ಆರ್‌ಸಿಬಿ ಇದುವರೆಗೆ ಲೀಗ್ನಲ್ಲಿ 6 ಪಂದ್ಯಗಳನ್ನು ಆಡಿದ್ದು, ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಎರಡು ಅಂಕಗಳೊಂದಿಗೆ ತಂಡವು 10 ತಂಡಗಳ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಈಗಾಗಲೇ 5 ಪಂದ್ಯಗಳಲ್ಲಿ ಸೋತಿರುವ ಆರ್‌ಸಿಬಿ ಈ ವರ್ಷ ಪ್ಲೇ ಆಫ್ ತಲುಪುವುದು ಕಷ್ಟ ಎಂದು ಹೇಳಲಾಗುತ್ತಿದೆ. ಅದಾಗ್ಯೂ ಆರ್‌ಸಿಬಿ ಪ್ಲೇ ಆಫ್ ಹಾದಿ ಈಗಲೂ ಜೀವಂತವಾಗಿದ್ದು, ಅದಕ್ಕಾಗಿ ತಂಡ ಎಷ್ಟು ಶ್ರಮಿಸಬೇಕು ಎಂಬ ವಿವರ ಹೀಗಿದೆ.