Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸನ್ಯಾಸತ್ವ ಸ್ವೀಕರಿಸಲು 200 ಕೋಟಿ ರೂ. ಸಂಪತ್ತು ದಾನ ಮಾಡಿದ ಗುಜರಾತ್​ ಉದ್ಯಮಿ

ಸಬರ್ಕಾಂತ ಜಿಲ್ಲೆಯ ಹಿಮತ್‌ನಗರ ನಿವಾಸಿ ಉದ್ಯಮಿ ಭವೇಶ್ ಭಾಯ್ ಭಂಡಾರಿ ಮತ್ತು ಅವರ ಪತ್ನಿ ಜೈನ ದೀಕ್ಷೆ ತೆಗೆದುಕೊಂಡು ಸನ್ಯಾಸಿಯಾಗಲು ಮುಂದಾಗಿದ್ದು, ಇದಕ್ಕಾಗಿ ತಮ್ಮ 200 ಕೋಟಿ ರೂ. ಸಂಪತ್ತನ್ನು ದತ್ತಿ ಸಂಸ್ಥೆಗೆ ದಾನ ಮಾಡಿದ್ದಾರೆ. ಏಪ್ರಿಲ್ 22 ರಂದು ಹಿಮತ್‌ನಗರದಲ್ಲಿ 35 ಜನರು ಸನ್ಯಾಸ ಸ್ವೀಕರಿಸಲಿದ್ದಾರೆ.

ಸನ್ಯಾಸತ್ವ ಸ್ವೀಕರಿಸಲು 200 ಕೋಟಿ ರೂ. ಸಂಪತ್ತು ದಾನ ಮಾಡಿದ ಗುಜರಾತ್​ ಉದ್ಯಮಿ
ಸನ್ಯಾಸತ್ವಕ್ಕೆ ಮುಂದಾದ ಗುಜರಾತ್​ ದಂಪತಿ
Follow us
ಗಂಗಾಧರ​ ಬ. ಸಾಬೋಜಿ
|

Updated on:Apr 14, 2024 | 10:07 PM

ಒಬ್ಬ ಸನ್ಯಾಸಿಯು ತನ್ನ ಲೌಕಿಕ ಪ್ರಪಂಚದಿಂದ ದೂರವಾಗಿ, ಏಕಾಂಗಿ ಮತ್ತು ಏಕಾಂತದಲ್ಲಿ ತನ್ನ ಜೀವನವನ್ನು ನಡೆಸಲು ಭಯಸುತ್ತಾನೆ. ಹಿಂದಿನ ಕಾಲದಲ್ಲಿ ಹೆಚ್ಚಾಗಿ ಅವಿದ್ಯಾವಂತರು ಮಾತ್ರ ಸನ್ಯಾಸತ್ವವನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು ಸೇರಿದಂತೆ ಸಾಕಷ್ಟು ಜನರು ಸನ್ಯಾಸತ್ವದ ಕಡೆಗೆ ವಾಲುತ್ತಿದ್ದಾರೆ. ಸದ್ಯ ಗುಜರಾತಿನ (Gujarat) ಉದ್ಯಮಿಯೊಬ್ಬರು, ಆತನ ಪತ್ನಿಯೊಂದಿಗೆ ತಮ್ಮ 200 ಕೋಟಿ ರೂ. ಆಸ್ತಿಯನ್ನು ದಾನ ಮಾಡುವ ಮೂಲಕ ಸನ್ಯಾಸತ್ವ ಸ್ವೀಕರಿಸಲು ಮುಂದಾಗಿದ್ದಾರೆ. ಸದ್ಯ ಈ ಸುದ್ದಿ ಎಲ್ಲೆಡೆ ವೈರಲ್​ ಆಗಿದೆ.

ಹೌದು, ಸಬರ್ಕಾಂತ ಜಿಲ್ಲೆಯ ಹಿಮತ್‌ನಗರ ನಿವಾಸಿ ಉದ್ಯಮಿ ಭವೇಶ್ ಭಾಯ್ ಭಂಡಾರಿ ಮತ್ತು ಅವರ ಪತ್ನಿ ಜೈನ ದೀಕ್ಷೆ ತೆಗೆದುಕೊಂಡು ಸನ್ಯಾಸಿಯಾಗಲು ಮುಂದಾಗಿದ್ದು, ಇದಕ್ಕಾಗಿ ತಮ್ಮ 200 ಕೋಟಿ ರೂ. ಸಂಪತ್ತನ್ನು ದತ್ತಿ ಸಂಸ್ಥೆಗೆ ದಾನ ಮಾಡಿದ್ದಾರೆ. ವಿಚಿತ್ರವೆಂದರೆ ಎರಡು ವರ್ಷಗಳ ಹಿಂದಷ್ಟೇ ದಂಪತಿಯ ಮಗ ಮತ್ತು ಮಗಳು ಐಷಾರಾಮಿ ಜೀವನವನ್ನು ತ್ಯಜಿಸಿ ದೀಕ್ಷೆ ತೆಗೆದುಕೊಂಡಿದ್ದಾರೆ. ಇದೀಗ ತಂದೆ-ತಾಯಿ ಕೂಡ ದೀಕ್ಷೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Viral Video: ನೀರಿನಿಂದ ಹೊರಬಂದ ಮೀನಿನ ಪ್ರಾಣ ರಕ್ಷಿಸಿದ ಬೆಳ್ಳಕ್ಕಿ; ವಿಡಿಯೋ ಇಲ್ಲಿದೆ ನೋಡಿ

ಭವೇಶ್ ಭಂಡಾರಿ ಅವರು ಜೈನ ಸಮುದಾಯದ ಸನ್ಯಾಸಿಗಳು ಮತ್ತು ಗುರುಗಳನ್ನು ಆರಾಧಿಸುತ್ತಾರೆ. ಅವರ ಮಗ ಮತ್ತು ಮಗಳು ಎರಡು ವರ್ಷಗಳ ಹಿಂದೆ ಸನ್ಯಾಸ ತೆಗೆದುಕೊಂಡಿದ್ದಾರೆ. 2022 ರಲ್ಲಿ ಅವರ ದೀಕ್ಷಾ ನಂತರ, ಭಾವೇಶ್ ಭಾಯ್ ಮತ್ತು ಅವರ ಪತ್ನಿ ಈಗ ಲೌಕಿಕ ಜೀವನವನ್ನು ತ್ಯಜಿಸಲು ನಿರ್ಧರಿಸಿದ್ದಾರೆ.

ಭವೇಶ್ ಭಾಯ್ ಭಂಡಾರಿ ಅವರು ಶ್ರೀಮಂತ ಕುಟುಂಬದಲ್ಲಿ ಜನಿಸಿದವರು. ಎಲ್ಲಾ ಸೌಕರ್ಯಗಳೊಂದಿಗೆ ಬೆಳೆದವರು. ಆದರೆ ಈಗ 200 ಕೋಟಿ ರೂ. ಅಧಿಕ ಮೌಲ್ಯದ ಸಂಪತ್ತನ್ನು ತ್ಯಜಿಸಿ ಸನ್ಯಾಸತ್ವ ಮಾರ್ಗದಲ್ಲಿ ನಡೆಯಲು ನಿರ್ಧರಿಸಿದ್ದಾರೆ.

ಭವೇಶ್ ಭಾಯ್ ಭಂಡಾರಿ ಮತ್ತು ಅವರ ಪತ್ನಿ ಇದ್ದಕ್ಕಿದ್ದಂತೆ ಈ ನಿರ್ಧಾರವನ್ನು ಕೈಗೊಂಡಿದ್ದು, ಅಹಮದಾಬಾದ್‌ನಲ್ಲಿರುವ ತಮ್ಮ ಕಟ್ಟಡ ನಿರ್ಮಾಣ ವ್ಯವಹಾರವನ್ನು ಬಿಟ್ಟು ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: Video Viral: ಕಷ್ಟಪಟ್ಟು ಖರೀದಿಸಿದ ಆಟೋ ಮುಂದೆ ಮಂಡಿಯೂರಿ ಸೆಲ್ಫಿ ಕ್ಲಿಕ್ಕಿಸಿದ ವ್ಯಕ್ತಿ

ಜೈನ ಸಮಾಜದಲ್ಲಿ ದೀಕ್ಷೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ದೀಕ್ಷೆ ತೆಗೆದುಕೊಳ್ಳುವವರು ಭಿಕ್ಷೆ ಬೇಡುವ ಮೂಲಕ ಜೀವನ ಸಾಗಿಸಬೇಕು. ಎಸಿ, ಫ್ಯಾನ್ ಮತ್ತು ಮೊಬೈಲ್​​ ಸೇರಿದಂತೆ ಐಷಾರಾಮಿ ಜೀವನವನ್ನು ತ್ಯಜಿಸಬೇಕು. ಅಷ್ಟೇ ಅಲ್ಲದೇ ಜೀವನ ಪರ್ಯಂತ ಬರಿಗಾಲಿನಲ್ಲಿ ಇಡೀ ಭಾರತದಾದ್ಯಂತ ತಿರುಗಾಡಬೇಕಾಗುತ್ತದೆ.

ಭವೇಶ್ ಭಾಯ್ ಭಂಡಾರಿ ಅವರ ಪರಿಚಿತರಾದ ದಿಕುಲ್ ಗಾಂಧಿ ಅವರು ಪ್ರತಿಕ್ರಿಯಿಸಿದ್ದು, ಏಪ್ರಿಲ್ 22 ರಂದು ಹಿಮತ್‌ನಗರದಲ್ಲಿ 35 ಜನರು ಸನ್ಯಾಸ ಸ್ವೀಕರಿಸಲಿದ್ದಾರೆ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:05 pm, Sun, 14 April 24

ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಶಾಸಕರಾದ ಪೊನ್ನಣ್ಣ, ಮಂಥರ್​ಗೌಡ ಹೆಸರು ನಾಪತ್ತೆಯಾಗಿವೆ: ವಿನಯ್ ಸಹೋದರ
ಬ್ಯಾಂಕಾಕ್‌ನ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮೋದಿ- ನೇಪಾಳದ ಪ್ರಧಾನಿ ಭೇಟಿ
ಬ್ಯಾಂಕಾಕ್‌ನ ಬಿಮ್‌ಸ್ಟೆಕ್ ಶೃಂಗಸಭೆಯಲ್ಲಿ ಮೋದಿ- ನೇಪಾಳದ ಪ್ರಧಾನಿ ಭೇಟಿ
ವಿನಯ್​ರೊಂದಿಗೆ ನಾನು ಒಮ್ಮೆಯೂ ಮಾತಾಡಿಲ್ಲ, ಕಿರುಕುಳ ಎಲ್ಲಿಂದ ಬಂತು?: ಶಾಸಕ
ವಿನಯ್​ರೊಂದಿಗೆ ನಾನು ಒಮ್ಮೆಯೂ ಮಾತಾಡಿಲ್ಲ, ಕಿರುಕುಳ ಎಲ್ಲಿಂದ ಬಂತು?: ಶಾಸಕ
ವಿನಯ್ ಸಾವಿಗೆ ಕಾರಣರಾದ ಎಸ್​ಪಿಯನ್ನು ಕೂಡಲೇ ಸಸ್ಪೆಂಡ್ ಮಾಡಬೇಕು: ಅಶೋಕ
ವಿನಯ್ ಸಾವಿಗೆ ಕಾರಣರಾದ ಎಸ್​ಪಿಯನ್ನು ಕೂಡಲೇ ಸಸ್ಪೆಂಡ್ ಮಾಡಬೇಕು: ಅಶೋಕ
ವಿನಯ್ ಸೋಮಯ್ಯ ಸಾವು; ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಕೊಡಗು ಎಸ್​ಪಿ
ವಿನಯ್ ಸೋಮಯ್ಯ ಸಾವು; ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ: ಕೊಡಗು ಎಸ್​ಪಿ
‘ಡೆವಿಲ್’ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ದರ್ಶನ್: ವಿಡಿಯೋ
‘ಡೆವಿಲ್’ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ದರ್ಶನ್: ವಿಡಿಯೋ
ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ನಾವ್ಯಾರು ಅವರ ಜೊತೆ ಹೋಗಲ್ಲ: ಬಂಗಾರಪ್ಪ
ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ನಾವ್ಯಾರು ಅವರ ಜೊತೆ ಹೋಗಲ್ಲ: ಬಂಗಾರಪ್ಪ
ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷ ಮಂತ್ರಿಗಿರಿ ಬಿಡಬೇಕಾದ ವಿಷಯ ಗೊತ್ತಿಲ್ಲ: ಜಾರಕಿಹೊಳಿ
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್
ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಅಂತ ಖರ್ಗೆ ಹೇಳಿದ್ದಾರೆ: ಪರಮೇಶ್ವರ್