ವಿಶ್ವಕಪ್ನಲ್ಲಿ ಸ್ಥಾನಪಡೆಯಲು ದಿನೇಶ್ ಕಾರ್ತಿಕ್ ಸ್ಫೋಟಕ ಆಟ? ಹಿಂಟ್ ಕೊಟ್ಟ ರೋಹಿತ್
ದಿನೇಶ್ ಕಾರ್ತಿಕ್ (Dinesh Karthik) ಅವರು ಐಪಿಎಲ್ನಲ್ಲಿ ಆರ್ಸಿಬಿ ತಂಡದ ಪರ ಆಟ ಆಡುತ್ತಿದ್ದಾರೆ. ಕಳೆದ ಸೀಸನ್ನಲ್ಲಿ ಅವರು ಉತ್ತಮವಾಗಿ ಆಡಿರಲಿಲ್ಲ. ಆದಾಗ್ಯೂ ಅವರಿಗೆ ಈ ವರ್ಷ ಚಾನ್ಸ್ ನೀಡಲಾಯಿತು. ಈ ಸೀಸನ್ನಲ್ಲಿ ಅವರು ಅದ್ಭುತ ಆಟ ಪ್ರದರ್ಶನ ನೀಡುತ್ತಿದ್ದಾರೆ. ದಿನೇಶ್ ಕಾರ್ತಿಕ್ ಸ್ಫೋಟಕ ಆಟ ಗಮನ ಸೆಳೆದಿದೆ. ಮುಂಬೈ ವಿರುದ್ಧದದ ಪಂದ್ಯದಲ್ಲಿ ಕೇವಲ 23 ಬಾಲ್ಗೆ 53 ರನ್ಗಳನ್ನು ಅವರು ಸಿಡಿಸಿದ್ದಾರೆ. ಇದರಲ್ಲಿ ಐದು ಫೋರ್ ಹಾಗೂ ನಾಲ್ಕು ಸಿಕ್ಸ್ ಇದೆ. ಅವರ ಸ್ಟ್ರೈಕ್ ರೇಟ್ […]
ದಿನೇಶ್ ಕಾರ್ತಿಕ್ (Dinesh Karthik) ಅವರು ಐಪಿಎಲ್ನಲ್ಲಿ ಆರ್ಸಿಬಿ ತಂಡದ ಪರ ಆಟ ಆಡುತ್ತಿದ್ದಾರೆ. ಕಳೆದ ಸೀಸನ್ನಲ್ಲಿ ಅವರು ಉತ್ತಮವಾಗಿ ಆಡಿರಲಿಲ್ಲ. ಆದಾಗ್ಯೂ ಅವರಿಗೆ ಈ ವರ್ಷ ಚಾನ್ಸ್ ನೀಡಲಾಯಿತು. ಈ ಸೀಸನ್ನಲ್ಲಿ ಅವರು ಅದ್ಭುತ ಆಟ ಪ್ರದರ್ಶನ ನೀಡುತ್ತಿದ್ದಾರೆ. ದಿನೇಶ್ ಕಾರ್ತಿಕ್ ಸ್ಫೋಟಕ ಆಟ ಗಮನ ಸೆಳೆದಿದೆ. ಮುಂಬೈ ವಿರುದ್ಧದದ ಪಂದ್ಯದಲ್ಲಿ ಕೇವಲ 23 ಬಾಲ್ಗೆ 53 ರನ್ಗಳನ್ನು ಅವರು ಸಿಡಿಸಿದ್ದಾರೆ. ಇದರಲ್ಲಿ ಐದು ಫೋರ್ ಹಾಗೂ ನಾಲ್ಕು ಸಿಕ್ಸ್ ಇದೆ. ಅವರ ಸ್ಟ್ರೈಕ್ ರೇಟ್ 230 ಇದೆ. ಸ್ಫೋಟಕ ಆಟ ನೋಡಿ ರೋಹಿತ್ ಶರ್ಮಾ ಅವರು ದಿನೇಶ್ ಕಾರ್ತಿಕ್ ಕಾಲೆಳೆದಿದ್ದಾರೆ.
ದಿನೇಶ್ ಕಾರ್ತಿಕ್ ಅವರು ಆರ್ಸಿಬಿ ತಂಡಕ್ಕೆ ಆಸರೆ ಆಗುತ್ತಿದ್ದಾರೆ. ಮುಂಬೈ ವಿರುದ್ಧ ಸ್ಫೋಟಕ ಆಟ ತೋರಿದ್ದಾರೆ. ನಿನ್ನೆ ಜಸ್ಪ್ರೀತ್ ಬೂಮ್ರಾ ಬೌಲಿಂಗ್ನಲ್ಲಿ ಸಿಕ್ಸ್ ಹೊಡೆದ ಏಕೈಕ ಆರ್ಸಿಬಿ ಆಟಗಾರ ಎನ್ನುವ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ನೋಡಿ ರೋಹಿತ್ ಶರ್ಮಾ ಕೂಡ ಮೆಚ್ಚಿಕೊಂಡಿದ್ದಾರೆ. ಅಲ್ಲದೆ, ಅವರ ಕಾಳೆಯುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ: ‘ಅವರೇ ಕಾರಣ’; ಸತತ ನಾಲ್ಕನೇ ಸೋಲಿನ ಬಳಿಕ ಆರ್ಸಿಬಿ ನಾಯಕ ಫಾಪ್ ದೂರಿದ್ದು ಯಾರನ್ನು?
‘ಕಾರ್ತಿಕ್ ತಲೆಯಲ್ಲಿ ವಿಶ್ವಕಪ್ ಓಡುತ್ತಿದೆ. ಅವರಿಗೆ ವಿಶ್ವಕಪ್ ಆಡಬೇಕು’ ಎಂದು ರೋಹಿತ್ ಹೇಳಿದ್ದಾರೆ. ಇದು ಸ್ಟಂಪ್ ಮೈಕ್ ಮೂಲಕ ಕೇಳಿಸಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೋಹಿತ್ ಹಾಗೂ ಕಾರ್ತಿಕ್ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇಬ್ಬರೂ ಖುಷಿಖುಷಿಯಿಂದ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: RCB: ಆರ್ಸಿಬಿ ಸೋಲಿಗೆ ಕಾರಣವಾಯ್ತಾ ಕಳಪೆ ಅಂಪೈರಿಂಗ್? ಇಲ್ಲಿದೆ ಸಾಕ್ಷಿ
ಆರ್ಸಿಬಿ 196 ರನ್ ಗಳಿಸಿದ ಹೊರತಾಗಿಯೂ ಅದು ತಂಡಕ್ಕೆ ಆಸರೆ ಆಗಿಲ್ಲ. ದಿನೇಶ್ ಕಾರ್ತಿಕ್ ಜೊತೆ ಫಾಪ್ ಡುಪ್ಲೆಸಿಸ್ ಹಾಗೂ ರಜತ್ ಪಟಿದಾರ್ ಕೂಡ ಅರ್ಧಶತಕ ಬಾರಿಸಿದ್ದರು. ಆದರೆ, ಮುಂಬೈ ಇಂಡಿಯನ್ಸ್ ಅವರು ಆರ್ಸಿಬಿ ಬೌಲರ್ಗಳ ಬೆವರಿಳಿಸಿದರು. ಕೇವಲ 15 ಓವರ್ 3 ಬಾಲ್ಗೆ 197 ರನ್ಗಳ ಟಾರ್ಗೆಟ್ ಚೇಸ್ ಮಾಡಿದರು. ಇಶನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:33 am, Fri, 12 April 24