ಆನ್​ಲೈನ್​ನಲ್ಲಿ ಕೇವಲ 50 ಸಾವಿರ ರೂ.ಗೆ ದೇಶ ಖರೀದಿಸಿದ ವ್ಯಕ್ತಿ, ಇರೋದು ಒಬ್ಬರೇ, ಪಾಸ್​ಪೋರ್ಟ್​ ಇಲ್ಲದೆ ಪ್ರವೇಶವಿಲ್ಲ

ಜಗತ್ತಿನಲ್ಲಿ ನೀವು ಭೇಟಿ ನೀಡಬಹುದಾದ ಹಲವು ದೇಶಗಳಿವೆ, ಕೆಲವು ದೇಶಗಳಿಗೆ ವೀಸಾ ಅಗತ್ಯವಿಲ್ಲ ಇನ್ನೂ ಕೆಲವು ದೇಶಗಳಿಗೆ ವೀಸಾ ಕೂಡ ಬೇಕು. ಆದರೆ ಪಾಸ್​ಪೋರ್ಟ್​ ಇಲ್ಲದೆ ನೀವು ಯಾವ ದೇಶಕ್ಕೂ ಭೇಟಿ ನೀಡಲಾಗದು. ಹಾಗೆಯೇ ಕಲಾವಿದ ಝಾಕ್ ಎಂಬುವವರು ಆನ್​ಲೈನ್​ನಲ್ಲಿ ಕೇವಲ 50 ಸಾವಿರ ರೂ.ಗೆ ಸಣ್ಣ ದೇಶವೊಂದನ್ನು ಖರೀದಿಸಿದ್ದಾರೆ.

ಆನ್​ಲೈನ್​ನಲ್ಲಿ ಕೇವಲ 50 ಸಾವಿರ ರೂ.ಗೆ ದೇಶ ಖರೀದಿಸಿದ ವ್ಯಕ್ತಿ, ಇರೋದು ಒಬ್ಬರೇ, ಪಾಸ್​ಪೋರ್ಟ್​ ಇಲ್ಲದೆ ಪ್ರವೇಶವಿಲ್ಲ
ಝಾಕ್
Follow us
ನಯನಾ ರಾಜೀವ್
|

Updated on:Apr 12, 2024 | 9:54 AM

ಜಗತ್ತಿನಲ್ಲಿ ನೀವು ಭೇಟಿ ನೀಡಬಹುದಾದ ಹಲವು ದೇಶಗಳಿವೆ, ಕೆಲವು ದೇಶಗಳಿಗೆ ವೀಸಾ ಅಗತ್ಯವಿಲ್ಲ ಇನ್ನೂ ಕೆಲವು ದೇಶಗಳಿಗೆ ವೀಸಾ ಕೂಡ ಬೇಕು. ಆದರೆ ಪಾಸ್​ಪೋರ್ಟ್​ ಇಲ್ಲದೆ ನೀವು ಯಾವ ದೇಶಕ್ಕೂ ಭೇಟಿ ನೀಡಲಾಗದು. ಹಾಗೆಯೇ ಕಲಾವಿದ ಝಾಕ್ ಎಂಬುವವರು ಆನ್​ಲೈನ್​ನಲ್ಲಿ ಕೇವಲ 50 ಸಾವಿರ ರೂ.ಗೆ ಸಣ್ಣ ದೇಶವೊಂದನ್ನು ಖರೀದಿಸಿದ್ದಾರೆ.

ಆ ದೇಶದಲ್ಲಿರುವವರು ಒಬ್ಬರೇ, ಆದರೆ ಯಾರಾದರೂ ಭೇಟಿ ನೀಡಬೇಕಾದರೆ ಪಾಸ್​ಪೋರ್ಟ್​ ಅಗತ್ಯವಿದೆಯಂತೆ. ಅಮೆರಿಕದ ಉತಾಹ್ ಮರುಭೂಮಿ ಪ್ರದೇಶದಲ್ಲಿ 2005ರಲ್ಲಿ ಕಲಾವಿದ ಜಾಕ್ ಲ್ಯಾಂಡ್ಸ್​ಬರ್ಗ್​ ಎಂಬುವವರು 2 ಎಕರೆ ಭೂಮಿ ಖರೀದಿಸಿದ್ದರು. ಕೇವಲ 610 ಡಾಲರ್ ಅಂದರೆ 50 ಸಾವಿರ ರೂಪಾಯಿಗೆ ಆನ್​ಲೈನ್​ ಸೈಟ್​ನಿಂದ ಈ ಜಮೀನನ್ನು ಖರೀದಿಸಿದ್ದರು.

ಅವರು ಮೊದಲ ಬಾರಿಗೆ ಭೂಮಿಯನ್ನು ನೋಡಲು ಹೋದಾಗ ಅವರಿಗೆ ಗುರುತು ಸಿಗುವಂತೆ ಭೂಮಿಯ ಮೇಲೆ ಹಳದಿ ಹಾಗೂ ಕೆಂಪು ಬಣ್ಣದ ಧ್ವಜ ಇರಿಸಿದ್ದರು. ಅವರಿಗೆ ಆಮೇಲೆ ತನ್ನದೇ ಆದ ದೇಶ ರಚಿಸಬೇಕೆನಿಸಿತು.

ಮತ್ತಷ್ಟು ಓದಿ: ರಜೆ ಕಳೆಯಲು ಹಿಂದೆಂದೂ ನೋಡದ ಊರಿಗೆ ಹೋಗಿದ್ದ ಕುಟುಂಬ ಬಂಗಲೆಯ ಗೋಡೆಯ ಮೇಲಿದ್ದ ಚಿತ್ರ ಕಂಡು ವಾಪಸಾಗಿದ್ದೇಕೆ?

ಝಾಕಿಸ್ತಾನ್ ಎಂದು ನಾಮಕರಣ ಮಾಡಿದರು, ದೇಶವನ್ನು ಪ್ರವೇಶಿಸಲು ಪಾಸ್​ಪೋರ್ಟ್​ ಅಗತ್ಯವಿದೆ ಎನ್ನುವ ನಿಯಮವನ್ನೂ ತಂದರು.

ಝಾಕ್ ಅವರು ಭೂಮಿಯನ್ನು ಖರೀದಿಸಿದಾಗ ದೇಶವು ರಾಜಕೀಯವಾಗಿ ಕೆಟ್ಟ ದಿನಗಳನ್ನು ಎದುರಿಸುತ್ತಿದೆ ಎಂದು ಹೇಳಿದ್ದರು. ರಾಜಕಾರಣಿಗಳಿಗಿಂತ ಉತ್ತಮವಾಗಿ ದೇಶವನ್ನು ನಡೆಸಬಲ್ಲೆ ಎಂದು ಅವರು ಭಾವಿಸಿದರು. ಝಾಕ್ ಈಗ ಪ್ರತಿ ವರ್ಷ ಕೆಲವು ದಿನಗಳವರೆಗೆ ಪಾಕಿಸ್ತಾನಕ್ಕೆ ಹೋಗುತ್ತಾರೆ. ತಮ್ಮ ಜಮೀನಿನಲ್ಲಿ ಪೆಟ್ರೋಲ್ ಗೇಟ್ ನಿರ್ಮಿಸಿ ರೋಬೋಟ್ ಕೂಡ ನಿರ್ಮಿಸಿದ್ದಾರೆ. ಅವರು ತಮ್ಮ ವೆಬ್‌ಸೈಟ್‌ನಿಂದ ನಿಜವಾದ ಪಾಸ್‌ಪೋರ್ಟ್‌ಗಳನ್ನು 40 ಡಾಲರ್​ಗೆ ಮಾರಾಟ ಮಾಡುತ್ತಾರೆ.

ಜಮೀನಿನಲ್ಲಿ ಮನೆ ಕಟ್ಟಲು ಮನಸ್ಸಿಲ್ಲ ಇಲ್ಲಿ ನೀರಿನ ಮೂಲವಿಲ್ಲದ ಕಾರಣ ಮನೆ ಕಟ್ಟಲು ಮನಸ್ಸಿಲ್ಲ, ಹತ್ತಿರದ ಪಟ್ಟಣ ಮೊಂಟೆಲ್ಲಾ ಸುಮಾರು 100 ಕಿ.ಮೀ ದುರದಲ್ಲಿದೆ. ಝಾಕ್​​ನ ಕೆಲವ ಸ್ನೇಹಿತರು ಝಾಕಿಸ್ತಾನ್ ನಿವಾಸಿಗಳು. ಆಗಾಗ ಅವರು ಅಲ್ಲಿ ಸೇರಿ ಮೋಜು, ಮಸ್ತಿ ಮಾಡುತ್ತಾರೆ.

ಝಾಕ್ ತನ್ನ ದೇಶವನ್ನು ಸುಧಾರಿಸಲು 8 ಲಕ್ಷ ರೂ ಖರ್ಚು ಮಾಡಿದ್ದಾರೆ, ಹವಾಮಾನವು ತುಂಬಾ ಕೆಟ್ಟದಾಗಿದೆ, ಹಗಲಿನಲ್ಲಿ ತೀವ್ರವಾದ ಶಾಖ ಮತ್ತು ರಾತ್ರಿಯಲ್ಲಿ ತೀವ್ರ ಚಳಿ ಇರುತ್ತದೆ. ಅವರು ಪ್ರತಿ ವರ್ಷ ತೆರಿಗೆ ಪಾವತಿಸುತ್ತಾರೆ, ಆದ್ದರಿಂದ ಅವರು ಮಾಡುತ್ತಿರುವುದು ಕಾನೂನುಬಾಹಿರವಲ್ಲ ಎಂದು ಹೇಳಬಹುದು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:53 am, Fri, 12 April 24

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು