AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಹಿಂದೆ ಅತಿ ದೊಡ್ಡ ಸಂಚು: ಹಿಂದೂ ಮುಖಂಡರೇ ಟಾರ್ಗೆಟ್

ರಾಮೇಶ್ವರಂ ಕೆಫೆ ಮೇಲೆ ಬಾಂಬ್‌ ದಾಳಿ ಆಗಿ ದಿನಗಳು ಕಳೆಯುತ್ತಿವೆ. ಆದರೆ ಇದುವರೆಗೂ ಆರೋಪಿ ಮಾತ್ರ ಲಾಕ್ ಆಗಿಲ್ಲ. ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಬಳ್ಳಾರಿಯಲ್ಲಿ ಓರ್ವನನ್ನು ಬಂಧಿಸಲಾಗಿದೆ. ಇದೀಗ ಬೆಂಗಳೂರಿನ ಬಾಂಬ್ ಬ್ಲಾಸ್ಟ್‌ ಹಿಂದೆ ಅತಿ ದೊಡ್ಡ ಸಂಚು ನಡೆದಿತ್ತು ಎಂಬುವುದು ಬಲವಾದ ಸುಳಿವನ್ನು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಹಿಂದೆ ಅತಿ ದೊಡ್ಡ ಸಂಚು: ಹಿಂದೂ ಮುಖಂಡರೇ ಟಾರ್ಗೆಟ್
ರಾಮೇಶ್ವರಂ ಕೆಫೆ (ಸಂಗ್ರಹ ಚಿತ್ರ)
TV9 Web
| Edited By: |

Updated on: Mar 14, 2024 | 3:00 PM

Share

ಬೆಂಗಳೂರು, ಮಾರ್ಚ್​​​ 14: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ (Bengaluru Rameshwaram Cafe) ಕ್ಕೆ ಸಂಬಂಧಿಸಿದಂತೆ ಬಲವಾದ ಸುಳುವು ಸಿಕ್ಕಿರುವ ಬಗ್ಗೆ ಪೊಲೀಸರಿಂದ ಮಾಹಿತಿ ನೀಡಲಾಗಿದೆ. ಬೆಂಗಳೂರಿನ ಬಾಂಬ್ ಬ್ಲಾಸ್ಟ್‌ ಹಿಂದೆ ಅತಿ ದೊಡ್ಡ ಸಂಚು ನಡೆದಿತ್ತು. ಬೆಂಗಳೂರು ಬಾಂಬರ್ ಐಎಸ್‌ಐಎಸ್‌ ಲಿಂಕ್ ಹೊಂದಿದ್ದು, ಅಲಿಹಿಂದ್ ಮಾಡಲ್‌ ಮೂಲಕ ಸಂಚು ರೂಪಿಸಿದ್ದರು. ಹಿಂದೂ ಮುಖಂಡರೇ ಉಗ್ರರ ಸಂಘಟನೆಗೆ ಟಾರ್ಗೆಟ್ ಮಾಡಲಾಗಿದೆ. ನಾಲ್ಕು ವರ್ಷಗಳ ಹಿಂದೆ ಟಾರ್ಗೆಟ್‌ ವಿಫಲಗೊಳಿಸಿದ್ದರು. ಸುದ್ದಗುಂಟೆಪಾಳ್ಯದ ಪ್ರಕರಣದಲ್ಲಿ ಪರಾರಿಯಾಗಿದ್ದ ಕಿರಾತಕರನ್ನು ಅರೆಸ್ಟ್‌ ಮಾಡಲಾಗಿತ್ತು. ಅಬ್ದುಲ್ ಮತೀನ್‌, ಮುಸಾಫೀರ್ ಹುಸೇನ್ ಮತ್ತು ಸೈಯದ್ ಅಲಿ ಈ ಹಿಂದೆ ಪ್ರಕರಣದಲ್ಲಿ ಮಿಸ್ ಆಗಿ ಪರಾರಿಯಾಗಿದ್ದರು. ಬೆಂಗಳೂರಿನ ಬ್ಲಾಸ್ಟ್ ಮಾಡಿದವರು ಇವರೇ ಎಂಬ ಶಂಕೆ ವ್ಯಕ್ತವಾಗಿದೆ.

ಶಾಂತಿ ಕದಡುವ ಉದ್ದೇಶದಿಂದಲೇ ಬಾಂಬ್ ಬ್ಲಾಸ್ಟ್ ಮಾಡಲಾಗಿದೆ. ಹಿಂದೂ ಮುಖಂಡರ ಟಾರ್ಗೆಟ್ ಮಾಡಿ ಬ್ಲಾಸ್ಟ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದೆ ಮೂವರ ವಿರುದ್ದ ಸುದ್ದಗುಂಟೆಪಾಳ್ಯದಲ್ಲಿ ನಾಲ್ಕು ವರ್ಷಗಳ ಹಿಂದೆಯೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ; ಬಳ್ಳಾರಿಯಲ್ಲಿ ಓರ್ವನನ್ನು ಅರೆಸ್ಟ್ ಮಾಡಿದ ಎನ್‌ಐಎ

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟಿಸಿ ಎಸ್ಕೇಪ್‌ ಆಗಿರುವ ಬಾಂಬರ್ ಇದುವರೆಗೂ ಪತ್ತೆ ಆಗಿಲ್ಲ. ಆದರೆ ಎಲ್ಲಿ ಹೋದ? ಯಾವ ದಿಕ್ಕಿನ ಕಡೆ ಸಂಚರಿಸಿದ ಎನ್ನುವ ಒಂದೊಂದೇ ಸುಳಿವುಗಳು ರಿವೀಲ್ ಆಗ್ತಿವೆ. ಅದರಲ್ಲೂ ಬಾಂಬ್‌ ಬ್ಲಾಸ್ಟ್‌ ಮಾಡಿ ಬಂದವನನ್ನ ಅದೊಬ್ಬ ಸಂಪರ್ಕಿಸಿದ್ದ ಅನ್ನೋ ಸುಳಿವು ಎನ್‌ಐಎಗೆ ಸಿಕ್ಕಿತ್ತು.

ಅದೇ ಜಾಡು ಹಿಡಿದು ಹೊರಟ ಎನ್‌ಐಎ, ನಿನ್ನೆ ಬೆಳಗಿನ ಜಾವ 4 ಗಂಟೆಗೆ ಬಳ್ಳಾರಿಗೆ ಎಂಟ್ರಿಕೊಟ್ಟಿದ್ದರು. ಟ್ಯಾಂಕ್ ಬಂಡೂ ರಸ್ತೆಯ ನಿವಾಸಿ, ಶಬ್ಬಿರ್‌ ಎಂಬಾತನನ್ನ ಬಂಧಿಸಿದ್ದರು. ಬೆಂಗಳೂರಿಗೆ ಕರೆತಂದು ವಿಚಾರಣೆ ಮಾಡಿದ್ದಾರೆ. ತೊರಗಲ್ಲು ಬಳಿಯ ಪ್ರತಿಷ್ಟಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಬ್ಬೀರ್‌, ಉಗ್ರನ ಜತೆ ಸಂಪರ್ಕದಲ್ಲಿದ್ದ ಅನ್ನೋದು ಗೊತ್ತಾಗಿದೆ.

ಇದನ್ನೂ ಓದಿ: ಬಾಂಬ್ ಬ್ಲಾಸ್ಟ್​​ ಬಳಿಕ ರಾಮೇಶ್ವರಂ ಕೆಫೆ ರೀಓಪನ್, ಭಾರತೀಯರ ಆತ್ಮಸ್ಥೈರ್ಯವನ್ನು ಈ ಘಟನೆ ಕುಗ್ಗಿಸಿಲ್ಲ ಎಂದ ಮಾಲೀಕರು

ಇನ್ನು ಬಾಂಬರ್‌ಗೆ ಮತ್ತೆ ಮೂವರು ಸಹಾಯ ಮಾಡಿರುವ ಶಂಕೆ ಇದೆ. ಸೈಯದ್‌ ಅಲಿ, ಮಾಸ್ಟರ್‌ ಮೈಂಡ್‌ ಅಬ್ದುಲ್‌ ಮತೀನ್‌ ಹಾಗೂ ಮುಜಾಫಿರ್‌ ಹುಸೇನ್‌ಗಾಗಿ ಎನ್‌ಐಎ ಶೋಧ ನಡೆಸಿದೆ. ಸೈಯದ್‌ ಅಲಿ ಟೆಕ್ನಿಷಿಯನ್ ಆಗಿದ್ದು, ಡಾರ್ಕ್‌ವೆಬ್‌ ಮೂಲಕ ಕಚ್ಚಾ ವಸ್ತು ಸಂಗ್ರಹಿಸಿ ಬಾಂಬ್‌ ತಯಾರಿಸಿರೋ ಅನುಮಾನ ಇದೆ. ಇನ್ನು ಸ್ಫೋಟದ ದಿನ ಮುಜಾಫಿರ್‌ ಬೆಂಗಳೂರಿನಲ್ಲೇ ಇದ್ದನಂತೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.