ಬೆಂಗಳೂರಿನ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕರ್ನಾಟಕ್ಕೆ ಎಂಟ್ರಿ ಕೊಟ್ಟಿದ್ದು, ಮೈಸೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿ ಅಬ್ಬರದ ಭಾಷಣ ಮಾಡಿದರು. ಈ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ತಮ್ಮ ಪ್ರಣಾಳಿಕೆ ಬಗ್ಗೆ ಗ್ಯಾರಂಟಿ ನೀಡಿದರು. ಹಾಗಾದ್ರೆ, ಮೋದಿ ಏನೆಲ್ಲ ಹೇಳಿದರು ಎನ್ನುವ ಭಾಷಣ ಹೈಲೇಟ್ಸ್ ಇಲ್ಲಿದೆ.
ಮೈಸೂರು, (ಏಪ್ರಿಲ್ 14): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಈ ವೇಳೆ ನಿಮಗೆಲ್ಲಾ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ದೇಶದ ಐಟಿ ಹಬ್ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಬೆಂಗಳೂರಿನಲ್ಲಿನ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ತಾಯಿ ಚಾಮುಂಡೇಶ್ವರ ಆಶೀರ್ವಾದ ಪಡೆಯುವ ಸೌಭಾಗ್ಯ ಸಿಕ್ಕಿದೆ. ತಾಯಿ ಭುವನೇಶ್ವರಿ, ತಾಯಿ ಕಾವೇರಿಗೆ ನನ್ನ ಪ್ರಣಾಮ ಸಲ್ಲಿಸುತ್ತೇನೆ. ಹೆಚ್.ಡಿ.ದೇವೇಗೌಡರು ದೇಶದ ಅತ್ಯಂತ ಹಿರಿಯ ನಾಯಕರು. ಅವರ ಆಶೀರ್ವಾದ ಸಿಕ್ಕಿರುವುದು ಕೂಡ ಒಂದು ಸೌಭಾಗ್ಯವಾಗಿದೆ. ಮೈಸೂರು, ಇಡೀ ಕರ್ನಾಟಕದ ಆಶೀರ್ವಾದ ನಮಗೆ ಸಿಗಬೇಕು ಎಂದು ಹೇಳಿದರು.
ಈ ಲೋಕಸಭಾ ಚುನಾವಣೆ ಮುಂದಿನ 5 ವರ್ಷ ಬಹಳ ಮಹತ್ವದ್ದಾಗಿದೆ. ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ, ಇದು ಮೋದಿ ಗ್ಯಾರಂಟಿ. ದೇವೇಗೌಡರು ಕೂಡ ಭಾಷಣದಲ್ಲಿ ಗ್ಯಾರಂಟಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮುಂದಿನ 5 ವರ್ಷಗಳವರೆಗೆ ಉಚಿತ ರೇಷನ್ ನೀಡುತ್ತೇವೆ. 75 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡುತ್ತೇವೆ. ಬಡವರಿಗೆ ಹೊಸ ಮನೆಗಳನ್ನು ನಿರ್ಮಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದರು.
ಮೋದಿಯೇ ಗ್ಯಾರಂಟಿ ಎಂದ ನಮೋ
ಇವತ್ತು ನಾವು ನಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇವೆ. ಇವತ್ತಿನ ಸಂಕಲ್ಪ ಪತ್ರ ಮೋದಿಯ ಗ್ಯಾರಂಟಿಯಾಗಿದೆ. ಪ್ರತಿ ಬಡವನಿಗು ಮನೆ ನೀಡುವ ಯೋಜನೆ ಮಾಡಿದ್ದೇವೆ. 3 ಕೋಟಿ ಮಹಿಳೆಯರನ್ನು ನಾವು ಲಕ್ಷಾದೀಶೆಯನ್ನಾಗಿ ಮಾಡುತ್ತೇವೆ. ಡಿಜಿಟಲ್ ಇಂಡಿಯಾ ನಮ್ಮ ಜನರ ಬದುಕನ್ನು ಬದಲಾಯಿಸಿದೆ. ಇದು ಹೊಸ ಭಾರತ ಹೊಸ ಚಿತ್ರರಣವಾಗಿದೆ ಎಂದರು.
ಹಿಂದಿನ ಭಾರತ ಹಳೆಯ ಹಳ್ಳ ಬಿದ್ದ ರಸ್ತೆಗಳಿದ್ದವು. ಆದರೆ ಇಂದಿನ ಭಾರತ ಬದಲಾಗಿದೆ. ಪೂರ್ಣ ಪ್ರಮಾಣದಲ್ಲಿ ಹೈವೆ ರಸ್ತೆಗಳು ನಿರ್ಮಾಣವಾಗಿವೆ. ಭಾರತ ಪ್ರಪಂಚದ RND ಹಬ್ಬ ಮುಂದಿನ ದಿನದಲ್ಲಿ ನಿರ್ಮಾಣ ಆಗಲಿದೆ. ಮುಂದಿನ ದಿನಗಳಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತೇವೆ. 10 ವರ್ಷಗಳ ಹಿಂದೆ ಭಾರತ ಬೇರೆ ದೇಶದ ಮೇಲೆ ಅವಲಂಬಿತವಾಗಿತ್ತು. ಟೆಕ್ನಾಲಜಿ ಕ್ಷೇತ್ರದಲ್ಲಿ ಇಂದು ಸಾಕಷ್ಟು ಬದಲಾವಣೆ ಮಾಡಿದ್ದೇವೆ. ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತೇವೆ. ಕನ್ನಡ ದೇಶದ ಸಮೃದ್ಧಿ ಭಾಷೆವಾಗಿದೆ. ಎನ್ಡಿಎ ಏನು ಹೇಳುತ್ತೋ ಅದನ್ನು ಮಾಡಿ ತೋರಿಸುತ್ತದೆ. ತ್ರಿವಳಿ ತಲಾಖ್, ಮಹಿಳೆಯರಿಗೆ ಮೀಸಲಾತಿ, ರಾಮಮಂದಿರ ನಿರ್ಮಾಣ. ಬಿಜೆಪಿಯ ಸಂಕಲ್ಪ ಅದು ಮೋದಿಯ ಗ್ಯಾರಂಟಿ ಆಗಿರುತ್ತದೆ. ನಿಮ್ಮ ಒಂದು ವೋಟ್ನಿಂದ ನನ್ನ ಶಕ್ತಿ ಬಲವರ್ಧನೆ ಮಾಡುತ್ತೆ ಎಂದರು.
ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ
ಮೈಸೂರು ರಾಜರು ಮಾಡಿದ ಅಭಿವೃದಿ ಕಾರ್ಯ ದೇಶಕ್ಕೆ ಕನ್ನಡಿಯಾಗಿದೆ. ಕಾಂಗ್ರೆಸ್ ಪಕ್ಷ ತುಕಡೆ ತುಕಡೆ ಗ್ಯಾಂಗ್ ಜೊತೆ ಇದೆ. 370 ಆರ್ಟಿಕಲ್ ವಿದಿಯ ಬಗ್ಗೆ ಕಾಂಗ್ರೆಸ್ ಪಕ್ಷದ ಅಧಕ್ಷರು ಮಾತನಾಡಿದ್ರು. 370 ಆರ್ಟಿಕಲ್ಗೂ ಕಾಶ್ಮೀರಿಗೂ ಏನು ಸಂಬಂಧ ಎಂದು ಹೇಳಿಕೆ ನೀಡಿದ್ರು. ಭಾರತ ಮಾತೆ ಜೈ ಹೇಳೋಕೆ ಯಾರ ಅನುಮತಿ ಪಡೆಯ ಬೇಕು ನೀವೆ ಹೇಳಿ ಎಂದು ಮಲ್ಲಿಕಾರ್ಜುನ ಖರ್ಗೆಗೆ ಟಾಂಗ್ ಕೊಟ್ಟರು.
ದೇಶವನ್ನು ವಿಭಜಿಸುವುದರಲ್ಲಿ ಕಾಂಗ್ರೆಸ್ ಪಕ್ಷ ಅಪಾಯಕಾರಿಯಾಗಿದೆ. ದೇಶದ ವಿರುದ್ಧ ಮಾತಾಡುವವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡುತ್ತೆ. ಕಾಂಗ್ರೆಸ್ ಸಮಾವೇಶದಲ್ಲಿ ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿದ್ರು. ಆದ್ರೆ, ಸಮಾವೇಶದ ವೇದಿಕೆಯಲ್ಲಿ ಘೋಷಣೆ ಕೂಗಲು ಸಹ ಅನುಮತಿ ಪಡೆದ್ರು. ಕಾಂಗ್ರೆಸ್ ಪಕ್ಷದಲ್ಲಿ ದೇಶಕ್ಕೆ ಘೋಷಣೆ ಕೂಗಲು ಸಹ ಅನುಮತಿ ಬೇಕಾ? ಕಾಂಗ್ರೆಸ್ನವರ ಹಿಂದಿನ ಭಾಷಣ ತೆಗೆದು ನೋಡಿ ಎಂದು ಮೋದಿ, ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿಕೆಯನ್ನು ಉಲ್ಲೇಖಿಸಿ ತಿವಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ