ಚಾಮುಂಡೇಶ್ವರಿ ಸನ್ನಿದಾನದಲ್ಲಿ ಮೊದಲ ಮೈತ್ರಿ ಸಮನ್ವಯ ಸಭೆ: ಕಾಂಗ್ರೆಸ್​ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ?

ಬಿಜೆಪಿ- ಜೆಡಿಎಸ್ ಮೈತ್ರಿಯಿಂದಲೇ ಲೋಕಸಭಾ ಚುನಾವಣೆಯ ಪ್ರಕ್ರಿಯೆಗಳು ಪ್ರಾರಂಭ ಆಗಿವೆ. ತಾಯಿ ಚಾಮುಂಡೇಶ್ವರಿ ಸನ್ನಿದಾನದಲ್ಲಿ ಮೈತ್ರಿ ಸಮನ್ವಯ ಸಭೆ ಮಾಡಬೇಕು. ಪ್ರಥಮ ಸಭೆಯನ್ನು ತಾಯಿಯ ಆಶೀರ್ವಾದದಿಂದ ಇಲ್ಲಿಂದಲೇ ಪ್ರಾರಂಭ ಮಾಡಿದ್ದೇವೆ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ. ಪ್ರಥಮ ಸಭೆ ಮೊದಲಿಂದಲೂ ತಾಯಿ ಚಾಮುಂಡೇಶ್ವರಿ ಸನ್ನಿದಾನದಲ್ಲಿ ಮಾಡಿಕೊಂಡು ಹೋಗುತ್ತೇವೆ ಎಂದಿದ್ದಾರೆ.

ಚಾಮುಂಡೇಶ್ವರಿ ಸನ್ನಿದಾನದಲ್ಲಿ ಮೊದಲ ಮೈತ್ರಿ ಸಮನ್ವಯ ಸಭೆ: ಕಾಂಗ್ರೆಸ್​ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ?
ಮಾಜಿ ಸಿಎಂ ಕುಮಾರಸ್ವಾಮಿ
Follow us
ದಿಲೀಪ್​, ಚೌಡಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on:Mar 27, 2024 | 5:54 PM

ಮೈಸೂರು, ಮಾರ್ಚ್​ 27: ಬಿಜೆಪಿ- ಜೆಡಿಎಸ್ ಮೈತ್ರಿಯಿಂದಲೇ ಲೋಕಸಭಾ ಚುನಾವಣೆಯ ಪ್ರಕ್ರಿಯೆಗಳು ಪ್ರಾರಂಭ ಆಗಿವೆ. ತಾಯಿ ಚಾಮುಂಡೇಶ್ವರಿ ಸನ್ನಿದಾನದಲ್ಲಿ ಮೈತ್ರಿ ಸಮನ್ವಯ ಸಭೆ ಮಾಡಬೇಕು. ಪ್ರಥಮ ಸಭೆಯನ್ನು ತಾಯಿಯ ಆಶೀರ್ವಾದದಿಂದ ಇಲ್ಲಿಂದಲೇ ಪ್ರಾರಂಭ ಮಾಡಿದ್ದೇವೆ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 28ಕ್ಕೆ 28 ಕ್ಷೇತ್ರ ಗೆಲ್ಲುವ ಗುರಿ ಇಟ್ಟಿದ್ದೇವೆ. ಯಾವುದೇ ರೀತಿಯ ವಿಶ್ವಾಸ ಕೊರತೆ ಇಲ್ಲದೇ ಒಟ್ಟಾಗಿ ಕೆಲಸ ನಿರ್ವಹಣೆ ಮಾಡುವ ದಿಕ್ಸೂಚಿ ಇಲ್ಲಿಂದಲೇ ಎಲ್ಲ ಕ್ಷೇತ್ರಗಳಿಗೂ ಹೋಗುತ್ತಿದೆ. ಪ್ರಥಮ ಸಭೆ ಮೊದಲಿಂದಲೂ ತಾಯಿ ಚಾಮುಂಡೇಶ್ವರಿ ಸನ್ನಿದಾನದಲ್ಲಿ ಮಾಡಿಕೊಂಡು ಹೋಗುತ್ತೇವೆ ಎಂದು ಹೇಳಿದ್ದಾರೆ.

ಮಂಡ್ಯದಲ್ಲಿ ಹೆಚ್​ ಡಿ ಕುಮಾರಸ್ವಾಮಿ ಸೋಲಿನ‌ ಬಗ್ಗೆ ಕಾಂಗ್ರೆಸ್​ ನಾಯಕರ ಭವಿಷ್ಯ ವಿಚಾರವಾಗಿ ಮಾತನಾಡಿದ ಅವರು, ಒಳಗೋ ಹೊರಗೋ ಏನ್ ಬೇಕಾದರೂ ಪ್ಲೇ ಮಾಡಿಕೊಳ್ಳಲಿ. ಅಲ್ಲಿನ ಜನರು ನನಗೆ ಒತ್ತಡ ಹಾಕಿದ್ದಾರೆ. ನಾನೊಬ್ಬ ಕನ್ನಡಿಗ, ರಾಜಕೀಯವಾಗಿ ಶಕ್ತಿ ತುಂಬೋದು ಮಂಡ್ಯ. ಮಗನನ್ನು ಗೆಲ್ಲಿಸಿಕೊಳ್ಳಲು ಆಗಲ್ಲ ಎಂದರೆ ಇದರಲ್ಲೂ ಕಾಂಗ್ರೆಸ್​​ನವರ ಪಾಲು ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮಂಡ್ಯ ಜನರು ಘಟಾನುಘಟಿ ನಾಯಕರನ್ನೇ ಸೋಲಿಸಿದ್ದಾರೆ, ಕುಮಾರಸ್ವಾಮಿ ಯಾವ ಲೆಕ್ಕ: ಕದಲೂರು ಉದಯ್

ಅವಾಗ ಅವರ ಜೊತೆ ತಾನೇ ನಾವು ಇದ್ದೆವು. ನೀವು ಹಿಂದೆ ಸಿಎಂ ಆಗಿ ಮೈಸೂರಲ್ಲೇ ಗೆಲ್ಲೋಕೆ ಆಗಿಲ್ಲ. ಇವಾಗ ನಿಮ್ಮ ಮಾತಿಗೆ ಜನರು ಉತ್ತರ ಕೊಡುತ್ತಾರೆ. ಮಂಡ್ಯದಲ್ಲಿ ನಾನು ಗೆಲ್ತೀನಿ ಇಲ್ಲವೋ ಎಂದು ಜನರು ತೀರ್ಮಾನ ಮಾಡುತ್ತಾರೆ. ಮಂಡ್ಯ ರೈತರ ಬಗ್ಗೆ ಏನಾದರೂ ಯೋಚನೆ ಮಾಡಿದ್ರಾ? ಕೆಆರ್​ಎಸ್​ನಲ್ಲಿ ನೀರು ಇಟ್ಟುಕೊಂಡು ಅಲ್ಲಿನ ಜಾನುವಾರಿಗಳಿಗೆ ನೀರಿಲ್ಲ. ಆ ಭಾಗದ ಜನರು ನೀರಿಲ್ಲದೇ ಪರಿತಪ್ಪಿಸಿತ್ತಿದ್ದಾರೆ. ತಮಿಳುನಾಡಿಗೆ ಎತೇಚ್ಚವಾಗಿ ನೀರು ಹರಿಸಿದ್ದೀರಿ ಎಂದು ತಿರುಗೇಟು ನೀಡಿದ್ದಾರೆ.

ಡಿಕೆ ಶಿವಕುಮಾರ್​ ಪ್ರಶ್ನೆಗೆ ಹೆಚ್‌ಡಿ ಕುಮಾರಸ್ವಾಮಿ ತಿರುಗೇಟು

ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ ಎಂಬ ಡಿಕೆ ಶಿವಕುಮಾರ್​ ಪ್ರಶ್ನೆಗೆ ಉತ್ತರಿಸಿದ್ದು, ಮೊದಲು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ವ್ಯಕ್ತವಾಗಿರುವ ಪ್ರವಾಹ ತಡೆಯಲಿ. ಮಂಜುನಾಥ್ ಜೆಡಿಎಸ್​ನಿಂದ ಸ್ಪರ್ಧೆ ಮಾಡಿದ್ದಾರೋ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೋ ಅಂತಾ ಅಲ್ಲ. ಬಿಜೆಪಿ- ಜೆಡಿಎಸ್ ಒಂದಾದ್ರೆ ಎರಡು ಒಂದೇ ಅಲ್ವಾ? ಎಲ್ಲಿಂದ ನಿಂತರೆ ಏನು. ಈಗಾಗಲೇ ಸೋಲುವ ಭಯದಿಂದ‌ ಕುಕ್ಕರ್ ಹಂಚಿ, ಇವಾಗ ದುಡ್ಡು ಹಂಚುತ್ತಿದ್ದಾರಲ್ಲ ಎಂದು ತಿರುಗೇಟು ನೀಡಿದ್ದಾರೆ.

ಮೈತ್ರಿ ನಾಯಕರ ಮೊದಲ ಸಭೆ

ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ಲೋಕಸಭಾ ಚುನಾವಣಾ ಅಖಾಡದಲ್ಲಿ ಮೈತ್ರಿ ನಾಯಕರ ಮೊದಲ ಸಭೆ ಮಾಡಲಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್​ಡಿ ಕುಮಾರಸ್ವಾಮಿ, JDS ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಶಾಸಕ ಹರೀಶ್ ಗೌಡ, ಮಾಜಿ ಸಚಿವರಾದ ಸಾ.ರಾ.ಮಹೇಶ್, ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಮೈಸೂರು-ಕೊಡಗು ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು, ಶಾಸಕ ಶ್ರೀವತ್ಸ, ವಿಧಾನಪರಿಷತ್ ಸದಸ್ಯ ಮಂಜೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:48 pm, Wed, 27 March 24