ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಕೇಸ್: ಭಟ್ಕಳದಲ್ಲಿ ಶಂಕಿತನ ಮನೆ ಮೇಲೆ ಎನ್‌ಐಎ ದಾಳಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆ
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಶಂಕಿತನ ಮನೆ ಮೇಲೆ ಎನ್‌ಐಎ ದಾಳಿ ಮಾಡಿದೆ. ಭಟ್ಕಳ ಪಟ್ಟಣದ ತಕಿಯಾ ಸ್ಟ್ರೀಟ್‌ನಲ್ಲಿರುವ ಶಂಕಿತ ಉಗ್ರ ಇಕ್ಬಾಲ್ ಭಟ್ಕಳ ಪುತ್ರ ಅಬ್ದುಲ್ ರಬಿ ಮನೆ ಮೇಲೆ ದಾಳಿ ಮಾಡಲಾಗಿದೆ. ಬಾಂಬರ್ ವಯಸ್ಸು ಅಬ್ದುಲ್ ರಬಿಗೆ ಹೋಲಿಕೆಯಾಗುವ ಹಿನ್ನೆಲೆ ಸ್ಥಳೀಯ ಪೊಲೀಸರ ಸಹಕಾರದಿಂದ ಬೆಂಗಳೂರಿನ ಎನ್‌ಐಎ ತಂಡ ದಾಳಿ ಮಾಡಿದೆ.
ಬೆಂಗಳೂರು, ಮಾರ್ಚ್ 27: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ (Rameshwaram Cafe blast case) ಸಂಬಂಧಿಸಿದಂತೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಶಂಕಿತನ ಮನೆ ಮೇಲೆ ಎನ್‌ಐಎ ದಾಳಿ ಮಾಡಿದೆ. ಭಟ್ಕಳ ಪಟ್ಟಣದ ತಕಿಯಾ ಸ್ಟ್ರೀಟ್‌ನಲ್ಲಿರುವ ಶಂಕಿತ ಉಗ್ರ ಇಕ್ಬಾಲ್ ಭಟ್ಕಳ ಪುತ್ರ ಅಬ್ದುಲ್ ರಬಿ ಮನೆ ಮೇಲೆ ದಾಳಿ ಮಾಡಲಾಗಿದೆ. ಬಾಂಬರ್ ವಯಸ್ಸು ಅಬ್ದುಲ್ ರಬಿಗೆ ಹೋಲಿಕೆಯಾಗುವ ಹಿನ್ನೆಲೆ ಸ್ಥಳೀಯ ಪೊಲೀಸರ ಸಹಕಾರದಿಂದ ಬೆಂಗಳೂರಿನ ಎನ್‌ಐಎ ತಂಡ ದಾಳಿ ಮಾಡಿದೆ. ನಾಳೆ ಬೆಂಗಳೂರಿನ NIA ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಸದ್ಯ ಭಟ್ಕಳ ಪಟ್ಟಣದಲ್ಲಿ ಎನ್‌ಐಎ ಅಧಿಕಾರಿಗಳ ದಾಳಿ ಸಂಚಲನ ಮೂಡಿಸಿದೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ವಿಚಾರವಾಗಿ ಬೆಂಗಳೂರಿನ 5 ಕಡೆ ಎನ್‌ಐಎ ಅಧಿಕಾರಿಗಳು ಇಂದು ದಾಳಿ ಮಾಡಿದ್ದಾರೆ. ಶಂಕಿತರ ಮನೆಗಳ ಮೇಲೆ ದಾಳಿ ಮಾಡಿರುವ ಎನ್‌ಐಎ ಮುಂಜಾನೆಯಿಂದಲೇ ಮನೆಗಳಲ್ಲಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬೆಂಗಳೂರಿನ ಐದು ಕಡೆ ಎನ್‌ಐಎ ದಾಳಿ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ 5ಕ್ಕೂ ಹೆಚ್ಚು ಕಡೆ ದಾಳಿ ಮಾಡಿ ಮಾಡಿದ್ದು, ಶಂಕಿತರ ಮನೆಗಳಲ್ಲಿ ಪರಿಶೀಲನೆ ಮಾಡಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ, ಇಂದಿರಾನಗರ, ಬೆಟಮಕ್ಕಿ ಸೇರಿದಂತೆ 5 ಕಡೆ ಎನ್‌ಐಎ ದಾಳಿ, ಪರಿಶೀಲನೆ ಮಾಡಲಾಗಿದೆ.
ಅದೇ ರೀತಿಯಾಗಿ ಚೆನ್ನೈನ ಮೂರು ಕಡೆ ಎನ್‌ಐಎ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಶಂಕಿತರಿಗೆ ಹಣದ ನೆರವು, ಉಗ್ರರ ಪರ ಹಣ ಸಂಗ್ರಹ ಆರೋಪ ಹಿನ್ನೆಲೆ ದಾಳಿ ನಡೆಸಿ ಪರಿಶೀಲಿಸಲಾಗಿದೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಶಂಕಿತ ವ್ಯಕ್ತಿ ಧರಿಸಿದ್ದ ಕ್ಯಾಪ್ ಮತ್ತು ತಲೆಗೂದಲಿನಿಂದ ಎನ್ಐಎಗೆ ಸಿಕ್ತು ಮಹತ್ವದ ಸುಳಿವು!
ಮಾರ್ಚ್ ಒಂದರಂದು ನಡೆದಿದ್ದ ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದ ತನಿಖೆ ಚುರುಕಾಗಿದೆ. ಟೋಪಿವಾಲನ ಬೆನ್ನತ್ತಿರುವ ಎನ್‌ಐಎ, ದಿಕ್ಕು ದಿಕ್ಕಿನಲ್ಲೂ ತಲಾಶ್ ನಡೆಸ್ತಿದ್ದಾರೆ. ತನಿಖೆ ವೇಳೆ ಮುಸಾವಿರ್ ಹುಸೇನ್ ಶಾಜೀಬ್ ಎಂಬಾತ ಬಾಂಬ್ ಇಟ್ಟಿರಬಹುದು. ಆತನಿಗೆ ಅಬ್ದುಲ್ ಮತೀನ್ ತಾಹ ಸಹಾಯ ಮಾಡಿರುವ ಶಂಕೆ ವ್ಯಕ್ತ ವ್ಯಕ್ತವಾಗಿದೆ. ಈ ಇಬ್ಬರು ಐಸಿಸ್ ಹಾಗು ಅಲ್ ಹಿಂದ್ ಗ್ರೂಪ್ ನ ಘೋಷಿತ ಉಗ್ರರು. ಕ್ರಿಮಿಗಳ ಜತೆ ಇವ್ರಿಗೆ ಕನೆಕ್ಷನ್ ಇರಬಹುದೆಂದು ಇಬ್ಬರನ್ನೂ ಶನಿವಾರ ಎನ್‌ಐಎ ವಶಕ್ಕೆ ಪಡೆದಿದೆ. ಬೆಂಗಳೂರಿನ ಪೂರ್ವ ವಿಭಾಗದಲ್ಲಿ ವಾಸವಿದ್ದ ಇಬ್ಬರನ್ನೂ ವಿಚಾರಣೆ ಮಾಡ್ತಿದ್ದಾರೆ. ಆದ್ರೆ, ಇನ್ನೂ ಬಂಧಿಸಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.