Save Water: ನಿಮ್ಮ ಸಂಗಾತಿಯೊಂದಿಗೆ ಸ್ನಾನ ಮಾಡಿ ನೀರು ಉಳಿಸಿ; ಸರ್ಕಾರ ಘೋಷಣೆ

"ನಿಮ್ಮ ಸಂಗಾತಿಯೊಂದಿಗೆ ಸ್ನಾನ ಮಾಡಿ ನೀರನ್ನು ಮಿತವಾಗಿ ಬಳಸಿ. ಇಬ್ಬರು ಒಟ್ಟಿಗೆ ಸ್ನಾನ ಮಾಡುವುದರಿಂದ ನೀರು ಉಳಿಸಬಹುದು ಇದಲ್ಲದೇ ರಜಾ ದಿನಗಳಲ್ಲಿ ಸ್ನಾನ ಮಾಡಬೇಡಿ" ಎಂದು ಬೊಗೋಟಾ ನಗರದಲ್ಲಿ ಮೇಯ‌ರ್ ಕಾರ್ಲೋಸ್ ಫರ್ನಾಂಡೊ ಗ್ಯಾಲನ್ ಅವರು ಸಲಹೆ ನೀಡಿದ್ದಾರೆ.

Save Water: ನಿಮ್ಮ ಸಂಗಾತಿಯೊಂದಿಗೆ ಸ್ನಾನ ಮಾಡಿ ನೀರು ಉಳಿಸಿ; ಸರ್ಕಾರ ಘೋಷಣೆ
"Bath with your patner and save water"
Follow us
ಅಕ್ಷತಾ ವರ್ಕಾಡಿ
|

Updated on:Apr 16, 2024 | 4:51 PM

ಅಮೆರಿಕ: ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಭಾರತದಲ್ಲಿ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಜನರು ನೀರಿಲ್ಲದೆ ಪರದಾಡುವಂತಾಗಿದೆ. ಇದೀಗ ನೀರಿನ ಮಿತ ಬಳಕೆಗಾಗಿ ಅಮೆರಿಕದ ಕೊಲಂಬಿಯಾದ ಬೊಗೋಟಾ ನಗರದಲ್ಲಿ ಹೊಸ ಕಾನೂನನ್ನು ಜಾರಿಗೆ ತಂದಿದೆ. ಬೊಗೋಟಾ ಮೇಯ‌ರ್ ಕಾರ್ಲೋಸ್ ಫರ್ನಾಂಡೊ ಗ್ಯಾಲನ್ ಅವರು ಹೊಸ ನೀತಿಯೊಂದನ್ನು ಜಾರಿಗೆ ತಂದಿದ್ದು, ಸದ್ಯ ಈ ನೀತಿ ಎಲ್ಲೆಡೆ ವೈರಲ್​ ಆಗಿದೆ. ಹೌದು “ನಿಮ್ಮ ಸಂಗಾತಿಯೊಂದಿಗೆ ಸ್ನಾನ ಮಾಡಿ ನೀರನ್ನು ಉಳಿಸಿ” ಎಂದು ಬೊಗೋಟಾ ನಗರದಲ್ಲಿ ಮೇಯ‌ರ್ ಕಾರ್ಲೋಸ್ ಫರ್ನಾಂಡೊ ಗ್ಯಾಲನ್ ಅವರು ಸಲಹೆ ನೀಡಿದ್ದಾರೆ. ಇದಲ್ಲದೇ ರಜಾ ದಿನಗಳಲ್ಲಿ ಸ್ನಾನ ಮಾಡದೇ ನೀರನ್ನು ಉಳಿಸಿ ಎಂದೂ ಹೇಳಿದ್ದಾರೆ.

ಜೊತೆಗೆ ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ತಿಂಗಳಿಗೆ 22 ಕ್ಯೂಬಿಕ್ ಮೀಟರ್‌ಗಿಂತ ಹೆಚ್ಚು ನೀರನ್ನು ಬಳಸುವ ಮನೆಗಳು ಹೆಚ್ಚುವರಿ ಶುಲ್ಕವನ್ನು ಪಾವತಿಸಲಾಗುವುದು. ಇದಲ್ಲದೇ ರಸ್ತೆಗಳಲ್ಲಿ ತಮ್ಮ ಕಾರುಗಳನ್ನು ತೊಳೆಯುವ ಅಥವಾ ನೀರಿನ ವ್ಯರ್ಥವೆಂದು ಪರಿಗಣಿಸುವ ಇತರ ಚಟುವಟಿಕೆಗಳನ್ನು ನಡೆಸುವ ಜನರಿಗೆ $ 300 ವರೆಗೆ ದಂಡ ವಿಧಿಸುವುದಾಗಿ ಬೊಗೋಟಾದ ಮೇಯರ್ ಕಾರ್ಲೋಸ್ ಫರ್ನಾಂಡೊ ಗ್ಯಾಲನ್ ಹೇಳಿದ್ದಾರೆ.

ಇದನ್ನೂ ಓದಿ: ಮಗನ ಹುಟ್ಟುಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದ ತಂದೆ

ಇದಲ್ಲದೇ ಸಾಮಾನ್ಯವಾಗಿ ಪ್ರತಿದಿನ ತೊಳೆಯುವ ಸಿಟಿ ಬಸ್‌ಗಳು ಇನ್ನು ಮುಂದೆ ವಾರಕ್ಕೊಮ್ಮೆ ಮಾತ್ರ ತೊಳೆಯಲ್ಪಡುತ್ತವೆ ಎಂದು ಹೊಸ ನೀತಿ ಜಾರಿಗೊಳಿಸಲಾಗಿದೆ. ಬೊಗೊಟಾದ ಮುಖ್ಯ ನೀರಿನ ಮೂಲವಾದ ಚಿಂಗಾಜಾ ಜಲಾಶಯದಲ್ಲಿ ಶೇ. 15ರಷ್ಟು ಮಾತ್ರ ನೀರಿದೆ. ಮುಂದಿನ ಎರಡು ತಿಂಗಳ ಒಳಗೆ ಮಳೆಯಾಗದಿದ್ದರೆ ಜಲಾಶಯದಲ್ಲಿ ನೀರು ಸಂಪೂರ್ಣವಾಗಿ ಖಾಲಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 4:50 pm, Tue, 16 April 24