ಹೊಸ ಸಿನಿಮಾದಲ್ಲಿ ಯಶ್​ಗೆ ಜೋಡಿ ಆಗ್ತಾರಾ 52 ವರ್ಷದ ನಟಿ ಸಾಕ್ಷಿ ತನ್ವರ್​?

ನಟಿ ಸಾಕ್ಷಿ ತನ್ವರ್​ ಅವರು ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಕಿರುತೆರೆಯ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಅವರು ಮನೆಮಾತಾಗಿದ್ದಾರೆ. ಈಗ ಅವರಿಗೆ 52 ವರ್ಷ ವಯಸ್ಸು. ಹೊಸ ಸಿನಿಮಾದಲ್ಲಿ ‘ರಾಕಿಂಗ್​ ಸ್ಟಾರ್​’ ಯಶ್​ ಜೊತೆ ತೆರೆ ಹಂಚಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಚಿತ್ರತಂಡದಿಂದ ಇನ್ನೂ ಅಧಿಕೃತ ಘೋಷಣೆ ಆಗುವುದು ಬಾಕಿ ಇದೆ.

ಹೊಸ ಸಿನಿಮಾದಲ್ಲಿ ಯಶ್​ಗೆ ಜೋಡಿ ಆಗ್ತಾರಾ 52 ವರ್ಷದ ನಟಿ ಸಾಕ್ಷಿ ತನ್ವರ್​?
ಯಶ್​, ಸಾಕ್ಷಿ ತನ್ವರ್​
Follow us
ಮದನ್​ ಕುಮಾರ್​
|

Updated on: Mar 27, 2024 | 10:11 PM

ಬಿಗ್​ ಬಜೆಟ್​ ಸಿನಿಮಾಗಳ ಬಗ್ಗೆ ಗಾಸಿಪ್​ ಹುಟ್ಟಿಕೊಳ್ಳುವುದುದು ಸಹಜ. ಇತ್ತೀಚಿನ ದಿನಗಳಲ್ಲಿ, ಸೆಟ್ಟೇರುವುದಕ್ಕೂ ಮುನ್ನವೇ ಅತಿ ಹೆಚ್ಚು ಸುದ್ದಿಯಾದ ಸಿನಿಮಾ ಎಂದರೆ ಅದು ‘ರಾಮಾಯಾಣ’ (Ramayana Movie) ಚಿತ್ರ. ಹೌದು, ಬಾಲಿವುಡ್​ನಲ್ಲಿ ರಾಮಾಯಣ ಕಥೆಯನ್ನು ಆಧರಿಸಿ ಸಿನಿಮಾ ಸಿದ್ಧವಾಗುತ್ತಿದ್ದು ಅದರ ಪಾತ್ರವರ್ಗದ ಬಗ್ಗೆ ಹಲವಾರು ಗಾಸಿಪ್​ಗಳು ಕೇಳಿಬರುತ್ತಿವೆ. ರಾಮಾಯಣದಲ್ಲಿ ಹಲವಾರು ಪ್ರಮುಖ ಪಾತ್ರಗಳು ಬರುತ್ತವೆ. ಅವುಗಳಲ್ಲಿ ಯಾರಿಗೆ ಯಾವ ಪಾತ್ರ ಸಿಗಲಿದೆ ಎಂಬ ಬಗ್ಗೆ ಅಧಿಕೃತ ಘೋಷಣೆ ಆಗುವುದು ಬಾಕಿ ಇದೆ. ಅಷ್ಟರಲ್ಲಾಗಲೇ ಹತ್ತಾರು ಗಾಸಿಪ್​ಗಳು ಹರಿದಾಡುತ್ತಿವೆ. ಈ ಸಿನಿಮಾದಲ್ಲಿ ಯಶ್​ (Yash) ಜೊತೆ ಕಿರುತೆರೆ ನಟಿ ಸಾಕ್ಷಿ ತನ್ವರ್​ (Sakshi Tanwar) ಅಭಿನಯಿಸುತ್ತಾರೆ ಎಂದು ಹೇಳಲಾಗುತ್ತಿದೆ.

‘ರಾಮಾಯಣ’ ಸಿನಿಮಾಗೆ ನಿತೀಶ್​ ತಿವಾರಿ ನಿರ್ದೇಶನ ಮಾಡಲಿದ್ದಾರೆ. ರಾಮನಾಗಿ ರಣಬೀರ್​ ಕಪೂರ್​ ನಟಿಸಲಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ ಅಭಿನಯಿಸಲಿದ್ದಾರೆ. ರಾವಣನ ಪಾತ್ರವನ್ನು ಯಶ್​ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ರಾವಣನ ಪತ್ನಿ ಮಂಡೋದರಿಯ ಪಾತ್ರದಲ್ಲಿ ಖ್ಯಾತ ಕಿರುತೆರೆ ಕಲಾವಿದೆ ಸಾಕ್ಷಿ ತನ್ವರ್​ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿ ಆಗಿದೆ. ಅಂದರೆ, ರಾವಣ ಪಾತ್ರಧಾರಿ ಯಶ್​ಗೆ ಸಾಕ್ಷಿ ತನ್ವರ್​ ಅವರು ಜೋಡಿ ಆಗಲಿದ್ದಾರೆ ಎಂಬುದು ಸದ್ಯದ ಗಾಸಿಪ್​.

ಇದನ್ನೂ ಓದಿ: ಪದೇ ಪದೇ ಪ್ರಶ್ನೆ ಕೇಳಿದವರಿಗೆ ಯಶ್​ ಉತ್ತರ; ಝಲಕ್ ತೋರಿಸಿದ ರಾಕಿ ಭಾಯ್​

ನಟಿ ಸಾಕ್ಷಿ ತನ್ವರ್​ ಅವರಿಗೆ ಈಗ 52 ವರ್ಷ ವಯಸ್ಸು. ಹಲವು ವರ್ಷಗಳಿಂದ ಅವರು ಬಣ್ಣದ ಲೋಕದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಹಿಂದಿ ಕಿರುತೆರೆಯ ಅನೇಕ ಸೀರಿಯಲ್​ಗಳಲ್ಲಿ ನಟಿಸಿ ಫೇಮಸ್​ ಆಗಿದ್ದಾರೆ. ನಿತೀಶ್​ ತಿವಾರಿ ನಿರ್ದೇಶನ ಮಾಡಿದ್ದ ‘ದಂಗಲ್​’ ಸಿನಿಮಾದಲ್ಲಿ ಆಮಿರ್​ ಖಾನ್​ ಪತ್ನಿಯ ಪಾತ್ರದಲ್ಲಿ ಸಾಕ್ಷಿ ತನ್ವರ್​ ನಟಿಸಿದ್ದರು. ಈಗ ಯಶ್​ಗೆ ಜೋಡಿಯಾಗಿ ‘ರಾಮಾಯಣ’ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಾರೆ ಎಂಬ ಗಾಸಿಪ್​ ಹಬ್ಬಿದೆ.

ಇದನ್ನೂ ಓದಿ: ಯಶ್​ ಸಹೋದರಿ ಪಾತ್ರದಲ್ಲಿ ಕರೀನಾ ಕಪೂರ್​? ‘ಟಾಕ್ಸಿಕ್​’ ಚಿತ್ರದ ಬಗ್ಗೆ ಬಿಗ್ ನ್ಯೂಸ್​

ಶೀಘ್ರದಲ್ಲೇ ‘ರಾಮಾಯಣ’ ಸಿನಿಮಾ ಸೆಟ್ಟೇರಲಿದೆ. ಅದಕ್ಕಾಗಿ ರಣಬೀರ್​ ಕಪೂರ್​ ಅವರು ಈಗಾಗಲೇ ತಯಾರಿ ಶುರು ಮಾಡಿಕೊಂಡಿದ್ದಾರೆ. ರವಿ ದುಬೆ ಅವರು ಲಕ್ಷ್ಮಣನ ಪಾತ್ರ ಮಾಡುತ್ತಾರೆ. ದಶರತನಾಗಿ ಅರುಣ್​ ಗೋವಿಲ್​, ಕೈಕೇಯಿಯಾಗಿ ಲಾರಾ ದತ್ತ, ಹನುಮಂತನಾಗಿ ಸನ್ನಿ ಡಿಯೋಲ್​ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಹಲವಾರು ಕಲಾವಿದರ ಜೊತೆ ಮಾತುಕಥೆ ನಡೆಯುತ್ತಿದೆ. ಆದಷ್ಟು ಬೇಗ ಪಾತ್ರವರ್ಗದ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ. ಮೂರು ಪಾರ್ಟ್​ಗಳಲ್ಲಿ ಈ ಸಿನಿಮಾ ಮೂಡಿಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್