಲ್ ಆಪ್ತನಾಗಿದ್ದ. ಬಾಂಬ್ ತಯಾರಿಕೆಗೆ ಈ ಮುಜಾಮಿಲ್ ಸ್ಫೋಟಕಗಳನ್ನ ಸರಬರಾಜು ಮಾಡಿದ್ದ ಎನ್ನಲಾಗ್ತಿದೆ. ಈ ಬಗ್ಗೆ ಸೂಕ್ತ ಸಾಕ್ಷಿಗಳನ್ನ ಕಲೆಹಾಕಿದ ಎನ್‌ಐಎ ಮುಜಾಮಿನ್‌ನನ್ನ ಅರೆಸ್ಟ್ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.