Video: ಪೊಲೀಸರನ್ನೇ ಕನ್ಫ್ಯೂಸ್ ಮಾಡುತ್ತಿದೆ ಈ ಹಕ್ಕಿ; ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ

Video: ಪೊಲೀಸರನ್ನೇ ಕನ್ಫ್ಯೂಸ್ ಮಾಡುತ್ತಿದೆ ಈ ಹಕ್ಕಿ; ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ

ಅಕ್ಷತಾ ವರ್ಕಾಡಿ
|

Updated on:Apr 14, 2024 | 10:55 AM

ಯುನೈಟೆಡ್ ಕಿಂಗ್ ಡಮ್ ನ ಥೇಮ್ಸ್ ವ್ಯಾಲಿ ಪೊಲೀಸ್ ಠಾಣೆ ಪಕ್ಕದ ಮುಖ್ಯ ರಸ್ತೆಯಲ್ಲಿ ಸೈರನ್ ಸೌಂಡ್ ರೀತಿಯಲ್ಲಿ ಕೂಗುವ ಹಕ್ಕಿಯೊಂದು ಕಾಣಿಸಿಕೊಂಡಿದೆ. ಈ ಹಕ್ಕಿಯ ಕೂಗು ಪ್ರಯಾಣಿಕರು ಹಾಗೂ ಅಧಿಕಾರಿಗಳನ್ನು ಗೊಂದಲಕ್ಕೀಡು ಮಾಡಿದೆ.

ಪೊಲೀಸ್ ವಾಹನದ ಸೈರನ್ ಸೌಂಡ್ ಕೇಳುತ್ತಿದ್ದಂತೆ ಸಾಮಾನ್ಯ ಜನರು ತಕ್ಷಣ ಎಚ್ಚೆತ್ತುಕೊಂಡು ಜಾಗ ಖಾಲಿ ಮಾಡುತ್ತಾರೆ. ಆದರೆ ಇಲ್ಲೊಂದು ಸೈರನ್​​​ ಸೌಂಡ್​​​​ ಪೊಲೀಸರನ್ನೇ ಗೊಂದಲಕ್ಕೀಡು ಮಾಡಿದೆ. ಹೌದು ಆದರೆ ಇದು ಪೊಲೀಸ್ ವಾಹನದ ಸೈರನ್ ಸೌಂಡ್ ಅಲ್ಲ, ಬದಲಾಗಿ ಹಕ್ಕಿಯೊಂದರ ಕೂಗು. ಯುನೈಟೆಡ್ ಕಿಂಗ್ ಡಮ್ ನ ಥೇಮ್ಸ್ ವ್ಯಾಲಿ ಪೊಲೀಸ್ ಠಾಣೆ ಪಕ್ಕದ ಮುಖ್ಯ ರಸ್ತೆಯಲ್ಲಿ ಸೈರನ್ ಸೌಂಡ್ ರೀತಿಯಲ್ಲಿ ಕೂಗುವ ಹಕ್ಕಿಯೊಂದು ಕಾಣಿಸಿಕೊಂಡಿದೆ. ಈ ಹಕ್ಕಿಯ ಕೂಗು ಪ್ರಯಾಣಿಕರು ಹಾಗೂ ಅಧಿಕಾರಿಗಳನ್ನು ಗೊಂದಲಕ್ಕೀಡು ಮಾಡಿದೆ. ಬಿಸೇಸ್ಟರ್ ಪೊಲೀಸ್ ಸ್ಟೇಷನ್ ಪೊಲೀಸರು ಸೋಶಿಯಲ್ ಮೀಡಿಯಾದಲ್ಲಿ ಹಕ್ಕಿ ಸೈರನ್ ನಿಂದ ಕೆಲಕಾಲ ಗೊಂದಲಕ್ಕೀಡಾದ ಬಗ್ಗೆ ಹಂಚಿಕೊಂಡಿದ್ದಾರೆ. ಸದ್ಯ ಪೊಲೀಸ್ ಸೈರನ್ ರೀತಿಯಲ್ಲಿ ಕೂಗುವ ಹಕ್ಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 14, 2024 10:52 AM