AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪಾರ್ಸೆಲ್​​ ನೀಡಲು ಬಂದು ಮನೆಯ ಹೊರಗಿದ್ದ ಬೆಲೆ ಬಾಳುವ ಶೂ ಕದ್ದ ಸ್ವಿಗ್ಗಿ ಡೆಲಿವರಿ ಬಾಯ್​​

ಗುರುಗ್ರಾಮ್​​​ದಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್​​ ಪಾರ್ಸೆಲ್​​ ನೀಡಲು ಬಂದು ಮನೆಯ ಹೊರಗಿದ್ದ ಒಂದು ಜತೆ ಶೂವನ್ನು ಎಗರಿಸಿದ್ದಾನೆ. ಇದೀಗ ಈ ಕೃತ್ಯದ ಬಗ್ಗೆ ಒಂದು ವಿಡಿಯೋ ವೈರಲ್​​ ಆಗಿದೆ. ಏಪ್ರಿಲ್​​​ 9ರಂದು ಈ ವಿಡಿಯೋವನ್ನು ಎಕ್ಸ್​​ನಲ್ಲಿ ರೋಹಿತ್​​​ ಅರೋರಾ ಎಂಬುವವರು ಹಂಚಿಕೊಂಡಿದ್ದಾರೆ. ನನ್ನ ಸ್ನೇಹಿತನ ಮನೆಯ ಹೊರಗೆ ಇದ್ದ ಕಪ್ಪು ಬಣ್ಣದ ನೈಕ್​​​ ಶೂವನ್ನು ಸ್ವಿಗ್ಗಿ ಇನ್​​ಸ್ಟಾಮಾರ್ಟ್​​ ಡೆಲಿವರಿ ಎಕ್ಸಿಕ್ಯೂಟಿವ್​​​ ಕದ್ದಿದ್ದಾನೆ ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಅಕ್ಷಯ್​ ಪಲ್ಲಮಜಲು​​
|

Updated on: Apr 12, 2024 | 11:21 AM

Share

ಆಹಾರ, ದಿನಸಿ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಡೆಲಿವರಿ ಬಾಯ್​​​ಗಳ ಬಗ್ಗೆ ಇರಬೇಕು ಈ ಎಚ್ಚರಿಕೆ. ಎಲ್ಲರೂ ಹೀಗೆ ಮಾಡುತ್ತಾರೆ ಎಂದಲ್ಲ, ಆದರೆ ಕೆಲವೊಂದು ಬಾರಿ ಆಸೆಯೂ ಅತೀರೇಕವಾದಾಗ ಈ ರೀತಿಯಲ್ಲಿ ವರ್ತಿಸುತ್ತಾರೆ. ಗುರುಗ್ರಾಮ್​​​ದಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್​​ ಪಾರ್ಸೆಲ್​​ ನೀಡಲು ಬಂದು ಮನೆಯ ಹೊರಗಿದ್ದ ಒಂದು ಜತೆ ಶೂವನ್ನು ಎಗರಿಸಿದ್ದಾನೆ. ಇದೀಗ ಈ ಕೃತ್ಯದ ಬಗ್ಗೆ ಒಂದು ವಿಡಿಯೋ ವೈರಲ್​​ ಆಗಿದೆ. ಏಪ್ರಿಲ್​​​ 9ರಂದು ಈ ವಿಡಿಯೋವನ್ನು ಎಕ್ಸ್​​ನಲ್ಲಿ ರೋಹಿತ್​​​ ಅರೋರಾ ಎಂಬುವವರು ಹಂಚಿಕೊಂಡಿದ್ದಾರೆ. ನನ್ನ ಸ್ನೇಹಿತನ ಮನೆಯ ಹೊರಗೆ ಇದ್ದ ಕಪ್ಪು ಬಣ್ಣದ ನೈಕ್​​​ ಶೂವನ್ನು ಸ್ವಿಗ್ಗಿ ಇನ್​​ಸ್ಟಾಮಾರ್ಟ್​​ ಡೆಲಿವರಿ ಎಕ್ಸಿಕ್ಯೂಟಿವ್​​​ ಕದ್ದಿದ್ದಾನೆ ಎಂದು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಸ್ವಿಗ್ಗಿ ಡೆಲಿವರಿ ಬಾಯ್​​​​ ಶೂ ಕದ್ದಿತ್ತಿರುವುದು ಮನೆ ಮುಂದೆ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಒಬ್ಬ ಡೆಲಿವರಿ ಬಾಯ್ ಮನೆಯ ಮುಂದೆ ಬಂದು ಬೆಲ್​​ ಮಾಡುತ್ತಾನೆ. ಯಾರೂ ಕೂಡ ಇದಕ್ಕೆ ಪ್ರತಿಕ್ರಿಯಿಸುವುದಿಲ್ಲ. ಸ್ವಲ್ಪ ಸಮಯದ ನಂತರ ಒಬ್ಬ ಮಹಿಳೆ ಬಂದು ಬಾಗಿಲು ತೆರೆದಾಗ, ಪಾರ್ಸೆಲ್​​​ ಆ ಮಹಿಳೆಯ ಕೈಗೆ ನೀಡುತ್ತಾನೆ. ಮಹಿಳೆ ಬಾಗಿಲು ಮುಚ್ಚುವ ವರೆಗೆ ಅಲ್ಲಿ ನಿಂತು ನಂತರ ಕಪ್ಪು ಬಣ್ಣದ ನೈಕ್​​​ ಶೂವನ್ನು ಅಲ್ಲಿಂದ ಎಗರಿಸಿದ್ದಾನೆ.

ಇದನ್ನೂ ಓದಿ: ಆನ್​ಲೈನ್​ನಲ್ಲಿ ಕೇವಲ 50 ಸಾವಿರ ರೂ.ಗೆ ದೇಶ ಖರೀದಿಸಿದ ವ್ಯಕ್ತಿ, ಇರೋದು ಒಬ್ಬರೇ, ಪಾಸ್​ಪೋರ್ಟ್​ ಇಲ್ಲದೆ ಪ್ರವೇಶವಿಲ್ಲ

ಹಂಚಿಕೊಂಡಿರುವ ವಿಡಿಯೋವನ್ನು ಇಲ್ಲಿಯವರೆಗೆ 3.8 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ. ಈ ವಿಡಿಯೋ ನೋಡಿ ಅನೇಕರು ಕಳವಳ ವ್ಯಕ್ತಪಡಿಸಿದ್ದು, ಇನ್ನು ಕೆಲವರು ಹ್ಯಾಸವಾಗಿ ಕಮೆಂಟ್​​ ಮಾಡಿದ್ದಾರೆ. ಇನ್ನು ಈ ಘಟನೆಯ ಬಗ್ಗೆ ಸ್ವಿಗ್ಗಿ ವರದಿ ಮಾಡಲಾಗಿದೆ. ಆದರೆ ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ರೋಹಿತ್​​​ ಅರೋರಾ ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ