Video Viral: ಮಾನವನ ಮುಖವನ್ನು ಹೋಲುವ ಜೇಡ ಪತ್ತೆ; ವಿಡಿಯೋ ವೈರಲ್​​​​

ಮಾನವನ ಮುಖವನ್ನು ಹೋಳುವ ಜೇಡದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ವಿಡಿಯೋ ಕಂಡು ನೆಟ್ಟಿಗರೊಬ್ಬರು "ನಿಜವಾದ ಸ್ಪೈಡರ್ ಮ್ಯಾನ್" ಎಂದು ಕಾಮೆಂಟ್​ ಮಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

Video Viral: ಮಾನವನ ಮುಖವನ್ನು ಹೋಲುವ ಜೇಡ ಪತ್ತೆ; ವಿಡಿಯೋ ವೈರಲ್​​​​
ಮಾನವನ ಮುಖವನ್ನು ಹೋಳುವ ಜೇಡ
Follow us
ಅಕ್ಷತಾ ವರ್ಕಾಡಿ
|

Updated on:Apr 17, 2024 | 2:23 PM

ಬಿಹಾರ: ಮಾನವನ ಮುಖವನ್ನು ಹೋಲುವ ಜೇಡವೊಂದು ಬಿಹಾರದ ಜೆಹಾನಾಬಾದ್‌ನ ಮನೆಯೊಂದರಲ್ಲಿ ಪತ್ತೆಯಾಗಿದ್ದು, ಸದ್ಯ ಈ ವಿಭಿನ್ನವಾದ ಜೇಡದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಮನೆಯೊಂದರ ಗೋಡೆಯ ಮೇಲೆ ಅಂಟಿಕೊಂಡಿದ್ದ ಈ ಜೇಡವನ್ನು ನೋಡಲು ಸ್ಥಳೀಯರು ಮುಗಿಬಿದ್ದಿದ್ದಾರೆ. ಆದರೆ ಈ ಜೇಡ ಎಷ್ಟು ವಿಷಕಾರಿಯಾಗಿದೆ ಎಂಬುದು ಇನ್ನು ತಿಳಿದುಬಂದಿಲ್ಲ.

@jbd.meme ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಮಾನವನ ಮುಖವನ್ನು ಹೋಳುವ ಜೇಡದ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋ ಹಂಚಿಕೊಂಡ ಕೇವಲ ಒಂದೇ ವಾರದಲ್ಲಿ 38 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.

View this post on Instagram

A post shared by Jehanabad Meme (@jbd.meme)

ಇದನ್ನೂ ಓದಿ: 4ನೇ ಹಂತದ ಕ್ಯಾನ್ಸರ್​​ ವಿರುದ್ಧ ಜೀವನ್ಮರಣ ಹೋರಾಟ ನಡೆಸುತ್ತಿರುವ ಮಹಿಳೆ; ಕೆಲಸಕ್ಕೆ ಬರುವಂತೆ ಬಾಸ್​​ ಆರ್ಡರ್

ವಿಡಿಯೋ ಎಲ್ಲೆಡೆ ವೈರಲ್​​ ಆಗುತ್ತಿದ್​ದಂತೆ ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್​​ ಮಾಡಿದ್ದಾರೆ. ಒಬ್ಬರು “ನಿಜವಾದ ಸ್ಪೈಡರ್ ಮ್ಯಾನ್” ಎಂದು ಬರೆದರೆ ಮತ್ತೊಬ್ಬರು “ಇದು ನಿಜವಲ್ಲ, ಎಡಿಟ್​ ಮಾಡಿರುವ ವಿಡಿಯೋ” ಎಂದು ಕಾಮೆಂಟ್​ ಮಾಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 11:17 am, Wed, 17 April 24