ರಜೆ ಕಳೆಯಲು ಹಿಂದೆಂದೂ ನೋಡದ ಊರಿಗೆ ಹೋಗಿದ್ದ ಕುಟುಂಬ ಬಂಗಲೆಯ ಗೋಡೆಯ ಮೇಲಿದ್ದ ಚಿತ್ರ ಕಂಡು ವಾಪಸಾಗಿದ್ದೇಕೆ?

ದಿನನಿತ್ಯದ ಜಂಜಾಟದಿಂದ ಸ್ವಲ್ಪ ದೂರ ಇರಲು ಪ್ರತಿಯೊಬ್ಬರೂ ಪ್ರವಾಸಕ್ಕೆ ತೆರಳುವುದು ಸಾಮಾನ್ಯ. ಹಾಗೆಯೇ ಉತ್ತಮವಾಗಿ ರಜೆ ಕಳೆಯಬೇಕೆಂದು ಜೆನ್ನಿ ಸ್ಟೀವನ್ಸ್​ ಎಂಬ ಮಹಿಳೆ ತನ್ನಿಬ್ಬರು ಮಕ್ಕಳು ಹಾಗೂ ಪತಿಯ ಜತೆಗೆ ಹಿಂದೆಂದೂ ಹೋಗದ ಊರಿಗೆ ಹೋಗಿದ್ದರು.

ಬಾಲಕ
Follow us
ನಯನಾ ರಾಜೀವ್
|

Updated on: Apr 10, 2024 | 12:27 PM

ದಿನನಿತ್ಯದ ಜಂಜಾಟದಿಂದ ಸ್ವಲ್ಪ ದೂರ ಇರಲು ಪ್ರತಿಯೊಬ್ಬರೂ ಪ್ರವಾಸಕ್ಕೆ ತೆರಳುವುದು ಸಾಮಾನ್ಯ. ಹಾಗೆಯೇ ಉತ್ತಮವಾಗಿ ರಜೆ ಕಳೆಯಬೇಕೆಂದು ಜೆನ್ನಿ ಸ್ಟೀವನ್ಸ್​ ಎಂಬ ಮಹಿಳೆ ತನ್ನಿಬ್ಬರು ಮಕ್ಕಳು ಹಾಗೂ ಪತಿಯ ಜತೆಗೆ ಹಿಂದೆಂದೂ ಹೋಗದ ಊರಿಗೆ ಹೋಗಿದ್ದರು.

ಅವರು ಎರಡು ವರ್ಷಗಳ ಹಿಂದಷ್ಟೇ ಯುಕೆಯಿಂದ ಸ್ವೀಡನ್​ಗೆ ಸ್ಥಳಾಂತರಗೊಂಡಿದ್ದರು. ಅಲ್ಲಿಯ ಸ್ಥಳಗಳನ್ನು ನೋಡಬೇಕೆನ್ನುವ ಬಯಕೆಯಿಂದ ಹೊರಟಿದ್ದರು. ಸ್ವಲ್ಪ ದಿನಗಳವರೆಗೆ ನಿರ್ಜನವಾಗಿದ್ದ ಸ್ಥಳದಲ್ಲಿ ಉಳಿದುಕೊಂಡಿದ್ದರು, ಇಲ್ಲಿಯೇ ಸ್ವಲ್ಪ ದಿನ ಆರಾಮವಾಗಿರೋಣ ಎಂದುಕೊಂಡಿದ್ದರು. ಆದರೆ ಗೋಡೆಯ ಮೇಲಿನ ಆ ಒಂದು ಚಿತ್ರವನ್ನು ಕಂಡು ಕೂಡಲೇ ಗಂಟು-ಮೂಟೆ ಕಟ್ಟಿಕೊಂಡು ವಾಪಸಾಗಿದ್ದಾರೆ.

ಜೆನ್ನಿಯ ಮಗಳು ಹಾಗೆಯೇ ಬಂಗಲೆಯೆಲ್ಲಾ ಒಂದು ಸುತ್ತು ಹಾಕಿಕೊಂಡು ಬರಬೇಕೆಂದು ಹೊರಟಿದ್ದಳು, ಆ ಬಂಗಲೆಯ ಗೋಡೆಯ ಮೇಲೆ ಆಕೆಯ ಸಹೋದರ ಅಂದರೆ ಜೆನ್ನಿಯ ಕಿರಿಯ ಮಗನ ಚಿತ್ರವು ಹೆಣ್ಣಿನ ರೂಪದಲ್ಲಿದ್ದಿದ್ದನ್ನು ಕಂಡು ಬೆಚ್ಚಿಬಿದ್ದಿದ್ದಾಳೆ.

ಮತ್ತಷ್ಟು ಓದಿ: 20 ವರ್ಷಗಳ ಹಿಂದೆ ಮಾವೋವಾದಿಗಳ ಬೆದರಿಕೆಯಿಂದ ಮುಚ್ಚಿದ್ದ ರಾಮಮಂದಿರ, ಇದೀಗ ಮತ್ತೆ ರೀಓಪನ್

ಕೂಡಲೇ ಆಕೆ ತಾಯಿಗೆ ವಿಷಯ ತಿಳಿಸಿದಾಗ ಜೆನ್ನಿ ಬಂದು ನೋಡಿದ್ದಾರೆ, ಹೌದು ಅಲ್ಲಿದ್ದಿದ್ದು ತನ್ನ ಮಗನ ಫೋಟೋ ಆದರೆ ಅಲ್ಲಿದ್ದಿದ್ದು ಹುಡುಗಿ ಎಂಬುದಷ್ಟೇ ವ್ಯತ್ಯಾಸ.

ಹಿಂದೆಂದೂ ಆ ಊರನ್ನು ನೋಡಿಯೇ ಇರದ ಕುಟುಂಬವು ಈ ಚಿತ್ರ ಕಂಡು ಹೌಹಾರಿದೆ. ತಕ್ಷಣವೇ ವಸ್ತುಗಳನ್ನು ಪ್ಯಾಕ್​ ಮಾಡಿ ಅಲ್ಲಿಂದ ಹೊರಟರು. ಈ ಘಟನೆ ಕುರಿತು ಜೆನ್ನಿ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕೆಲವು ಜನರು ಕೂಡಲೇ ಅಲ್ಲಿಂದ ಹೊರಡುವಂತೆ ಸಲಹೆ ನೀಡಿದ್ದಾರೆ, ಇನ್ನೂ ಕೆಲವರು ಪುನರ್ಜನ್ಮದ ಕಥೆಯಿದ್ದಂತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ

ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ

ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ

Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ

ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ

ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್