AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಸ್​ ಫಿಕ್ಸಿಂಗ್ ಬಗ್ಗೆ ವಿವರಿಸಿದ್ರಾ ಫಾಪ್? ವೈರಲ್ ಆಯ್ತು ವಿಡಿಯೋ

ಆರ್​ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯ ಮುಂಬೈನಲ್ಲಿ ನಡೆದಿತ್ತು. ಇಲ್ಲಿ ಟಾಸ್ ವಿನ್ ಅನ್ನೋದು ಬಹುಮುಖ್ಯವಾಗುತ್ತದೆ. ಟಾಸ್ ಹಾರಿಸಿದ ಕಾಯಿನ್​ನ ಮ್ಯಾಚ್ ರೆಫರಿ ಜವಾಗಲ್ ಶ್ರೀನಾಥ್ ಅವರು ಎತ್ತಿಕೊಳ್ಳುವಾಗ ಟ್ಯಾಂಪರಿಂಗ್ ಮಾಡಿದ್ದಾರೆ ಎಂದು ಕೆಲವರು ಹೇಳಿದ್ದರು.

ಟಾಸ್​ ಫಿಕ್ಸಿಂಗ್ ಬಗ್ಗೆ ವಿವರಿಸಿದ್ರಾ ಫಾಪ್? ವೈರಲ್ ಆಯ್ತು ವಿಡಿಯೋ
ಕಮಿನ್ಸ್-ಫಾಪ್
ರಾಜೇಶ್ ದುಗ್ಗುಮನೆ
|

Updated on: Apr 16, 2024 | 10:00 AM

Share

ಮುಂಬೈ ಇಂಡಿಯನ್ಸ್ (MI) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ನಡೆದ ಟಾಸ್ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಇದರಲ್ಲಿ ಮೋಸ ಮಾಡಲಾಗಿದೆ ಎಂದು ಅನೇಕರು ಆರೋಪಿಸಿದ್ದರು. ಈ ಬೆನ್ನಲ್ಲೇ ಆರ್​ಸಿಬಿ ತಂಡ ನಾಯಕ ಫಾಪ್ ಡುಪ್ಲೆಸಿಸ್ ಅವರ ವಿಡಿಯೋ ವೈರಲ್ ಆಗಿದೆ. ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಅವರು ಪ್ಯಾಟ್ ಕಮಿನ್ಸ್​ಗೆ ಒಂದು ವಿವರಣೆ ನೀಡಿದ್ದಾರೆ. ಇದು ಟಾಸ್ ಬಗ್ಗೆ ನೀಡಿದ ವಿವರಣೆ ಎಂದು ಹೇಳಲಾಗುತ್ತಿದೆ.

ಏನಿದು ಘಟನೆ?

ಆರ್​ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯ ಮುಂಬೈನಲ್ಲಿ ನಡೆದಿತ್ತು. ಇಲ್ಲಿ ಟಾಸ್ ವಿನ್ ಅನ್ನೋದು ಬಹುಮುಖ್ಯವಾಗುತ್ತದೆ. ಟಾಸ್ ಹಾರಿಸಿದ ಕಾಯಿನ್​ನ ಮ್ಯಾಚ್ ರೆಫರಿ ಜವಾಗಲ್ ಶ್ರೀನಾಥ್ ಅವರು ಎತ್ತಿಕೊಳ್ಳುವಾಗ ಟ್ಯಾಂಪರಿಂಗ್ ಮಾಡಿದ್ದಾರೆ ಎಂದು ಕೆಲವರು ಹೇಳಿದ್ದರು. ಇದರಿಂದಲೇ ಮುಂಬೈ ಟಾಸ್ ಗೆದ್ದಿತ್ತು ಎಂದು ಕೆಲವರು ಆರೋಪಿಸಿದ್ದರು.

ಟಾಸ್​ಗೆ ಸಂಬಂಧಿಸಿದ ಟ್ವೀಟ್

View this post on Instagram

A post shared by Telly Super (@tellysuper)

ಆರ್​ಸಿಬಿ vs ಎಸ್​ಆರ್​ಎಚ್​ ಪಂದ್ಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದೆ. ಟಾಸ್ ವೇಳೆ ಕಮಿನ್ಸ್ ಹಾಗೂ ಫಾಪ್ ಮಾತನಾಡಿದ್ದಾರೆ. ಈ ವೇಳೆ ಫಾಪ್ ಅವರು ಮುಂಬೈ ಟಾಸ್ ವೇಳೆ ಏನಾಯಿತು ಎಂಬುದನ್ನು ವಿವರಿಸಿದ್ದಾರೆ. ಇದನ್ನು ಕೇಳಿ ಕಮಿನ್ಸ್ ಶಾಕ್ ಆಗಿದ್ದಾರೆ. ಅವರ ಮುಖದ ಭಾವನೆಗಳೇ ಎಲ್ಲವನ್ನೂ ಹೇಳಿವೆ. ಇದರಿಂದ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ನಿಜಕ್ಕೂ ಅವರು ಟಾಸ್ ವಿಚಾರವನ್ನೇ ಹೇಳಿದ್ದಾ ಅಥವಾ ಬೇರೆ ಹೇಳಿದ್ದನ್ನು ಈ ರೀತಿ ಅರ್ಥೈಸಲಾಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ‘ಅದು ನಮಗೆ ದುಬಾರಿ ಆಯಿತು’; ಸೋಲಿನ ಬಳಿಕ ಆರ್​ಸಿಬಿ ನಾಯಕನ ಬೇಸರದ ಮಾತು

ಇತ್ತೀಚೆಗೆ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ನಡುವಿನ ಪಂದ್ಯದ ಟಾಸ್ ನಡೆಯುವಾಗ ಟಾಸ್ ನೋಡಲು ಧೋನಿ ಫಿಲ್ಡ್​ಗೆ ಆಗಮಿಸಿದ್ದರು ಎಂದು ಕೆಲವರು ಫೇಕ್ ಸುದ್ದಿ ಹಬ್ಬಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ