ಕಲಬುರಗಿ: ಅಂಗನವಾಡಿಗಳಲ್ಲಿ ಕಳಪೆ ಆಹಾರ ಪೂರೈಕೆ; ಲೋಕಾಯುಕ್ತ ಅಧಿಕಾರಿಗಳ ಧಿಡಿರ್ ದಾಳಿ

ಕಲಬುರಗಿ(Kalaburagi) ಜಿಲ್ಲೆಯ ಹಲವು ಅಂಗನವಾಡಿಗಳ ಮೇಲೆ ಲೋಕಾಯುಕ್ತ(Lokayukta) ಅಧಿಕಾರಿಗಳು ದಿಢೀರ್ ದಾಳಿ ಮಾಡಿದ್ದಾರೆ. ಕಲಬುರಗಿಯ ಹನುಮಾನ ನಗರದ ತಾಂಡಾ ಅಂಗನವಾಡಿಯಲ್ಲಿ ಪರೀಶಿಲನೆ‌ ವೇಳೆ ಮೊಟ್ಟೆ ತೂಕದಲ್ಲಿ ಬಾರಿ ವ್ಯತ್ಯಾಸ ಬಂದಿದ್ದು, ನಿಗದಿತ ತೂಕಕ್ಕಿಂತ ಕಡಿಮೆಯಿದೆ. ಚಿಕ್ಕ ಮಕ್ಕಳಿಗೆ ಕೊಡುವ ಮೊಟ್ಟೆಯಲ್ಲಿಯೂ ಭಾರಿ ಗೋಲ್ ಮಾಲ್ ಆಗಿದ್ದು,ಇದನ್ನು ಕಂಡು ಖುದ್ದು ಲೋಕಾಯುಕ್ತ ಎಸ್ಪಿ ಹೌಹಾರಿದ್ದಾರೆ.

ಕಲಬುರಗಿ: ಅಂಗನವಾಡಿಗಳಲ್ಲಿ ಕಳಪೆ ಆಹಾರ ಪೂರೈಕೆ; ಲೋಕಾಯುಕ್ತ ಅಧಿಕಾರಿಗಳ ಧಿಡಿರ್ ದಾಳಿ
ಕಲಬುರಗಿ ಅಂಗನವಾಡಿಗಳ ಮೇಲೆ ಲೋಕಾಯುಕ್ತ ದಾಳಿ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 15, 2024 | 3:45 PM

ಕಲಬುರಗಿ, ಮಾ.15: ಅಂಗನವಾಡಿಗಳಲ್ಲಿ ಕಳಪೆ ಆಹಾರ ಪೂರೈಕೆ ಹಿನ್ನೆಲೆ ಕಲಬುರಗಿ(Kalaburagi) ಜಿಲ್ಲೆಯ ಹಲವು ಅಂಗನವಾಡಿಗಳ ಮೇಲೆ ಲೋಕಾಯುಕ್ತ(Lokayukta) ಅಧಿಕಾರಿಗಳು ದಿಢೀರ್ ದಾಳಿ ಮಾಡಿದ್ದಾರೆ. ಕಲಬುರಗಿಯ ಹನುಮಾನ ನಗರದ ತಾಂಡಾ ಅಂಗನವಾಡಿಯಲ್ಲಿ ಪರೀಶಿಲನೆ‌ ವೇಳೆ ಮೊಟ್ಟೆ ತೂಕದಲ್ಲಿ ಬಾರಿ ವ್ಯತ್ಯಾಸ ಬಂದಿದ್ದು, ನಿಗದಿತ ತೂಕಕ್ಕಿಂತ ಕಡಿಮೆಯಿದೆ. ಕನಿಷ್ಠ 50 ಗ್ರಾಂ ಮೊಟ್ಟೆ ತೂಕ ಇರಬೇಕು‌ ಎಂಬ ನಿಯಮವಿದೆ. ಆದ್ರೆ, ಅಂಗನವಾಡಿಗಳಲ್ಲಿ ಸಿಕ್ಕ ಮೊಟ್ಟೆಯ ತೂಕ 23-30 ಗ್ರಾಂ ಮಾತ್ರ ಇದೆ.

ಮೊಟ್ಟೆಯಲ್ಲಿಯೂ ಭಾರಿ ಗೋಲ್ ಮಾಲ್

ಲೋಕಾಯುಕ್ತ ಎಸ್ಪಿ ಜಾನ್ ಆಂಟೋನಿ ನೇತೃತ್ವದಲ್ಲಿ ಇಂದು(ಮಾ.15) ಅಧಿಕಾರಿಗಳು ದಾಳಿ ನಡೆಸಿದ್ದರು. ಚಿಕ್ಕ ಮಕ್ಕಳಿಗೆ ಕೊಡುವ ಮೊಟ್ಟೆಯಲ್ಲಿಯೂ ಭಾರಿ ಗೋಲ್ ಮಾಲ್ ಆಗಿದ್ದು, ಮೊಟ್ಟೆ ತೂಕ ಕಡಿಮೆ ಜೊತೆಗೆ ಮೊಟ್ಟೆಗಳು ಕೂಡ ಕೊಳೆತ ಹೋಗಿವೆ. ಇನ್ನು ಆಹಾರ ಪೊಟ್ಟಣಗಳಲ್ಲಿಯೂ ಕಳಪೆ ಆಹಾರ ಪೂರೈಕೆ ಪತ್ತೆಯಾಗಿದೆ. ಇದನ್ನು ಕಂಡು ಖುದ್ದು ಲೋಕಾಯುಕ್ತ ಎಸ್ಪಿ ಹೌಹಾರಿದ್ದಾರೆ. ಇಂತಹ ಆಹಾರಗಳನ್ನು ಅಂಗನವಾಡಿ ಮಕ್ಕಳು ಮತ್ತು ಗರ್ಭಿಣಿಯರಿಗೆ ನೀಡಿ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

ಇದನ್ನೂ ಓದಿ:ಬಳ್ಳಾರಿಯಲ್ಲಿ 2 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಸಹಾಯಕ ಇಂಜಿನಿಯರ್

ಲೋಕಸಭಾ ಚುನಾವಣೆ ಹಿನ್ನೆಲೆ ರೌಡಿಶೀಟರ್​ಗಳಿಗೆ ಎಚ್ಚರಿಕೆ

ಕೋಲಾರ: ಲೋಕಸಭಾ ಚುನಾವಣೆ ಹಿನ್ನೆಲೆ, ಅಪರ ಎಸ್ಪಿ ರವಿಶಂಕರ್ ನೇತೃದಲ್ಲಿ ಕೋಲಾರ ಜಿಲ್ಲಾ ಪೋಲೀಸರಿಂದ ನಗರದ ಕವಾಯತು ಮೈದಾನದಲ್ಲಿ ರೌಡಿ ಶೀಟರ್ಸ್ ಪೆರೇಡ್ ನಡೆಸಲಾಗಿದೆ. ಯಾವುದೇ ರೀತಿ ದೌರ್ಜನ್ಯ, ಗಲಾಟೆ ನಡೆಸದಂತೆ, ಜೊತೆಗೆ ಯಾವುದೇ ಪ್ರಕರಣದಲ್ಲಿ ಭಾಗಿಯಾದರೆ ಗಡಿಪಾರು ಮಾಡುವುದಾಗಿ ರೌಡಿ ಶೀಟರ್ಸ್​ಗೆ ಎಚ್ಚರಿಕೆ ನೀಡಲಾಗಿದೆ. ಇನ್ನು ವಯಸ್ಸಾದವರೂ ಇದ್ದರೆ ಅವರನ್ನು ರೌಡಿ ಶೀಟರ್ ಹೆಸರಿನಿಂದ ಕೈಬಿಡಲಾಗುತ್ತದೆ ಎಂದರು. ಪೆರೇಡ್​ನಲ್ಲಿ ಡಿವೈಎಸ್ಪಿ ಎಂ. ಹೆಚ್ ನಾಗ್ತೆ, ವೃತ್ತ ನಿರೀಕ್ಷಕರು ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ