AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಕೇಸ್​: ಜೈಲಿನಲ್ಲಿದ್ದ ಆರೋಪಿಯನ್ನ ವಶಕ್ಕೆ ಪಡೆದ ಎನ್​ಐಎ

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಮಾಜ್ ಮುನೀರ್​​ನನ್ನು ಬಾಡಿ ವಾರಂಟ್ ಮೇಲೆ ಎನ್​ಐಎ ವಶಕ್ಕೆ ಪಡೆದೆ. ಆರೋಪಿ ಮಾಜ್ ಮುನೀರ್ 7 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಲಾಗಿದೆ. ಶಿವಮೊಗ್ಗ ಟ್ರಯಲ್ ಬ್ಲಾಸ್ಟ್​ ಕೇಸ್​ನಲ್ಲಿ ಮುನೀರ್ ಅರೆಸ್ಟ್​ ಆಗಿದ್ದ.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಕೇಸ್​: ಜೈಲಿನಲ್ಲಿದ್ದ ಆರೋಪಿಯನ್ನ ವಶಕ್ಕೆ ಪಡೆದ ಎನ್​ಐಎ
ಮಾಜ್ ಮುನೀರ್​​, ರಾಮೇಶ್ವರಂ ಕೆಫೆ
Follow us
Jagadisha B
| Updated By: ಗಂಗಾಧರ​ ಬ. ಸಾಬೋಜಿ

Updated on:Mar 15, 2024 | 4:46 PM

ಬೆಂಗಳೂರು, ಮಾರ್ಚ್​​ 15: ನಗರದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ (Rameshwaram Cafe Bomb Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಮಾಜ್ ಮುನೀರ್​​ನನ್ನು ಬಾಡಿ ವಾರಂಟ್ ಮೇಲೆ ಎನ್​ಐಎ ವಶಕ್ಕೆ ಪಡೆದೆ. ಆರೋಪಿ ಮಾಜ್ ಮುನೀರ್ 7 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಲಾಗಿದೆ. ಶಿವಮೊಗ್ಗ ಟ್ರಯಲ್ ಬ್ಲಾಸ್ಟ್​ ಕೇಸ್​ನಲ್ಲಿ ಮುನೀರ್ ಅರೆಸ್ಟ್​ ಆಗಿದ್ದ. ಬಂಧನ ಬಳಿಕ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಮುನೀರ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿ. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೇಸ್ ಸಂಬಂಧ ಮುನೀರ್ ವಶಕ್ಕೆ ಪಡೆದು ಎನ್​ಐಎ ವಿಚಾರಣೆ ನಡೆಸುತ್ತಿದೆ.

ರಾಜಧಾನಿಯಲ್ಲಿ ದೊಡ್ಡ ಬಾಂಬ್‌ ದಾಳಿಗೆ ನಾಲ್ಕು ವರ್ಷಗಳ ಹಿಂದೆಯೇ ಪ್ಲ್ಯಾನ್ ಆಗಿತ್ತು. ಹಿಂದೂ ಮುಖಂಡರೇ ಟಾರ್ಗೆಟ್‌ ಆಗಿದ್ದರು. ಅಷ್ಟಕ್ಕೂ ರಾಮೇಶ್ವರಂ ಕೆಫೆ ಸ್ಫೋಟದ ಹಿಂದೆ ಬಿದ್ದಿರುವ ಪೊಲೀಸರು ಮತ್ತಷ್ಟು ಭಯಾನಕ ರಹಸ್ಯಗಳನ್ನ ರಿವೀಲ್ ಮಾಡಿದ್ದರು.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಹಿಂದೆ ಅತಿ ದೊಡ್ಡ ಸಂಚು: ಹಿಂದೂ ಮುಖಂಡರೇ ಟಾರ್ಗೆಟ್

2020ರ ಜನವರಿಯಲ್ಲಿ ಎನ್‌ಐಎ ದಾಳಿ ಮಾಡಿತ್ತು. ಆಗ 7 ಜನ ಅರೆಸ್ಟ್ ಆಗಿದ್ದರು. ಅಷ್ಟೇ ಅಲ್ಲ ಒಂದಿಷ್ಟು ಸ್ಫೋಟದ ಸಂಚು ಬಯಲಾಗಿತ್ತು. ಈ ಗ್ಯಾಂಗ್‌ನಲ್ಲಿ ಕೇವಲ 7 ಜನ ಮಾತ್ರವಲ್ಲ ಇನ್ನಷ್ಟು ಯುವಕರು ಇರೋದು ಗೊತ್ತಾಗಿತ್ತು. ಅಂದು ಎಸ್ಕೇಪ್ ಆಗಿದ್ದವರೇ ಮಾರ್ಚ್‌ 1 ರಂದು ರಾಮೇಶ್ವರಂ ಕೆಫೆ ಮೇಲೆ ಬಾಂಬ್‌ ದಾಳಿ ಮಾಡಿರೋ ಸುಳಿವು ಸಿಕ್ಕಿದೆ.

ಇದನ್ನೂ ಓದಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ; ಬಳ್ಳಾರಿಯಲ್ಲಿ ಓರ್ವನನ್ನು ಅರೆಸ್ಟ್ ಮಾಡಿದ ಎನ್‌ಐಎ

ಅಲಿಹಿಂದ್‌ ಮಾಡ್ಯೂಲ್‌ ಸಂಘಟನೆ ಹಿಂದೂ ಮುಖಂಡರನ್ನೇ ಟಾರ್ಗೆಟ್ ಮಾಡಿ ಸ್ಫೋಟಕ್ಕೆ ಸಂಚು ರೂಪಿಸಿತ್ತು. ಈಗಲೂ ಅದೇ ಸಂಘಟನೆಯ ಕೈವಾಡ ಇದೆ ಎನ್ನುವ ವಾಸನೆ ಬಂದಿದೆ. ಅಂದು ಪರಾರಿಯಾಗಿದ್ದ ಅಬ್ದುಲ್ ಮತೀನ್, ಮುಜಾಫೀರ್ ಹುಸೇನ್, ಸೈಯದ್ ಅಲಿ ಈವರೆಗೂ ಪತ್ತೆ ಆಗಿಲ್ಲ. ಹೀಗಾಗಿ ಅವರ ಮೇಲೆಯೇ ಡೌಟ್‌ ಪಟ್ಟಿರುವ ಎನ್‌ಐಎ ಬೇಟೆ ಆರಂಭಿಸಿದೆ.

ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಬಳ್ಳಾರಿಯಲ್ಲಿ ಓರ್ವನನ್ನು ಬಂಧಿಸಲಾಗಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಬಳ್ಳಾರಿ ಮೂಲದ ಶಬ್ಬೀರ್​ನನ್ನು ಎನ್​ಐಎ ತಂಡ ಅರೆಸ್ಟ್ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:10 pm, Fri, 15 March 24