Viral News: 4 ಮಕ್ಕಳನ್ನು ಹೊಂದಿರುವ 3 ಅಡಿ ಎತ್ತರದ ಪತಿ ಮತ್ತು5 ಅಡಿ ಎತ್ತರದ ಪತ್ನಿ
3 ಅಡಿ ಎತ್ತರದ ಪತಿ ಲ್ಯಾರಿ ಮೆಕ್‌ಡೊನೆಲ್(42) ಮತ್ತು 5 ಅಡಿ ಎತ್ತರದ ಆತನ ಪತ್ನಿ(40) ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, 4 ಮಕ್ಕಳನ್ನೂ ಹೊಂದಿದ್ದಾರೆ. ಇವರ ಎತ್ತರದ ಅಂತರ ಕಂಡು ಸಾಕಷ್ಟು ನೆಟ್ಟಿಗರು 'ಪ್ರೀತಿ ಕುರುಡು' ಎಂದು ಕಾಮೆಂಟ್ ಮಾಡಿದ್ದಾರೆ.
ಎತ್ತರದ ಅಂತರದಿಂದಲೇ ಇತ್ತೀಚೆಗಷ್ಟೇ ಜೋಡಿಯೊಂದು ವಿಶ್ವ ದಾಖಲೆಯನ್ನು ಪಡೆದುಕೊಂಡಿದೆ. ಅಮೆರಿಕಾದಲ್ಲಿ ನೆಲೆಸಿರುವ ಲ್ಯಾರಿ ಮೆಕ್‌ಡೊನೆಲ್ ಮತ್ತು ಆತನ ಪತ್ನಿ ಜೆಸ್ಸಿಕಾ ಬರ್ನ್ಸ್ ಮೆಕ್‌ಡೊನೆಲ್ ತಮ್ಮ ಎತ್ತರದ ಅಂತರದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. 3 ಅಡಿ ಎತ್ತರದ ಪತಿ ಲ್ಯಾರಿ ಮೆಕ್‌ಡೊನೆಲ್(42) ಮತ್ತು 5 ಅಡಿ ಎತ್ತರದ ಆತನ ಪತ್ನಿ(40) ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, 4 ಮಕ್ಕಳನ್ನೂ ಹೊಂದಿದ್ದಾರೆ. ಇವರ ಎತ್ತರದ ಅಂತರ ಕಂಡು ಸಾಕಷ್ಟು ನೆಟ್ಟಿಗರು ಪ್ರೀತಿ ಕುರುಡು ಎಂದು ಕಾಮೆಂಟ್ ಮಾಡಿದ್ದಾರೆ.
ಲ್ಯಾರಿ ಮತ್ತು ಜೆಸ್ಸಿಕಾ ಬಾಲ್ಯದಿಂದಲೂ ಒಳ್ಳೆಯ ಸ್ನೇಹಿತರಾಗಿದ್ದರು. ಆದರೆ ಜೆಸ್ಸಿಕಾಗೆ ಬೇರೆ ಪ್ರೀತಿಯಲ್ಲಿ ಇದ್ದಿದ್ದರಿಂದ ಇವರಿಬ್ಬರು ದೂರ ಉಳಿದಿದ್ದರು. ಆದರೆ ಜೆಸ್ಸಿಕಾಗೆ ಬ್ರೇಕಪ್ ಆದ ಬಳಿಕ ಇವರಿಬ್ಬರ ಸ್ನೇಹ ಮತ್ತೆ ಹಿಂದಿನಂತೆಯೇ ಬೆಳೆದು ಸ್ನೇಹ ಪ್ರೀತಿಯಾಗಿ ಮುಂದುವರಿದಿದೆ. ಬಳಿಕ ಕೆಲ ವರ್ಷಗಳ ಡೇಟಿಂಗ್ ಬಳಿಕ ಇಬ್ಬರು ಮದುವೆಯಾಗಿದ್ದಾರೆ. ಈಗ ಈ ಜೋಡಿಗೆ 16,15,13 ಮತ್ತು 1 ವರ್ಷದ ನಾಲ್ಕು ಮಕ್ಕಳಿದ್ದಾರೆ.
View this post on Instagram
ಇದನ್ನೂ ಓದಿ: ಮಗು ಹೀಗೆ ಹುಟ್ಟಲು ಗರ್ಭಿಣಿಯಾಗಿದ್ದಾಗ ನಾನು ಬೆಕ್ಕಿನ ಮಾಂಸ ತಿಂದಿದ್ದೆ ಕಾರಣ ಎಂದ ತಾಯಿ
ಇತ್ತೀಚಿಗಷ್ಟೇ ಸಂದರ್ಶನವೊಂದರಲ್ಲಿ ಈ ಜೋಡಿ ಭಾಗಿಯಾಗಿದ್ದು, ಈ ವಿಡಿಯೋವನ್ನು ಗಿನ್ನಿಸ್ ವಿಶ್ವ ದಾಖಲೆಯ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ