ಗ್ಯಾರಂಟಿ ಯೋಜನೆಯಿಂದ ಹಳ್ಳಿಯ ತಾಯಂದಿರು ದಾರಿತಪ್ಪಿದ್ದಾರೆ; ಹೆಚ್ಡಿ ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ
ಗ್ಯಾರಂಟಿ ಯೋಜನೆಯಿಂದ ಹಳ್ಳಿಯ ತಾಯಂದಿರು ದಾರಿತಪ್ಪಿದ್ದಾರೆ ಎಂದು ಹೆಚ್.ಡಿ ಕುಮಾರಸ್ವಾಮಿ (H. D. Kumaraswamy) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತುರುವೇಕೆರೆ(Turuvekere)ಯಲ್ಲಿ ವಿ.ಸೋಮಣ್ಣ ಪರ ಪ್ರಚಾರ ಭಾಷಣದಲ್ಲಿ ಮಾತನಾಡುತ್ತಾ ಗ್ಯಾರಂಟಿ ಘೋಷಣೆ ಮಾಡಿ ನನ್ನ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದಾರೆ ಎಂದಿದ್ದಾರೆ.
ತುಮಕೂರು, ಏ.13: ಗ್ಯಾರಂಟಿ ಯೋಜನೆಯಿಂದ ಹಳ್ಳಿಯ ತಾಯಂದಿರು ದಾರಿತಪ್ಪಿದ್ದಾರೆ ಎಂದು ಹೆಚ್.ಡಿ ಕುಮಾರಸ್ವಾಮಿ (H. D. Kumaraswamy) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತುರುವೇಕೆರೆ(Turuvekere)ಯಲ್ಲಿ ವಿ.ಸೋಮಣ್ಣ ಪರ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಾಗಿ ಯಾವ ಜೇಬಿಗೆ ಕೈ ಹಾಕಿದ್ದಾರೆ ಎಂದು ಹೇಳುತ್ತಾ, ಇವತ್ತಿನ ಸರ್ಕಾರ ಕಳೆದ ಚುನಾವಣೆಯಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಿ ನನ್ನ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದಾರೆ. ಅವರ ಬದುಕು ಏನಾಗಬೇಕು ಎಂದು ಯೋಚನೆ ಮಾಡಬೇಕಿದೆ ಎಂದಿದ್ದಾರೆ.
ಇನ್ನು ಗುಬ್ಬಿ ಸಾರ್ವಜನಿಕರ ಸಭೆಯಲ್ಲಿ ವಿ.ಸೋಮಣ್ಣ ಪರ ಭರ್ಜರಿ ಮತಯಾಚನೆ ಮಾಡಿದರು. ಎರಡೂ ಪಕ್ಷದ ಕಾರ್ಯಕರ್ತರಿಗೆ ನಾನು ಮನವಿ ಮಾಡುತ್ತೇನೆ. ಒಂದೇ ಕುಟುಂಬದ ಅಣ್ಣತಮ್ಮಂದಿರ ಥರ ಸೋಮಣ್ಣನ ಗೆಲುವಿಗೆ ಶ್ರಮ ಹಾಕಿದ್ದೀರಿ. ಅದಕ್ಕೆ ನನ್ನ ಕೃತಜ್ಙತೆ. ಎರಡೂ ಪಕ್ಷಗಳು ಒಂದಾಗಲ್ಲಾ ಎಂದು ಕಾಂಗ್ರೆಸ್ನವರು ದುರಹಂಕಾರದ ಮಾತುಗಳನ್ನ ಆಡಿದ್ದರು. ಜೆಡಿಎಸ್ ಉಳಿಯಲ್ಲ, ಬಾಗಿಲೇ ಮುಚ್ಚಿಬಿಡ್ತಾರೆ ಎನ್ನುವ ಸಣ್ಣತನದ ಮಾತುಗಳನ್ನಾಡಿದ್ದರು.
ಇದನ್ನೂ ಓದಿ:ಗ್ಯಾರೆಂಟಿ ಸಮಾವೇಶ: ಸಿದ್ದರಾಮಯ್ಯ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ
ಈ ಹಿಂದೆ ನಾವು ಬಿಎಸ್ವೈ ಸರ್ಕಾರ ರಚನೆ ಮಾಡಿದ್ದಾಗ, ಇನ್ನು 20 ತಿಂಗಳ ಮುಂದುವರೆದಿದ್ರೆ, ಆವತ್ತೆ ಕಾಂಗ್ರೆಸ್ ಬಾಗಿಲು ಮುಚ್ಚಬೇಕಿತ್ತು. ಆಗ ಸರ್ಕಾರ ಬಿಳುವುದಕ್ಕೆ ಅನೇಕ ಕಾರಣಗಳು ಇದೆ. ನಾನು ಸಿಎಂ ಸ್ಥಾನ ಬಿಟ್ಟುಕೊಡದ್ದಕ್ಕೆ ಒಂದು ರೀತಿ ವನವಾಸ ಅನುಭವಿಸಿದ್ದೇನೆ. ಅವತ್ತಿನ ಸರ್ಕಾರದ ಕೆಲಸಗಳ ಬಗ್ಗೆ ಅನೇಕ ಚರ್ಚೆಗಳಾಗಿದೆ. ಬಿಜೆಪಿಯ ‘ಬಿ’ ಟೀಂ ಎನ್ನುವ ಅಪಪ್ರಚಾರದ ಮೂಲಕ ಜೆಡಿಎಸ್ನ ಮುಗಿಸೋಕೆ ಪ್ರಯತ್ನ ಮಾಡಿದ್ದರು. ನಾವು ಇನ್ನೂ 10, 20 ವರ್ಷ ಇರ್ತೀವಿ ಎನ್ನುವ ಭ್ರಮೆಯಲ್ಲಿದ್ದಾಗ ಜನರು 79 ಸ್ಥಾನಕ್ಕೆ ಇಳಿಸಿದ್ದರು.
ಅಂಬೇಡ್ಕರ್ ಅವರು ರಚನೆ ಮಾಡಿರುವ ಸಂವಿಧಾನವನ್ನ ಯಾರ ಕೈಯಲ್ಲೂ ಬದಲು ಮಾಡಲು ಆಗಲ್ಲ ಎಂದು ನಿನ್ನೆ ಮೋದಿ ಅವರೇ ಹೇಳಿದ್ದಾರೆ. ಆದರೆ, ಸಂವಿಧಾನವನ್ನ ಬದಲು ಮಾಡುತ್ತಾರೆ ಎಂದು ಬಿಜೆಪಿ ವಿರುದ್ದ ಕಾಂಗ್ರೆಸ್ ಅಪಪ್ರಚಾರ ಮಾಡ್ತಿದ್ದಾರೆ. ಏನಾದರೂ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎನ್ನವುದು ಇದ್ರೆ ಅದು ಕಾಂಗ್ರೆಸ್ ಪಕ್ಷ. ಮೊದಲು ನಿಮಗೆ ಯುವಕರಿಗೆ ಉದ್ಯೋಗ ಕೊಟ್ಟು ಬದಕಿಸಬೇಕು ಅಂತಿದ್ರೆ, ರಾಜ್ಯದಲ್ಲಿ ಎರಡು ಮುಕ್ಕಾಲು ಲಕ್ಷ ಖಾಲಿ ಉದ್ಯೋಗ ಇಟ್ಟುಕೊಂಡಿದ್ದೀರಾ, ಅದನ್ನ ಮೊದಲು ಭರ್ತಿ ಮಾಡಿ ಎಂದರು.
ಈಗಿನ ಅಭ್ಯರ್ಥಿ ದೇವೇಗೌಡರು ಚುನಾವಣೆಗೆ ನಿಂತಾಗ ಹೇಗೆ ನಡೆದುಕೊಂಡರು ಗೊತ್ತಿದೆ ಎಲ್ಲರಿಗೂ. ಆಗ ಸರಿಯಾಗಿ ನಡೆದುಕೊಂಡಿದ್ರೆ ದೇವೆಗೌಡರು ಸೋಲುತ್ತಿರಲಿಲ್ಲ. ಚುನಾವಣೆ ನಂತರ ಕಾಂಗ್ರೆಸ್ ಇರುತ್ತೋ, ಇಲ್ವೋ ನೊಡೋಣ. ಜೆಡಿಎಸ್ ಮುಗಿಸಿದ್ದೇವೆ ಎಂದು ಕನಕಪುರದ ಮಹಾನುಭವ ಹೇಳ್ತಿದ್ದಾರೆ. ಇಂಥವರು ನೂರು ಜನರು ಹುಟ್ಟಿ ಬಂದರೂ, ನೂರು ಜನ್ಮ ಎತ್ತಿ ಬಂದ್ರು ಜೆಡಿಎಸ್ ಮುಗಿಸೋಕೆ ಸಾಧ್ಯವಿಲ್ಲ. ಇಂತಹ ದುರಹಂಕಾರದ ಮಾತುಗಳು ಒಳಿತಲ್ಲ ಎಂದು ಡಿಕೆ ಶಿವಕುಮಾರ್ ವಿರುದ್ದ ಕಿಡಿಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ