Viral: ಶೂ ಕದ್ದ ಸ್ವಿಗ್ಗಿ ಡೆಲಿವರಿ ಬಾಯ್ ಪರ ನಿಂತ ನಟ ಸೋನು ಸೂದ್, ಸಿಡಿದೆದ್ದ ನೆಟ್ಟಿಗರು
Sonu Sood: ಇತ್ತೀಚೆಗೆ ಪಾರ್ಸೆಲ್ ನೀಡಲು ಬಂದು ಮನೆಯ ಹೊರಗಿದ್ದ ಒಂದು ಜತೆ ಶೂವನ್ನು ಕದ್ದ ಸ್ವಿಗ್ಗಿ ಡೆಲಿವರಿ ಬಾಯ್ ವಿಡಿಯೋ ಇದೀಗ ಭಾರೀ ವೈರಲ್ ಆಗಿತ್ತು. ಇದೀಗ ಈ ವಿಡಿಯೋ ನಟ ಸೋನು ಸೂದ್ ಪ್ರತಿಕ್ರಿಯಿಸಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಡೆಲಿವರಿ ಬಾಯ್ ಕದ್ದಿರುವುದನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
ಗುರುಗ್ರಾಮ್ದಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ (Swiggy delivery boy) ಪಾರ್ಸೆಲ್ ನೀಡಲು ಬಂದು ಮನೆಯ ಹೊರಗಿದ್ದ ಒಂದು ಜತೆ ಶೂವನ್ನು ಎಗರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು, ಈ ಬಗ್ಗೆ ಅನೇಕರು ಅಕ್ರೋಶ ಕೂಡ ವ್ಯಕ್ತಪಡಿಸಿದರು. ಇದೀಗ ಈ ವಿಚಾರವಾಗಿ ನಟ ಸೋನು ಸೂದ್ (Sonu Sood) ಮಾತನಾಡಿದ್ದಾರೆ. ಕಳ್ಳತನ ಮಾಡಿದ ಡೆಲಿವರಿ ಬಾಯ್ ಪರ ನಿಂತಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್ ಇದೀಗ ಭಾರೀ ಚರ್ಚೆಯಾಗುತ್ತಿದೆ. ದಯೆಯಿಂದಿರಿ ಮತ್ತು ಆತನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದಾರೆ.
ಡೆಲಿವರಿ ಬಾಯ್ ಮಾಡಿರುವುದನ್ನು ಸಮರ್ಥಿಸಿಕೊಂಡ ಅವರು ಅವನನ್ನು ಶಿಕ್ಷಿಸುವ ಬದಲು ಅವನಿಗೆ ಹೊಸ ಜೋಡಿ ಶೂಗಳನ್ನು ನೀಡಿ ಎಂದು ಹೇಳಿದ್ದಾರೆ. ಇದೀಗ ಈ ಹೇಳಿಕೆ ಅಕ್ರೋಶಕ್ಕೆ ಕಾರಣವಾಗಿದೆ. ಸೋನು ಸೂದ್ ಅವರ ಈ ಹೇಳಿಕೆಯನ್ನು ಅನೇಕರು ವಿರೋಧಿಸಿದ್ದಾರೆ. ಕಳ್ಳತನಕ್ಕೆ ನಟ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದೊಂದು ವಿಚಿತ್ರ ಹೇಳಿಕೆ ಎಂದು ಅನೇಕರು ಸೋನು ಸೂದ್ ಅವರ ಪೋಸ್ಟ್ಗೆ ಕಮೆಂಟ್ ಮಾಡಿದ್ದಾರೆ.
If Swiggy’s delivery boy stole a pair of shoes while delivering food at someone’s house. Don’t take any action against him. In fact buy him a new pair of shoes. He might be really in need. Be kind ❤️🙏
— sonu sood (@SonuSood) April 12, 2024
ರೋಹಿತ್ ಅರೋರಾ ಎಂಬ ವ್ಯಕ್ತಿ ಈ ಹಿಂದೆ ತಮ್ಮ ಎಕ್ಸ್ ಖಾತೆಯಲ್ಲಿ ಡಿಲಿವರಿ ಬಾಯ್ ಶೂ ಕದ್ದಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಇದಕ್ಕೆ ಸೋನು ಸೂದ್ ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅವನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ . ಅದರ ಬದಲು ಆತನಿಗೆ ಒಂದು ಜೋಡಿ ಶೂವನ್ನು ನೀಡಿ. ಇದನ್ನು ನೀವು ಅಗತ್ಯವಾಗಿ ಮಾಡಬೇಕು. ಆತ ಬಡವನಾಗಿದ್ದ ಕಾರಣ ಆ ಶೂವನ್ನು ಕದ್ದಿರಬಹುದು, ಈ ಕಾರಣಕ್ಕೆ ಆತನಿಗೆ ಈ ಬಡತನ ಕಳ್ಳತನ ಮಾಡಲು ಪರವಾನಿಗೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಾರ್ಸೆಲ್ ನೀಡಲು ಬಂದು ಮನೆಯ ಹೊರಗಿದ್ದ ಬೆಲೆ ಬಾಳುವ ಶೂ ಕದ್ದ ಸ್ವಿಗ್ಗಿ ಡೆಲಿವರಿ ಬಾಯ್
ಪೋಸ್ಟ್ 8 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಎಕ್ಸ್ನಲ್ಲಿ ಸೋನು ಸೂದ್ ಅವರ ಈ ಹೇಳಿಕೆ ಸುಮಾರು ಜನ ಕಮೆಂಟ್ ಕೂಡ ಮಾಡಿದ್ದಾರೆ. ಒಬ್ಬ ಎಕ್ಸ್ ಬಳಕೆದಾರ ನನಗೆ ಏನಾದರೂ ಅಗತ್ಯವಿದ್ದರೆ, ಯಾರ ಮನೆಯಿಂದಲೂ ಏನನ್ನಾದರೂ ಕದಿಯಲು ನನಗೆ ಅನುಮತಿ ಇದೆಯೇ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಅಪರಾಧವನ್ನು ಬೆಂಬಲಿಸುವುದು ಸರಿಯೇ ಎಂದು ಕಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:30 pm, Sat, 13 April 24