ಪ್ರಾರಂಭವೇ ಆಗಿಲ್ಲ ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ; ಸೆಟ್ ಫೋಟೋ ಲೀಕ್ ಫೇಕ್?
ಯಶ್ ಅವರು ಸದ್ಯ ಗೋವಾದಲ್ಲಿ ಇದ್ದಾರೆ. ಈ ಫೋಟೋಗಳು ವೈರಲ್ ಆಗಿತ್ತು. ಇದು ಸೆಟ್ನ ಫೋಟೋ ಎಂದು ಕೆಲವು ಕಡೆಗಳಲ್ಲಿ ವರದಿ ಆಗಿತ್ತು. ಆದರೆ, ಇದು ಸೆಟ್ನ ಫೋಟೋ ಅಲ್ಲ ಎನ್ನಲಾಗಿದೆ. ಯಶ್ ಅವರು ಸದ್ಯ ‘ಟಾಕ್ಸಿಕ್’ ಸಿನಿಮಾದ ಸಿದ್ಧತೆಯಲ್ಲಿದ್ದಾರೆ.

ಬಿಗ್ ಬಜೆಟ್ ಸಿನಿಮಾಗಳ ಸೆಟ್ ಫೋಟೋಗಳು ಲೀಕ್ ಆಗುವುದು ಹೊಸದೇನು ಅಲ್ಲ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಸಿನಿಮಾ ಸೆಟ್ ಫೋಟೋ ಸೋರಿಕೆ ಆಗೋದು ನಿಲ್ಲೋದಿಲ್ಲ. ಇತ್ತೀಚೆಗೆ ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್ ಸೆಟ್ ಫೋಟೋ ವೈರಲ್ ಆಗಿತ್ತು. ಆದರೆ, ಅಸಲಿಗೆ ಸಿನಿಮಾದ ಶೂಟಿಂಗ್ ಶುರುವಾಗಿಲ್ಲ ಎನ್ನಲಾಗಿದೆ. ಇದರಿಂದ ಯಶ್ ಅಭಿಮಾನಿಗಳಲ್ಲಿ ಗೊಂದಲ ಹೆಚ್ಚಾಗಿದೆ. ಆ ಬಗ್ಗೆ ಈ ಸ್ಟೋರಿಯಲ್ಲಿದೆ ಸ್ಪಷ್ಟನೆ.
ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಯಶ್ ಅವರು ಮುಂದಿನ ಸಿನಿಮಾ ಘೋಷಣೆ ಮಾಡೋಕೆ ಒಂದು ವರ್ಷಕ್ಕೂ ಹೆಚ್ಚಿನ ಸಮಯ ತೆಗೆದುಕೊಂಡರು. ಈಗ ಅವರು ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ಜೊತೆ ಮುಂದಿನ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಭರ್ಜರಿ ಆ್ಯಕ್ಷನ್ ಜೊತೆ ಈ ಸಿನಿಮಾ ಮೂಡಿ ಬರಲಿದೆ ಎನ್ನಲಾಗಿದೆ. ಇತ್ತೀಚೆಗೆ ಸಿನಿಮಾದ ಕೆಲವು ಫೋಟೋ ವೈರಲ್ ಆಗಿತ್ತು.
ಯಶ್ ಅವರು ಸದ್ಯ ಗೋವಾದಲ್ಲಿ ಇದ್ದಾರೆ. ಈ ಫೋಟೋಗಳು ವೈರಲ್ ಆಗಿತ್ತು. ಇದು ಸೆಟ್ನ ಫೋಟೋ ಎಂದು ಕೆಲವು ಕಡೆಗಳಲ್ಲಿ ವರದಿ ಆಗಿತ್ತು. ಆದರೆ, ಇದು ಸೆಟ್ನ ಫೋಟೋ ಅಲ್ಲ ಎನ್ನಲಾಗಿದೆ. ಯಶ್ ಅವರು ಸದ್ಯ ‘ಟಾಕ್ಸಿಕ್’ ಸಿನಿಮಾದ ಸಿದ್ಧತೆಯಲ್ಲಿದ್ದಾರೆ. ಸದ್ಯ ಅವರು ಈ ಚಿತ್ರಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಸದ್ಯ ಯಶ್ ಅವರು ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ. ಅವರು ಕ್ರಿಯೇಟಿವ್ ಪ್ರೊಸೆಸ್ನ ಭಾಗ ಆಗುತ್ತಿದ್ದಾರೆ. ಅವರು ಈ ಚಿತ್ರಕ್ಕಾಗಿ ಹೆಚ್ಚಿನ ಎಫರ್ಟ್ ಹಾಕುತ್ತಿದ್ದಾರೆ ಎನ್ನಲಾಗಿದೆ. ಈ ಚಿತ್ರದ ಶೂಟಿಂಗ್ ಶೀಘ್ರವೇ ಪ್ರಾರಂಭ ಆಗಲಿದೆ. ಗೋವಾದಲ್ಲಿ ಶೂಟ್ ನಡೆಯಲಿದೆ.
‘ಟಾಕ್ಸಿಕ್’ ಸಿನಿಮಾದ ಪಾತ್ರವರ್ಗ ಇನ್ನಷ್ಟೇ ಘೋಷಣೆ ಆಗಬೇಕಿದೆ. ಕರೀನಾ ಕಪೂರ್ ಅವರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ವರದಿ ಆಗಿದೆ. ಅವರು ಯಶ್ ಸಹೋದರಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ, ಚಿತ್ರತಂಡದ ಸ್ಪಷ್ಟನೆ ಪ್ರಕಾರ ಯಾವುದೇ ಪಾತ್ರವೂ ಫೈನಲ್ ಆಗಿಲ್ಲವಂತೆ. ಈ ಬಗ್ಗೆ ಚಿತ್ರತಂಡದಿಂದ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಇದನ್ನೂ ಓದಿ: ಹೊಸ ಸಿನಿಮಾದಲ್ಲಿ ಯಶ್ಗೆ ಜೋಡಿ ಆಗ್ತಾರಾ 52 ವರ್ಷದ ನಟಿ ಸಾಕ್ಷಿ ತನ್ವರ್?
ಯಶ್ ಅವರು ‘ಟಾಕ್ಸಿಕ್’ ಸಿನಿಮಾಗಾಗಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಸಾಕಷ್ಟು ಕಾದಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ.
ಕೆವಿಎನ್ ಪ್ರೊಡಕ್ಷನ್ ಅವರು ‘ಟಾಕ್ಸಿಕ್’ ಸಿನಿಮಾ ನಿರ್ಮಾಣ ಮಾಡುತ್ತಿದೆ. ಗೀತು ಮೋಹನ್ದಾಸ್ ಅವರು ಮಲಯಾಳಂ ಚಿತ್ರರಂಗದಲ್ಲಿ ಖ್ಯಾತಿ ಪಡೆದವರು. ಅವರು ಇದೇ ಮೊದಲ ಬಾರಿಗೆ ಕನ್ನಡಕ್ಕೆ ಕಾಲಿಡಯತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಏಪ್ರಿಲ್ 10ರಂದು ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:59 pm, Fri, 29 March 24



