35 ಬಾಲ್ಗೆ 83 ರನ್ ಬಾರಿಸಿದ ದಿನೇಶ್ ಕಾರ್ತಿಕ್ಗೆ ವಿಶ್ವಕಪ್ನಲ್ಲಿ ಸ್ಥಾನ? ಕೋಚ್ ಹೇಳಿದ್ದಿಷ್ಟು
ಈ ಮೊದಲಿನ ಟಿ20 ವಿಶ್ವಕಪ್ನಲ್ಲಿ ದಿನೇಶ್ ಕಾರ್ತಿಕ್ ಆಟ ಆಡಿದ್ದರು. ಆ ಬಳಿಕ ಅವರು ಮತ್ತೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ. ಈಗ ಅವರಿಗೆ ಮತ್ತೊಮ್ಮೆ ಸ್ಥಾನ ಸಿಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆರ್ಸಿಬಿ ಕೋಚ್ ಆ್ಯಂಡಿ ಫ್ಲವರ್ ಕೂಡ ದಿನೇಶ್ ಆಟವನ್ನು ಮೆಚ್ಚಿಕೊಂಡಿದ್ದಾರೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ರನ್ಗಳ ಮಹಾಪೂರವೇ ಹರಿದುಬಂತು. 288 ರನ್ಗಳ ಬೃಹತ್ ಟಾರ್ಗೆಟ್ ಬೆನ್ನು ಹತ್ತಿದ ಆರ್ಸಿಬಿಗೆ ದಿನೇಶ್ ಕಾರ್ತಿಕ್ ಬೆನ್ನೆಲುಬಾಗಿ ನಿಂತರು. 35 ಬಾಲ್ಗಳಿಗೆ ಅವರು 83 ರನ್ ಚಚ್ಚಿದರು. ಮಧ್ಯ ಕ್ರಮಾಂಕದ ಆಟಗಾರನಾಗಿ ಅವರು ಈ ರೀತಿಯ ಪರ್ಫಾರ್ಮೆನ್ಸ್ ನೀಡಿರುವುದರಿಂದ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅವರಿಗೆ ಟಿ20 ವಿಶ್ವಕಪ್ನಲ್ಲಿ ಸ್ಥಾನ ಸಿಗಬಹುದು ಎಂದು ಊಹಿಸಲಾಗುತ್ತಿದೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಈ ಮೊದಲಿನ ಟಿ20 ವಿಶ್ವಕಪ್ನಲ್ಲಿ ದಿನೇಶ್ ಕಾರ್ತಿಕ್ ಆಟ ಆಡಿದ್ದರು. ಆ ಬಳಿಕ ಅವರು ಮತ್ತೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ. ಈಗ ಅವರಿಗೆ ಮತ್ತೊಮ್ಮೆ ಸ್ಥಾನ ಸಿಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆರ್ಸಿಬಿ ಕೋಚ್ ಆ್ಯಂಡಿ ಫ್ಲವರ್ ಕೂಡ ದಿನೇಶ್ ಆಟವನ್ನು ಮೆಚ್ಚಿಕೊಂಡಿದ್ದಾರೆ. ‘ಟಿ20 ವಿಶ್ವಕಪ್ನಲ್ಲಿ ಸ್ಥಾನ ನೀಡಲೇಬೇಕು ಎನ್ನುವ ರೀತಿಯಲ್ಲಿ ಆಡುತ್ತಿದ್ದೀರಿ. ನೀವು ದಿನ ಕಳೆದಂತೆ ಉತ್ತಮವಾಗುತ್ತಿದ್ದೀರಿ’ ಎಂದಿದ್ದಾರೆ ಅವರು. ಇದನ್ನೂ ಓದಿ: ವಿಶ್ವಕಪ್ನಲ್ಲಿ ಸ್ಥಾನಪಡೆಯಲು ದಿನೇಶ್ ಕಾರ್ತಿಕ್ ಸ್ಫೋಟಕ ಆಟ? ಹಿಂಟ್ ಕೊಟ್ಟ ರೋಹಿತ್
ಬೆಂಗಳೂರು ಸ್ಟೇಡಿಯಂನಲ್ಲಿ ಎಲ್ಲರೂ ಡಿಕೆ ಡಿಕೆ ಎನ್ನುವ ಘೋಷಣೆ ಕೂಗಿದ್ದರು. ಕಾರ್ತಿಕ್ ಅವರು 5 ಫೋರ್ ಹಾಗೂ 7 ಸಿಕ್ಸ್ಗಳ ಸಹಾಯದಿಂದ 83 ರನ್ ಕಲೆ ಹಾಕಿದ್ದರು. ಅವರ ಸ್ಟ್ರೈಕ್ ರೇಟ್ 237.14 ಇದೆ. ಸದ್ಯ ವಿಶ್ವಕಪ್ನ ವಿಕೆಟ್ ಕೀಪರ್ ರೇಸ್ನಲ್ಲಿ ರಿಷಭ್ ಪಂತ್, ಇಶಾನ್ ಕಿಶನ್, ಧ್ರುವ್ ಜುರೇಲ್, ಸಂಜು ಸ್ಯಾಮ್ಸನ್ ಹಾಗೂ ಕೆಎಲ್ ರಾಹುಲ್ ಇದ್ದಾರೆ.
ಆರ್ಸಿಬಿ ಟ್ವೀಟ್
“Proud of the way we fought with the bat. We’ll have a think and come back stronger. Every game is a semi-final from here on”: Andy Flower#PlayBold #ನಮ್ಮRCB #IPL2024 #RCBvSRH pic.twitter.com/5riuzQNyjR
— Royal Challengers Bengaluru (@RCBTweets) April 16, 2024
ಈ ಬಾರಿ ಏಳು ಪಂದ್ಯಗಳನ್ನು ಆಡಿರೋ ಕಾರ್ತಿಕ್ ಅವರು 156 ರನ್ ಕಲೆ ಹಾಕಿದ್ದು, 194 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಹೀಗಾಗಿ ಅವರಿಗೆ ವಿಶ್ವಕಪ್ನಲ್ಲಿ ಆಡೋಕೆ ಚಾನ್ಸ್ ಇದೆ ಎನ್ನಲಾಗುತ್ತಿದೆ. ಈ ಮೊದಲು ರೋಹಿತ್ ಶರ್ಮಾ ಕೂಡ ಇದೇ ರೀತಿ ಹೇಳಿ ಕಾರ್ತಿಕ್ ಕಾಲೆಳೆದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ