Viral: ಉದ್ಯೋಗಿಗಳಿಗೆ 83 ಕೋಟಿ ರೂ.ಗಳಷ್ಟು ಭರ್ಜರಿ ಬೋನಸ್​​ ನೀಡಿದ ಕಂಪನಿ

ಕಂಪೆನಿಯೂ 198 ಉದ್ಯೋಗಿಗಳಿಗೆ ಸುಮಾರು 83 ಕೋಟಿ ರೂ.ಗಳ ಬೋನಸ್ ನೀಡಿದೆ. ಪ್ರತಿ ಉದ್ಯೋಗಿಗೆ ಸರಾಸರಿ 50 ಸಾವಿರ ಡಾಲರ್ ಅಂದರೆ 41 ಲಕ್ಷ ರೂ. ನೀಡಲಾಗಿದೆ.

Viral: ಉದ್ಯೋಗಿಗಳಿಗೆ 83 ಕೋಟಿ ರೂ.ಗಳಷ್ಟು ಭರ್ಜರಿ ಬೋನಸ್​​ ನೀಡಿದ ಕಂಪನಿ
ಭರ್ಜರಿ ಬೋನಸ್​​ ನೀಡಿದ ಕಂಪನಿ
Follow us
ಅಕ್ಷತಾ ವರ್ಕಾಡಿ
|

Updated on: Apr 14, 2024 | 5:08 PM

ಹಬ್ಬ ಬಂತೆಂದರೆ ಸಾಕು ಈ ವರ್ಷ ಬೋನಸ್​​ ಎಷ್ಟು ಸಿಗಬಹುದು ಎಂದು ಎಲ್ಲಾ ಉದ್ಯೋಗಿಗಳು ಅಂದುಕೊಳ್ಳುವುದು ಸಹಜ. ಇದೀಗ ಅಮೆರಿಕದ ಕಂಪೆನಿಯೊಂದು ತನ್ನ ಉದ್ಯೋಗಿಗಳಿಗೆ ಭರ್ಜರಿ ಬೋನಸ್​​ ನೀಡಿದ್ದು, ಇದೀಗ ಈ ಕಂಪನಿ ಸಖತ್​ ಸುದ್ದಿಯಲ್ಲಿದೆ. ಅಮೆರಿಕದ ಸೇಂಟ್ ಜಾನ್ಸ್ ಪ್ರಾಪರ್ಟೀಸ್ ಎಂಬ ಕಂಪನಿ ತನ್ನ ಉದ್ಯೋಗಿಗಳಿಗೆ ಭರ್ಜರಿ ಬೋನಸ್ ನೀಡಿದೆ. ಕಂಪೆನಿಯೂ 198 ಉದ್ಯೋಗಿಗಳಿಗೆ ಸುಮಾರು 83 ಕೋಟಿ ರೂ.ಗಳ ಬೋನಸ್ ನೀಡಿದೆ. ಪ್ರತಿ ಉದ್ಯೋಗಿಗೆ ಸರಾಸರಿ 50 ಸಾವಿರ ಡಾಲರ್ ಅಂದರೆ 41 ಲಕ್ಷ ರೂ. ನೀಡಲಾಗಿದೆ. ಅನಿರೀಕ್ಷಿತವಾಗಿ ಇಷ್ಟು ದೊಡ್ಡ ಮೊತ್ತದ ಬೋನಸ್​ ಕಂಡು ಉದ್ಯೋಗಿಗಳು ಖುಷಿಯಿಂದ ಅಳಲು ಆರಂಭಿಸಿದ್ದಾರೆ.

ಕಂಪನಿ ಲಾಭಗಳಿಸಲು ಸಹಾಯ ಮಾಡಿದ ನೌಕರರಿಗೆ ಈ ಬಹುಮಾನ ನೀಡಲಾಗಿದೆ.”ನಮ್ಮ ಕಂಪೆನಿ ಯಶಸ್ಸನ್ನು ಆಚರಿಸಲು, ನಾವು ನಮ್ಮ ಉದ್ಯೋಗಿಗಳಿಗೆ ದೊಡ್ಡ ರೀತಿಯಲ್ಲಿ ಪ್ರತಿಫಲ ನೀಡಲು ಬಯಸಿದ್ದೇವೆ, ಅದು ಅವರ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ನಮ್ಮ ಪ್ರತಿಯೊಬ್ಬ ಉದ್ಯೋಗಿಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗಾಗಿ ನಾನು ಕೃತಜ್ಞನಾಗಿದ್ದೇನೆ” ಎಂದು ಕಂಪನಿ ಅಧ್ಯಕ್ಷ ಮತ್ತು ಸಂಸ್ಥಾಪಕ ಎಡ್ವರ್ಡ್ ಸೇಂಟ್ ಜಾನ್ ತಿಳಿಸಿದ್ದಾರೆ.

ಇದನ್ನೂ ಓದಿ: 7 ಕೆಜಿ ಚಿನ್ನದಿಂದ ತಯಾರಿಸಿದ ರಾಮಾಯಣ ಪುಸ್ತಕ; ಅಯೋಧ್ಯಾ ರಾಮನಿಗೆ ಸಮರ್ಪಿಸಿದ ನಿವೃತ್ತ ಐಎಎಸ್ ಅಧಿಕಾರಿ

ವರದಿಗಳ ಪ್ರಕಾರ, ಉದ್ಯೋಗಿಗಳಿಗೆ 10 ಮಿಲಿಯನ್ ಡಾಲರ್ ಅಂದರೆ ಸುಮಾರು 83 ಕೋಟಿ ಬೋನಸ್ ಉಡುಗೊರೆಯಾಗಿ ನೀಡಲಾಗಿದೆ. ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 198 ಉದ್ಯೋಗಿಗಳಿಗೆ ಈ ಬೋನಸ್ ನೀಡಲಾಗಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: