RCB: ಆರ್​ಸಿಬಿ ಸೋಲಿಗೆ ಕಾರಣವಾಯ್ತಾ ಕಳಪೆ ಅಂಪೈರಿಂಗ್? ಇಲ್ಲಿದೆ ಸಾಕ್ಷಿ

ಕೊನೆಯ ಓವರ್​ನಲ್ಲಿ ಸೊಂಟದ ಭಾಗಕ್ಕಿಂತ ಎತ್ತರ ಇದ್ದ ಬಾಲ್​ನ ಅಂಪೈರ್ ನೋ ಬಾಲ್ ನೀಡಲಿಲ್ಲ. ಇದನ್ನು ನೋಡಿ ವಿರಾಟ್ ಕೊಹ್ಲಿ ಕೂಡ ಅಸಮಾಧಾನ ಹೊರಹಾಕಿದರು. ಇನ್ನು, ಬೌಂಡರಿ ಹೋಗಿದ್ದನ್ನು ಕೊಡದೆ ಇರುವ ವಿಚಾರವೂ ಚರ್ಚೆ ಹುಟ್ಟುಹಾಕಿದೆ.

RCB: ಆರ್​ಸಿಬಿ ಸೋಲಿಗೆ ಕಾರಣವಾಯ್ತಾ ಕಳಪೆ ಅಂಪೈರಿಂಗ್? ಇಲ್ಲಿದೆ ಸಾಕ್ಷಿ
ಆರ್​ಸಿಬಿ ಸೋಲಿಗೆ ಕಾರಣವಾಯ್ತಾ ಕಳಪೆ ಅಂಪೈರಿಂಗ್?
Follow us
|

Updated on:Apr 12, 2024 | 10:05 AM

ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ (MI) ಹಾಗೂ ಆರ್​​ಸಿಬಿ ನಡುವಿನ ಪಂದ್ಯದಲ್ಲಿ ಆರ್​ಸಿಬಿಗೆ ಹೀನಾಯ ಸೋಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 196 ಮೊತ್ತ ಪೇರಿಸಿದರೂ ಗೆಲುವಿಗೆ ಅದು ಸಹಕಾರಿ ಆಗಿಲ್ಲ. ಈ ಮಧ್ಯೆ ಅಂಪೈರಿಂಗ್ ಬಗ್ಗೆ ಟೀಕೆ ವ್ಯಕ್ತವಾಗಿದೆ. ನಿತಿನ್ ಮೆನನ್ ಅವರು ತೆಗೆದುಕೊಂಡ ನಿರ್ಧಾರಗಳು ಪ್ರಶ್ನೆ ಹುಟ್ಟುಹಾಕಿದೆ. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರ್​ಸಿಬಿಯ ಆರಂಭ ಉತ್ತಮವಾಗಿರಲಿಲ್ಲ. ವಿರಾಟ್ ಕೊಹ್ಲಿ ಅವರು ಬೇಗನೆ ಔಟ್ ಆದರು. ಆ ಬಳಿಕ ರಜತ್ ಪಟಿದಾರ್, ಫಾಪ್ ಡುಪ್ಲೆಸಿಸ್ ಹಾಗೂ  ದಿನೇಶ್ ಕಾರ್ತಿಕ್ ಅರ್ಧ ಶತಕ ಸಿಡಿಸಿ ತಂಡಕ್ಕೆ ಆಸರೆ ಆದರು. ಈ ಮಧ್ಯೆ ಅಂಪೈರಿಂಗ್ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಅಂಪೈರ್​ಗಳು ತೆಗೆದುಕೊಂಡ ನಿರ್ಧಾರಗಳು ಮುಂಬೈ ಪರವಾಗಿತ್ತು ಎಂದು ಅನೇಕರು ಟೀಕೆ ಮಾಡಿದ್ದಾರೆ.

ಕೊನೆಯ ಓವರ್​ನಲ್ಲಿ ಸೊಂಟದ ಭಾಗಕ್ಕಿಂತ ಎತ್ತರ ಇದ್ದ ಬಾಲ್​ನ ಅಂಪೈರ್ ನೋ ಬಾಲ್ ನೀಡಲಿಲ್ಲ. ಇದನ್ನು ನೋಡಿ ವಿರಾಟ್ ಕೊಹ್ಲಿ ಕೂಡ ಅಸಮಾಧಾನ ಹೊರಹಾಕಿದರು. ಇನ್ನು, ಬೌಂಡರಿ ಹೋಗಿದ್ದನ್ನು ಕೊಡದೆ ಇರುವ ವಿಚಾರವೂ ಚರ್ಚೆ ಹುಟ್ಟುಹಾಕಿದೆ. ಫೀಲ್ಡರ್​ನ ದೇಹದ ಭಾಗ ಬೌಂಡರಿ ಗಡಿಗೆ ತಾಗಿತ್ತು. ಇದೇ ಸಂದರ್ಭದಲ್ಲಿ ಫೀಲ್ಡರ್​ ಬೌಲನ್​ ಸಂಪರ್ಕದಲ್ಲಿ ಇದ್ದ. ಆದಾಗ್ಯೂ ಇದನ್ನು ಬೌಂಡರಿ ಎಂದು ನೀಡಲಿಲ್ಲ.

ಇನ್ನು ಲೋಮ್ರರ್ ತಾವು ಫೇಸ್ ಮಾಡಿದ ಮೊದಲ ಬಾಲ್​ನಲ್ಲಿ ಎಲ್​ಬಿಡಬ್ಲ್ಯೂಗೆ ಬಲಿಯಾದರು. ಈ ಬಾಲ್ ಕೂಡ ಹೊರಗೆ ಹೋಗುತ್ತಾ ಇತ್ತು. ಆದಾಗ್ಯೂ ಅಂಪೈರ್ ಔಟ್ ನೀಡಿದ್ದರು. ನಂತರ ರಿವ್ಯೂ ತೆಗೆದುಕೊಂಡಾಗ ಸ್ಟಂಪ್​ಗೆ ಸ್ವಲ್ಪ ತಾಗುತ್ತಿದೆ ಎನ್ನುವ ಕಾರಣಕ್ಕೆ ಅಂಪೈರ್ ಕಾಲ್ ನೀಡಲಾಯಿತು.

ಇದನ್ನೂ ಓದಿ: ‘ಅವರೇ ಕಾರಣ’; ಸತತ ನಾಲ್ಕನೇ ಸೋಲಿನ ಬಳಿಕ ಆರ್​ಸಿಬಿ ನಾಯಕ ಫಾಪ್ ದೂರಿದ್ದು ಯಾರನ್ನು?

ಇನ್ನು, ಫಾಪ್​ ಡುಪ್ಲೆಸಿಸ್ ಹೊಡೆದ ಶಾಟ್ ಬ್ಯಾಟ್​ಗೆ ತಾಗದೆ ಕೀಪರ್ ಕೈ ಸೇರಿತು. ಅಂಪೈರ್ ಔಟ್ ನೀಡಿಲ್ಲ. ಹೀಗಾಗಿ, ಇಶಾನ್ ಕಿಶಾನ್ ಮೊದಲಾದವರು ಜೋರಾಗಿ ಅಂಪೈರ್ ಬಳಿ ಔಟ್ ನೀಡುವಂತೆ ಕೋರಿದರು. ಆಗ ಮುಂಬೈ ಇಂಡಿಯನ್ಸ್ ಅವರ ಎಲ್ಲಾ ರಿವ್ಯೂಗಳು ಮುಗಿದಿದ್ದವು. ಹೀಗಾಗಿ, ಅವರು ರಿವ್ಯೂ ಕೇಳುವಂಯೆ ಇರಲಿಲ್ಲ. ಈ ವೇಳೆ ಸ್ವತಃ ಅಂಪೈರ್ ಅವರು ಥರ್ಡ್​ ಅಂಪೈರ್​ಗೆ ರಿವ್ಯೂ ಕೇಳಿದರು. ಇದನ್ನು ಕೆಲವರು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:58 am, Fri, 12 April 24