Viral: ಮಗು ಹೀಗೆ ಹುಟ್ಟಲು ಗರ್ಭಿಣಿಯಾಗಿದ್ದಾಗ ನಾನು ಬೆಕ್ಕಿನ ಮಾಂಸ ತಿಂದಿದ್ದೆ ಕಾರಣ ಎಂದ ತಾಯಿ
ಮನುಷ್ಯರಿಗೆ ದೇಹದ ಕೆಲವು ಭಾಗಗಳಲ್ಲಿ ಕೂದಲು ಬೆಳೆಯುವುದು ಸಹಜ. ಆದ್ರೆ ಇಲ್ಲೊಂದು ಮಗುವಿಗೆ ಮೈ ಹಾಗೂ ಮುಖದ ತುಂಬಾ ದಟ್ಟವಾದ ಕೂದಲು ಬೆಳೆದಿದ್ದು, ಗರ್ಭಿಣಿಯಾಗಿದ್ದಾಗ ನಾನು ಬೆಕ್ಕಿನ ಮಾಂಸವನ್ನು ತಿಂದಿದ್ದೇ ಇದಕ್ಕೆ ಕಾರಣ ಎಂದು ಆ ಮಗುವಿನ ತಾಯಿ ಹೇಳಿಕೆ ನೀಡಿದ್ದಾರೆ.
ಮನುಷ್ಯರ ದೇಹದ ಕೆಲವು ಭಾಗಗಳಲ್ಲಿ ಕೂದಲು ಬೆಳೆಯುವುದು ಸಾಮಾನ್ಯ. ಆದ್ರೆ ಇಲ್ಲೊಂದು ಮಗುವಿಗೆ ದೇಹ ಹಾಗೂ ಮುಖದ ತುಂಬಾ ದಟ್ಟವಾಗಿ ಕೂದಲು ಬೆಳೆದಿದೆ. ಗರ್ಭಾವಸ್ಥೆಯಲ್ಲಿ ನಾನು ಕಾಡು ಬೆಕ್ಕಿನ ಮಾಂಸವನ್ನು ತಿಂದಿದ್ದೇ, ನನ್ನ ಮಗ ಈ ಪರಿಸ್ಥಿತಿಗೆ ಬರಲು ಕಾರಣವೆಂದು ಮಗುವಿನ ತಾಯಿ ಹೇಳಿದ್ದಾರೆ. ಈ ಘಟನೆ ಫಿಲಿಪ್ಪೀನ್ಸ್ ಅಲ್ಲಿ ನಡೆದಿದ್ದು, ಇಲ್ಲಿನ ಜರೆನ್ ಎಂಬ ಎರಡು ವರ್ಷದ ಬಾಲಕ ಮುಖದ ತುಂಬಾ ದಟ್ಟವಾದ ಕೂದಲುಗಳನ್ನು ಹೊಂದಿದ್ದಾನೆ. ಇದಕ್ಕೆ ಕಾರಣ ʼವೆರ್ವುಲ್ಫ್ ಸಿಂಡ್ರೋಮ್ʼ. ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ದೇಹದಾದ್ಯಂತ ಕೂದಲು ಬೆಳೆಯುತ್ತದೆ. ಆದರೆ ನನ್ನ ಮಗನ ಈ ಸ್ಥಿತಿಗೆ ಗರ್ಭಿಣಿಯಾಗಿದ್ದಾಗ ನಾನು ಕಾಡು ಬೆಕ್ಕಿನ ಮಾಂಸವನ್ನು ತಿಂದಿದ್ದೇ ಕಾರಣ ಎಂದು ಜರೆನ್ ನ ತಾಯಿ ಅಲ್ಮಾ ಗಮೊಂಗನ್ ಹೇಳಿದ್ದಾರೆ.
ಗರ್ಭಿಣಿಯಾಗಿದ್ದಾಗ ಅಲ್ಮಾ ಅವರಿಗೆ ಕಾಡು ಬೆಕ್ಕಿನ ಮಾಂಸವನ್ನು ತಿನ್ನುವ ಬಯಕೆ ಉಂಟಾಗುತ್ತದೆ. ಹಾಗಾಗಿ ಆಕೆ ಹಳ್ಳಿಯವರಿಗೆ ಹೇಳಿ ಕಾಡು ಬೆಕ್ಕಿನ ಮಾಂಸವನ್ನು ತರಿಸಿ, ಅದನ್ನು ಪದಾರ್ಥ ಮಾಡಿ ತಿಂದು ತನ್ನ ಗರ್ಭಿಣಿ ಬಯಕೆಯನ್ನು ಈಡೇರಿಸುತ್ತಾಳೆ. ಈ ಕಾಡು ಬೆಕ್ಕಿನ ಮಾಂಸವನ್ನು ತಿಂದ ಕಾರಣ ನನ್ನ ಮಗನಿಗೆ ಶಾಪ ತಟ್ಟಿದೆ, ಅದರಿಂದ ಮಗುವಿನ ಮೈ ತುಂಬಾ ಕೂದಲು ಬೆಳೆದಿದೆ ಎಂದು ಅಲ್ಮಾ ತನ್ನನ್ನು ತಾನು ವಿಷಾಧಿಸಿದ್ದಾರೆ. ಆದರೆ ಈ ಮಗು ವೆರ್ ವುಲ್ಫ್ ಅಥವಾ ಹೈಪರ್ಟೀಕೋಸಿಕ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಈ ಕಾರಣದಿಂದ ಮುಖದಲ್ಲಿ ದಟ್ಟವಾಗಿ ಕೂದಲು ಬೆಳೆಯುತ್ತದೆ. ಇದಕ್ಕೂ ನಿಮಗೂ ಯಾವುದೇ ಸಂಬಂಧವಿಲ್ಲ ಎಂದು ಅಲ್ಮಾ ಅವರನ್ನು ವೈದ್ಯರು ಸಮಧಾನ ಪಡಿಸಿದ್ದಾರೆ.
ಇದನ್ನೂ ಓದಿ: ಮಾರ್ಕ್ಸ್ ಕೊಡದಿದ್ದರೆ ತಾತನಿಗೆ ಹೇಳಿ ನಿಮ್ಮ ಮೇಲೆ ವಾಮಾಚಾರ ಮಾಡ್ತೀನಿ; ಮೌಲ್ಯ ಮಾಪಕರಿಗೆ ವಿದ್ಯಾರ್ಥಿ ಬ್ಲ್ಯಾಕ್ಮೇಲ್
ಈ ಸ್ಥಿತಿಯು ಒಂದು ಬಿಲಿಯನ್ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ. ಇಲ್ಲಿಯವರೆಗೆ ಕೇವಲ 50 ವೂಲ್ಫ್ ಸಿಂಡ್ರೋಮ್ ಪ್ರಕರಣಗಳು ವರದಿಯಾಗಿವೆ ಎಂದು ಡಾ. ರಾವೆಲಿಂಡಾ ಸೊರಿಯಾನೊ ಪೆರೆಜ್ ಹೇಳಿದ್ದಾರೆ. ಈ ಸಿಂಡ್ರೋಮ್ ಗೆ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ಲೇಸರ್ ಹೇರ್ ರಿಮೂವಲ್ ಟ್ರೀಟ್ಮೆಂಟ್ ಮೂಲಕ ಮುಖದ ಮೇಲಿನ ಈ ಕೂದಲನ್ನು ತೆಗೆಯಬಹುದಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ